For Quick Alerts
ALLOW NOTIFICATIONS  
For Daily Alerts

Interim Union Budget 2019: ರೈತ, ಕಾರ್ಮಿಕ, ಮಧ್ಯಮವರ್ಗಕ್ಕೆ ಸಿಹಿಸುದ್ದಿ

|

ನವದೆಹಲಿ, ಫೆಬ್ರವರಿ 01: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಅನ್ನು ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಶುಕ್ರವಾರ(ಫೆ.01) ಮಂಡಿಸಿದ್ದಾರೆ.

 

ಅನಾರೋಗ್ಯದಿಂದಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಖಾತೆಯ ಹೊಣೆಗಾರಿಕೆಯನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಕಳೆದ ವಾರವೇ ತಾತ್ಕಾಲಿಕವಾಗಿ ವರ್ಗಾಯಿಸಲಾಗಿತ್ತು.

 

ಮಧ್ಯಂತರ ಬಜೆಟ್ ನಿರೀಕ್ಷೆ: ಗೃಹಸಾಲ ಬಡ್ಡಿದರ ಇಳಿಕೆ ಸಾಧ್ಯತೆ?ಮಧ್ಯಂತರ ಬಜೆಟ್ ನಿರೀಕ್ಷೆ: ಗೃಹಸಾಲ ಬಡ್ಡಿದರ ಇಳಿಕೆ ಸಾಧ್ಯತೆ?

ಇದೇ ಏಪ್ರಿಲ್-ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದ್ದರಿಂದ, ಮಧ್ಯಮ ವರ್ಗದ ಜನರಿಗೆ ಭರಪೂರ ಕೊಡಗೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು.ಅಂತೆಯೇ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ನಿಂದ 5 ಲಕ್ಷಕ್ಕೇರಿಸಿ ಕೇಂದ್ರ ಸರ್ಕಾರ ಮಧ್ಯಮ ವರ್ಗಕ್ಕೆ ಸಿಹಿ ಸುದ್ದಿ ನೀಡಿದೆ.

Interim Union Budget 2019: ರೈತ, ಮಧ್ಯಮವರ್ಗಕ್ಕೆ ಸಿಹಿಸುದ್ದಿ

ಬಜೆಟ್ 2019: ಟಿವಿ, ಎಸಿ, ಫ್ರೀಜ್ ಆಗಲಿದೆ ದುಬಾರಿ! ಯಾಕೆ ಗೊತ್ತಾ?ಬಜೆಟ್ 2019: ಟಿವಿ, ಎಸಿ, ಫ್ರೀಜ್ ಆಗಲಿದೆ ದುಬಾರಿ! ಯಾಕೆ ಗೊತ್ತಾ?

ಆದಾಯ ತೆರಿಗೆ ಸ್ಲ್ಯಾಬ್ , ಜಿಎಸ್ಟಿ ಸ್ಲ್ಯಾಬ್ ನಲ್ಲಿ ಮಹತ್ವದ ಬದಲಾವಣೆಯಾಗಬಹುದು ಎಂದು ಜನಸಾಮಾನ್ಯರು ಕಾತರದಿಂದ ಕಾಯುತ್ತಿದ್ದರು. ಆದರೆ ಅದರಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿರುವುದರಿಂದ ಮೋದಿ ಸರ್ಕಾರ ಈ ಬಜೆಟ್ ಅನ್ನು ಜನತೆಯ ಓಲೈಕೆಗೆ ಬಳಸಿದೆ ಎಂಬ ಮಾತು ಕೇಳಿಬಂದಿದೆ. ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಷೇರು ಪೇಟೆ ಸೂಚ್ಯಂಕವೂ ಏರಿದೆ!

ಬಜೆಟ್ ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಗುಡ್ ರಿಟರ್ನ್ಸ್ ಕನ್ನಡ ಮತ್ತು ಒನ್ ಇಂಡಿಯಾ ಕನ್ನಡ ನೀಡಲಿದೆ.

English summary

Interim Union Budget 2019 LIVE coverage

Interim Union Budget 2019 LIVE coverage in Kannada. The budget will be presented by union minister for Railways Piyush Goyal in the absence of finance minister Arun Jaitley. Farmers, rural people, small businessmen, tax payers expecting goodies in the last budget before Lok Sabha Elections 2019.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X