For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಮಿತಿ ಏರಿಕೆ: ಟ್ವಿಟ್ಟಿಗರ ಸಂಭ್ರಮ

|

ನವದೆಹಲಿ, ಫೆಬ್ರವರಿ 1: ನರೇಂದ್ರ ಮೋದಿ ಸರ್ಕಾರ ಶುಕ್ರವಾರ ಮಂಡಿಸಿದ ಮಧ್ಯಂತರ ಬಜೆಟ್ ಮಧ್ಯಮ ವರ್ಗದ ದುಡಿಯುವ ವರ್ಗಕ್ಕೆ ಖುಷಿ ನೀಡಿದೆ.

ದೇಶದ ಬಹುಸಂಖ್ಯೆಯ ಮಧ್ಯಮ ವರ್ಗದ ಜನತೆ ಹಲವು ವರ್ಷಗಳಿಂದ ಬಯಸಿದ್ದ ಆದಾಯ ತೆರಿಗೆ ಮಿತಿಯ ಏರಿಕೆಯ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿಲ್ಲ.

ಆದಾಯ ತೆರಿಗೆ ಪಾವತಿಯ ಮಿತಿಯನ್ನು 2.50 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಅಲ್ಲದೆ, ಆದಾಯದ ಮೇಲಿನ ಉಳಿತಾಯದ ಮಿತಿ 1.50 ಲಕ್ಷವೂ ಇದಕ್ಕೆ ಸೇರಿಕೊಳ್ಳುವುದರಿಂದ ಮ್ಯೂಚುವಲ್ ಫಂಡ್, ವಿಮೆ, ಗೃಹಸಾಲ ಮುಂತಾದವುಗಳ ಮಾಹಿತಿ ಒದಗಿಸುವುದರ ಮೂಲಕ ಒಟ್ಟಾರೆ 6.5 ಲಕ್ಷದವರೆಗೂ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ.

ರೈಲ್ವೆ ಬಜೆಟ್ 2019ರ ಮುಖ್ಯಾಂಶಗಳು: ರೈಲ್ವೆಗೆ ಹೆಚ್ಚಿನದೇನಿಲ್ಲ ರೈಲ್ವೆ ಬಜೆಟ್ 2019ರ ಮುಖ್ಯಾಂಶಗಳು: ರೈಲ್ವೆಗೆ ಹೆಚ್ಚಿನದೇನಿಲ್ಲ

ಇದು ಸಹಜವಾಗಿಯೇ ಮಧ್ಯಮ ವರ್ಗದ ಜನರಿಗೆ ಸಂತಸ ನೀಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಕೇಂದ್ರದ ಆರ್ಥಿಕ ನೀತಿಗಳನ್ನು ವಿರೋಧಿಸುವ ಅನೇಕರು ಇದಕ್ಕೆ ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ.

ಜೋಶ್ ಹೇಗಿದೆ?

ಐದು ಲಕ್ಷದವರೆಗೂ ಆದಾಯ ತೆರಿಗೆ ಸಂಪೂರ್ಣ ವಿನಾಯಿತಿ. ಜೋಶ್ ಹೇಗಿದೆ? ತುಂಬಾ ಜೋರಾಗಿದೆ ಸರ್! ಎಂದು ಸಂದೀಪ್ ಪಾಟೀಲ್ ಎಂಬುವವರು ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದ ಜೋಶ್ ಪದವನ್ನು ಬಳಸಿ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ 'ಮಧ್ಯಮವರ್ಗದವರ ಮಧ್ಯಮವರ್ಗದ ಪ್ರಧಾನಿ' ಎಂದು ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.

Interim Union Budget 2019 LIVE:5 ಲಕ್ಷದವರೆಗೆ ತೆರಿಗೆ ವಿನಾಯಿತಿ Interim Union Budget 2019 LIVE:5 ಲಕ್ಷದವರೆಗೆ ತೆರಿಗೆ ವಿನಾಯಿತಿ

ಬೆಸ್ಟ್ ಬಜೆಟ್

ಐದು ಲಕ್ಷ ಆದಾಯ ತೆರಿಗೆ ವಿನಾಯಿತಿ.
1.5 ಲಕ್ಷ 80 ಕೋಟಿ
50 ಸಾವಿರ ಸ್ಟಾಂಡರ್ಡ್ ಡಿಡಕ್ಷನ್
ಮೂಲತಃ ನೀವು ಏಳು ಲಕ್ಷದವರೆಗೂ ನೀವು ತೆರಿಗೆ ಕಟ್ಟಬೇಕಾಗಿಲ್ಲ. ಗ್ರಾಮೀಣ ಮತ್ತು ನಗರದ ಮತದಾರರ ಪರ ಕಾಳಜಿ ತೋರುವ ಮೋದಿ ಸರ್ಕಾರದ ಈ 2019ರ ಬಜೆಟ್ ಅತ್ಯುತ್ತಮವಾಗಿದೆ ಎಂದು ರಿಷಿ ಬಗ್ರಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ!ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ!

ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ!

ಆದಾಯ ತೆರಿಗೆ ಮಿತಿಯನ್ನು ಇಳಿಸಿದ್ದಕ್ಕೆ ಕಾಂಗ್ರೆಸ್ ಗುಲಾಮರು ನಾವು ಆದಾಯ 2.5 ಲಕ್ಷಕ್ಕಿಂತ ಹೆಚ್ಚಿದ್ದರೆ ಶೇ 5ರಷ್ಟು ತೆರಿಗೆ ನೀಡಿ ಪ್ರತಿಭಟನೆ ನಡೆಸುತ್ತೇವೆ ಎನ್ನುತ್ತಾರೆ. ಫಾಸಿಸ್ಟ್ ಮೋದಿ ವಿರುದ್ಧ ಪ್ರತಿಭಟನೆ ನಡೆಸಲು ಇದು ಅವರ ಮಾರ್ಗವಾಗಿದೆ ಎಂದು ಅಶು ಎಂಬುವವರು ಲೇವಡಿ ಮಾಡಿದ್ದಾರೆ.

ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ

ಮೊದಲ ಬಾರಿಗೆ ಪರಿಗಣನೆ

ನನ್ನ ಜೀವಿತಾವಧಿಯಲ್ಲಿ ನೆನಪಿರುವಂತೆ ತೆರಿಗೆ ಪಾವತಿಸುವ ಮಧ್ಯಮ ವರ್ಗದವರನ್ನು ಸರ್ಕಾರ ಮೊದಲ ಬಾರಿಗೆ ಪರಿಗಣಿಸಿದೆ. ಬೃಹತ್ ಆದಾಯ ತೆರಿಗೆ ವಿನಾಯಿತಿ ಬಹುದೊಡ್ಡ ನಿರಾಳತೆ ನೀಡಿದೆ. ಅಲ್ಲದೆ, ಮಧ್ಯಮ ವರ್ಗದ ಜನತೆ ನೀಡಿದ ಕೊಡುಗೆಯನ್ನು ವಿವರಿಸುವ ಮಾತುಗಳು ಮನಗಾಣುವಂಥದ್ದು ಎಂದು ಕಾಂಚನ್ ಗುಪ್ತಾ ಎಂಬುವವರು ಶ್ಲಾಘಿಸಿದ್ದಾರೆ.

English summary

Interim Union Budget 2019 piyush goyal income tax exemption twitter reactions

Interim Union Budget: union minister Piyush Goyal announced income tax exemption up to Rs 5 lakhs. Here is the what twitterians says about this
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X