ಕೇಂದ್ರ ಮಧ್ಯಂತರ ಬಜೆಟ್ 2019: ಸಣ್ಣ ರೈತರಿಗೆ ಆರ್ಥಿಕ ನೆರವಿನ ಕೊಡುಗೆ ಘೋಷಣೆ

ನವದೆಹಲಿ, ಪೆಬ್ರವರಿ 1: ಸಣ್ಣ ರೈತರಿಗೆ ಅಲ್ಪ ಮಟ್ಟಿಗಿನ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ರೈತರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಘೋಷಿಸಿರುವ ಮಧ್ಯಂತರ ಹಣಕಾಸು ಸಚಿವ ಪಿಯೂಶ್ ಗೋಯಲ್, ಈ ಯೋಜನೆ ಮೂಲಕ ಸಣ್ಣ ಹಿಡುವಳಿದಾರರಿಗೆ ಹಣಕಾಸಿನ ನೆರವು ಒದಗಿಸುವ ಯೋಜನೆಯನ್ನು ಪ್ರಕಟಿಸಿದರು.

ಎರಡು ಹೆಕ್ಟೇರ್ ಮತ್ತು ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ನಗದು ನೇರವಾಗಿ ಖಾತೆಗೆ ವರ್ಗಾವಣೆ ಆಗುತ್ತದೆ. ಡಿಸೆಂಬರ್ 2018ರಿಂದಲೇ ಈ ಯೋಜನೆ ಅನ್ವಯವಾಗಲಿದೆ.

ಕೇಂದ್ರ ಮಧ್ಯಂತರ ಬಜೆಟ್ 2019: ಸಣ್ಣ ರೈತರಿಗೆ ಆರ್ಥಿಕ ನೆರವಿನ ಕೊಡುಗೆ

ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿ ಹಣ ರೈತರ ಖಾತೆಗಳಿಗೆ ಜಮೆ ಆಗಲಿದೆ. ಇದರಿಂದ 12 ಕೋಟಿ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ 75,000 ಕೋಟಿ ಮೀಸಲಿಡಲಾಗುವುದು ಎಂದು ಗೋಯಲ್ ತಿಳಿಸಿದ್ದಾರೆ.

ರೈತರ ಕಲ್ಯಾಣ ಮತ್ತು ಅವರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದ ಎಲ್ಲ 22 ಬೆಳೆಗಳಿಗೆ 1.5ರಷ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+