For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ: ಫೆಬ್ರವರಿಯಲ್ಲಿ ನೌಕರರ ಕನಿಷ್ಠ ವೇತನ 26 ಸಾವಿರಕ್ಕೆ ಏರಿಕೆ?

ನರೇಂದ್ರ ಮೋದಿ ಸರ್ಕಾರ ಉದ್ಯೋಗಿಗಳ ಕನಿಷ್ಠ ವೇತನ ಹೆಚ್ಚಳ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ನ್ಯಾಷನಲ್ ಜಾಯಿಂಟ್ ಕೌನ್ಸಿಲ್ ಆಫ್ ಆಕ್ಷನ್ ಮುಖ್ಯಸ್ಥ ಶಿವ ಗೋಪಾಲ ಹೇಳಿದ್ದಾರೆ.

|

ನರೇಂದ್ರ ಮೋದಿ ಸರ್ಕಾರ ಉದ್ಯೋಗಿಗಳ ಕನಿಷ್ಠ ವೇತನ ಹೆಚ್ಚಳ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ನ್ಯಾಷನಲ್ ಜಾಯಿಂಟ್ ಕೌನ್ಸಿಲ್ ಆಫ್ ಆಕ್ಷನ್ ಮುಖ್ಯಸ್ಥ ಶಿವ ಗೋಪಾಲ ಹೇಳಿದ್ದಾರೆ.

 

ಕೇಂದ್ರ ಸರ್ಕಾರ ಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರನ್ನು ಸೆಳೆಯಲು ಮುಂದಾಗಿದ್ದು, ಫೆ.1ರಂದು ಮಂಡನೆಯಾದ ಮಧ್ಯಂತರ ಬಜೆಟ್ ನಲ್ಲಿ ಹಣಕಾಸು ಸಚಿವ ಪಿಯೂಷ್ ಗೋಯಲ್, ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಘೋಷಿಸಿದ್ದರು.

ಕನಿಷ್ಠ ವೇತನ ಏರಿಕೆ

ಕನಿಷ್ಠ ವೇತನ ಏರಿಕೆ

ಪ್ರಸ್ತುತ ಕೇಂದ್ರ ನೌಕರರು ರೂ. 18 ಸಾವಿರ ಕನಿಷ್ಠ ವೇತನ ಪಡೆಯುತ್ತಿದ್ದಾರೆ. ರೂ. 8000 ಹೆಚ್ಚಳಕ್ಕೆ ನೌಕರರು ಬೇಡಿಕೆಯಿಟ್ಟಿದ್ದಾರೆ. 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಂಡರೆ ಕೇಂದ್ರ ನೌಕರರ ಈಗಿನ ಕನಿಷ್ಠ ವೇತನವಾದ ರೂ. 18,000 ದಿಂದ ರೂ. 26,000 ಕ್ಕೆ ಏರಿಕೆಯಾಗಲಿದೆ. ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..

ಲೋಕಸಭಾ ಚುನಾವಣೆ ಹಿನ್ನೆಲೆ

ಲೋಕಸಭಾ ಚುನಾವಣೆ ಹಿನ್ನೆಲೆ

ದೇಶದಾದ್ಯಂತ ಲೋಕಸಭಾ ಚುನಾವಣೆ ಕಾವು ಜೋರಾಗಿ ಇರುವುದರಿಂದ ನರೇಂದ್ರ ಮೋದಿಯವರ ಸರ್ಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ನಿರೀಕ್ಷೆ ಗರಿಗೆದರಿದೆ.

ಈ ತಿಂಗಳಲ್ಲೇ ನಿರ್ಧಾರ ಹೊರಬೀಳುವುದೇ?
 

ಈ ತಿಂಗಳಲ್ಲೇ ನಿರ್ಧಾರ ಹೊರಬೀಳುವುದೇ?

2019ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವೇತನ ಹೆಚ್ಚಳ ಘೋಷಿಸಲಾಗುವುದು ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿವೆ. ೭ನೇ ವೇತನ ಆಯೋಗ ಜಾರಿ ಮಾಡುವ ನಿರ್ಧಾರವನ್ನು ಈ ತಿಂಗಳಿನಲ್ಲಿ ತೆಗೆದುಕೊಳ್ಳಲಾಗುವುದು ಎನ್ನುವುದು ವಿಶ್ಲೇಷಕರ ಅಭಿಮತ. ಆದಾಗ್ಯೂ, ಈ ನಿಟ್ಟಿನಲ್ಲಿ ಯಾವುದೇ ದೃಢೀಕೃತ ಮಾಹಿತಿ ಇಲ್ಲ.

ಬಿಜೆಪಿ ಮೇಲೆ ಪರಿಣಾಮ

ಬಿಜೆಪಿ ಮೇಲೆ ಪರಿಣಾಮ

ಚುನಾವಣೆ ಹಿನ್ನೆಲೆಯಲ್ಲಿ ತುಂಬಾ ಸಂಖ್ಯೆಯಲ್ಲಿರುವ ಕೇಂದ್ರ ನೌಕರರನ್ನು ನಿರಾಶೆ ಮಾಡಲು ಸರ್ಕಾರ ಇಷ್ಟಪಡುವುದಿಲ್ಲ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕೇಂದ್ರ ನೌಕರರ ಸಂಖ್ಯೆ ದೊಡ್ಡದಾಗಿದ್ದು, ಇದು ಆಡಳಿತ ಬಿಜೆಪಿ ಭವಿಷ್ಯದ ಮೇಲೆ ಸಕಾರಾತ್ಮಕ ಅಥವಾ ಋಣಾತ್ಮಕ ಪ್ರಭಾವವನ್ನು ಬೀರಬಹುದು ಎಂದು ಶಿವ ಗೋಪಾಲ ಹೇಳಿದ್ದಾರೆ.

ಹಣದುಬ್ಬರ, ಖಜಾನೆ ಮೇಲೆ ಪ್ರಭಾವ

ಹಣದುಬ್ಬರ, ಖಜಾನೆ ಮೇಲೆ ಪ್ರಭಾವ

ನೌಕರರ ಬೇಡಿಕೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೆ ಉಂಟಾಗುವ ಪರಿಣಾಮವನ್ನು ಗಮನಿಸಬೇಕು. ಇದು ಹಣದುಬ್ಬರ, ರಾಜ್ಯದ ಖಜಾನೆ ಮತ್ತು ಇತರರ ಮೇಲೆ ಪರಿಣಾಮ ಬೀರಲಿದೆ. ಉದ್ಯೋಗಿಗಳ ಬೇಡಿಕೆ ಮೋದಿ ಸರ್ಕಾರ ಪರಿಗಣಿಸಬಹುದು. ಆದರೆ ರಾಜ್ಯ ಖಜಾನೆ ಮೇಲಿನ ಹೊರೆ ಭಾರೀ ಪ್ರಮಾಣದಲ್ಲಿರುವುದರಿಂದ ತಾಳ್ಮೆ ಇಟ್ಟುಕೊಳ್ಳಬೇಕು ಎಂದು ಅರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ.

English summary

7th Pay Commission: Rs 26000 Minimum Pay Hike In February?

National Joint Council of Action, Shiv Gopal Mishra confirmed that the Modi government is serious and is considering a hike in the minimum pay of the Central government employees.
Story first published: Thursday, February 7, 2019, 10:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X