For Quick Alerts
ALLOW NOTIFICATIONS  
For Daily Alerts

ಬಜೆಟ್ ನಿರೀಕ್ಷೆ: 600 ಅಂಕ ಜಿಗಿತ ಕಂಡ ಷೇರುಪೇಟೆ ಸೂಚ್ಯಂಕ

|

ಮುಂಬೈ, ಜನವರಿ 31: ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಬಾಕಿ ಇರುವಾಗ ಗುರುವಾರ ಸಂಜೆ ವೇಳೆಗೆ ಷೇರು ಪೇಟೆ ಸೂಚ್ಯಂಕದಲ್ಲಿ ಸುಧಾರಣೆ ಕಂಡುಬಂದಿದೆ.

ಗುರುವಾರ ಮಧ್ಯಾಹ್ನದ ನಂತರ ಎಸ್‌&ಪಿ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕ 601.21 ಅಂಕಗಳ ಹೆಚ್ಚಳದೊಂದಿಗೆ 36,192.46ಕ್ಕೆ ತಲುಪಿತು. ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ ನಿಫ್ಟಿ 161.75 ಅಂಕಗಳ ಏರಿಕೆಯೊಂದಿಗೆ 10,813.55ಕ್ಕೆ ಮುಟ್ಟಿದೆ.

ಚುನಾವಣೆ ಮುಂಚಿನ ಮಧ್ಯಂತರ ಬಜೆಟ್ಟಿನ ಮೇಲೆ ದೇಶದ ಕಣ್ಣು ಚುನಾವಣೆ ಮುಂಚಿನ ಮಧ್ಯಂತರ ಬಜೆಟ್ಟಿನ ಮೇಲೆ ದೇಶದ ಕಣ್ಣು

ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಜಿಎಐಎಲ್, ಎಚ್‌ಡಿಎಫ್‌ಸಿ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಸೆನ್ಸೆಕ್ಸ್ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದವು.

ಬಜೆಟ್ ನಿರೀಕ್ಷೆ: 600 ಅಂಕ ಜಿಗಿತ ಕಂಡ ಷೇರುಪೇಟೆ ಸೂಚ್ಯಂಕ

ತಂತ್ರಜ್ಞಾನಕ್ಕೆ ಸಂಬಂಧಿಸಿದ ಷೇರುಗಳ ವಹಿವಾಟಿನಲ್ಲಿಯೂ ಬೆಳವಣಿಗೆ ಕಂಡಿದೆ. ರೂಪಾಯಿ ಮೌಲ್ಯ ಡಾಲರ್ ಎದುರು 70ಕ್ಕೆ ತಲುಪಿ ಸುಧಾರಣೆಯಾಗಿತ್ತು. ಆದರೆ, ಮತ್ತೆ 71ಕ್ಕೆ ಕುಸಿಯಿತು.

ನಿಫ್ಟಿಯ ಐಟಿ ಸೂಚ್ಯಂಕ ಶೇ 1.5ರಷ್ಟು ಪ್ರಗತಿ ಸಾಧಿಸಿತು. ಇದರಲ್ಲಿ ಇನ್ಫೋಸಿಸ್ ಗರಿಷ್ಠ ಪಾಲು ಹೊಂದಿದೆ. ಟೆಕ್ ಮಹೀಂದ್ರ, ಎನ್‌ಐಐಟಿ ಟೆಕ್ನಾಲಜೀಸ್, ಟಿಸಿಎಸ್ ಮತ್ತು ವಿಪ್ರೋ ಮುಂತಾದ ಐಟಿ ಸಂಸ್ಥೆಗಳ ಷೇರು ಶೇ 1-3ರಷ್ಟು ಹೆಚ್ಚಳವಾಗಿದೆ.

ಬಜೆಟ್ 2019: ಟಿವಿ, ಎಸಿ, ಫ್ರೀಜ್ ಆಗಲಿದೆ ದುಬಾರಿ! ಯಾಕೆ ಗೊತ್ತಾ? ಬಜೆಟ್ 2019: ಟಿವಿ, ಎಸಿ, ಫ್ರೀಜ್ ಆಗಲಿದೆ ದುಬಾರಿ! ಯಾಕೆ ಗೊತ್ತಾ?

ಕೇಂದ್ರ ಸರ್ಕಾರ ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಹೂಡಿಕೆದಾರರು ಸಾಕಷ್ಟು ಸಕಾರಾತ್ಮಕ ಸುಧಾರಣೆಯ ನಿರೀಕ್ಷೆಯಲ್ಲಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಜೆಟ್ ಮುನ್ನಾದಿನದ ತಮ್ಮ ಭಾಷಣದಲ್ಲಿ ರೈತರು, ಬಡವರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಗಮನ ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನು ನಾಳಿನ ಬಜೆಟ್‌ನ ಸುಳಿವು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಮ ವರ್ಗ ಮತ್ತು ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡುವ ಬಜೆಟ್ ಬಳಕೆಯನ್ನು ಮತ್ತು ಆಂತರಿಕ ಉಳಿತಾಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

English summary

interim union budget 2019 stock market bounce in sensex and nifty

Domestic stock markets gains strength on Thursday afternoon before the day of Interim union Budget.
Story first published: Thursday, January 31, 2019, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X