For Quick Alerts
ALLOW NOTIFICATIONS  
For Daily Alerts

ಮಧ್ಯಂತರ ಬಜೆಟ್ ನಿರೀಕ್ಷೆ: ಗೃಹಸಾಲ ಬಡ್ಡಿದರ ಇಳಿಕೆ ಸಾಧ್ಯತೆ?

|

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶುಕ್ರವಾರದಂದು ತನ್ನ ಕೊನೆಯ ಬಜೆಟ್ ಮಂಡನೆ ಮಾಡಲಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯ ಪೀಡಿತರಾಗಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ವಿತ್ತ ಸಚಿವರ ರೂಪದಲ್ಲಿ ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 1ರಂದು ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.

 

ಮಧ್ಯಂತರ ಕೇಂದ್ರ ಬಜೆಟ್ಟಿನ ಎಲ್ಲ ವಿವರಗಳನ್ನು ಲೈವ್ ಅಪ್ಡೇಟ್ಸ್ ಮೂಲಕ ಒನ್ಇಂಡಿಯಾ ಕನ್ನಡ ಮತ್ತು ಗುಡ್ ರಿಟರ್ನ್ಸ್ ಕನ್ನಡ ಓದುಗರಿಗೆ ಶುಕ್ರವಾರ ನೀಡಲಿದೆ.

 

ಜನವರಿ 01ರಿಂದ ಯಾವೆಲ್ಲ ಸಾಮಗ್ರಿಗಳ ಬೆಲೆ ಇಳಿಕೆ, ಪಟ್ಟಿ ನೋಡಿ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಸೋಲಿನಿಂದ ಬಿಜೆಪಿ ಎಚ್ಚೆತ್ತುಕೊಂಡು, ಸಾರ್ವಜನಿಕರಿಗೆ ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ. ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ ಇದು ಚುನಾವಣಾ ಬಜೆಟ್ ಆಗಿ ಜನಪ್ರಿಯ ಘೋಷಣೆಗಳಿಗೆ ಸೀಮಿತವಾಗುವ ಸಾಧ್ಯತೆ ಹೆಚ್ಚಿದೆ.

ಮಧ್ಯಂತರ ಬಜೆಟ್ ನಿರೀಕ್ಷೆ: ಗೃಹಸಾಲ ಬಡ್ಡಿದರ ಇಳಿಕೆ ಸಾಧ್ಯತೆ?

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅನುಕೂಲವಾಗುವಂತೆ ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ ಹಾಗೂ ಮನೆಗಳ ಖರೀದಿ ಮೇಲೆ ಶೇ 5 ರಷ್ಟು ಜಿಎಸ್​ಟಿ ಕಡಿತ ಮಾಡುವ ನಿರ್ಧಾರ ಪ್ರಕಟಿಸಿದ್ದಲ್ಲಿ ಫ್ಲಾಟ್ ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗುವ ಸಾಧ್ಯತೆಯಿದೆ.

ಬಜೆಟ್ 2019: ನೀವು ನಿರೀಕ್ಷೆ ಮಾಡಬಹುದಾದ 5 ತೆರಿಗೆ ವಿನಾಯಿತಿಗಳ ಪಟ್ಟಿ ಇಲ್ಲಿದೆ.. ಬಜೆಟ್ 2019: ನೀವು ನಿರೀಕ್ಷೆ ಮಾಡಬಹುದಾದ 5 ತೆರಿಗೆ ವಿನಾಯಿತಿಗಳ ಪಟ್ಟಿ ಇಲ್ಲಿದೆ..

ಇದಕ್ಕೆ ಪೂರಕವಾಗಿ ಮನೆ, ಫ್ಲಾಟ್, ಅಪಾರ್ಟ್ಮೆಂಟ್ ಗಳನ್ನು ಖರೀದಿಸುವವರಿಗೆ ಶುಭ ಸುದ್ದಿ ನೀಡುವ ನಿರೀಕ್ಷೆಯಿದೆ. ಹೆಚ್ಚು ಇಎಂಐ ಹಾಗೂ ಸರಿಯಾದ ಸಮಯಕ್ಕೆ ಮನೆ ಸಿಗದ ಕಾರಣ ಈ ಕ್ಷೇತ್ರದ ಪ್ರಗತಿ ಕುಂಠಿತವಾಗಿದೆ. ಹೀಗಾಗಿ, ಹಾಲಿ ಬಡ್ಡಿದರ 2 ಲಕ್ಷ ರು ನಿಂದ 3 ಲಕ್ಷ ರು ಗೇರಿಸುವ ನಿರೀಕ್ಷೆಯಿದೆ. ಆದರೆ, 5 ಲಕ್ಷ ರು ಗೇರಿಸ ಬೇಡಿಕೆ ಇದೆ. ಇದರಿಂದ ವೃತ್ತಿಪರರ ತೆರಿಗೆದಾರರಿಗೂ ಅನುಕೂಲವಾಗಲಿದೆ.

80ಸಿ ಅಡಿಯಲ್ಲಿ ಇರುವ ತೆರಿಗೆ ವಿನಾಯಿತಿ ಮಿತಿ 1 ಲಕ್ಷ ರು ನಿಂದ 1.5 ಲಕ್ಷ ರು ಗೇ ಏರಿಸಲಾಗಿದೆ. ತೆರಿಗೆ ವಿನಾಯಿತಿ ಹೆಚ್ಚಳ ಮಾಡಿದರೆ ತೆರಿಗೆದಾರರಿಗೆ, ಮನೆ ಖರೀದಿದಾರರಿಗೆ ಹೆಚ್ಚಳ ಅನುಕೂಲವಾಗುವ ನಿರೀಕ್ಷೆಯಿದೆ.

English summary

Union Budget 2019: Will your home loan finally become cheaper?

Union Budget 2019: Home buyers will be looking at some relief in terms of interest paid on home loan. Among other crucial decisions that Goyal could dole out for the middle class, affordable housing is the most important considering that housing remains the top priority for all Indians.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X