For Quick Alerts
ALLOW NOTIFICATIONS  
For Daily Alerts

ಆಧಾರ್-ಪ್ಯಾನ್ ಜೋಡಣೆಯಾಗದಿದ್ದರೆ ಐಟಿ ರಿಟರ್ನ್ ಸಲ್ಲಿಕೆ ಸಾಧ್ಯವಿಲ್ಲ

|

ನವದೆಹಲಿ, ಫೆಬ್ರವರಿ 7: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಪ್ಯಾನ್ ಮತ್ತು ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ ಅನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದೆ.

ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಲ್ಲವೆ..? ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಲ್ಲವೆ..?

ಆಧಾರ್ ಮತ್ತು ಪ್ಯಾನ್ ಸಂಖ್ಯೆಗಳನ್ನು ಜೋಡಣೆ ಮಾಡದೆಯೇ 2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಶ್ರೇಯಾ ಸೇನ್ ಮತ್ತು ಜಯಶ್ರೀ ಸತ್ಪುಟೆ ಅವರಿಗೆ ಅನುಮತಿ ನೀಡಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ.

ಆಧಾರ್-ಪ್ಯಾನ್ ಜೋಡಣೆಯಾಗದಿದ್ದರೆ ಐಟಿ ರಿಟರ್ನ್ ಸಲ್ಲಿಕೆ ಸಾಧ್ಯವಿಲ್ಲ

'ಆಧಾರ್-ಪ್ಯಾನ್ ಜೋಡಣೆ ವಿಚಾರವು ಈ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಉಳಿದಿದೆ ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸುವ ಸಂದರ್ಭದಲ್ಲಿ ಉಲ್ಲೇಖಿಸಿತ್ತು. ಈಗ ಈ ವಿವಾದವನ್ನು ಕೋರ್ಟ್ ಬಗೆಹರಿಸಿದೆ ಮತ್ತು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ ನಿಯಮಗಳನ್ನು ಎತ್ತಿಹಿಡಿದೆ. ಹೀಗಾಗಿ ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡುವುದು ಕಡ್ಡಾಯ' ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಆಧಾರ್ ಬಯೊಮೆಟ್ರಿಕ್ ಲಾಕ್/ಅನ್‌ಲಾಕ್ ಮಾಡುವುದು ಹೇಗೆ? ಆಧಾರ್ ಬಯೊಮೆಟ್ರಿಕ್ ಲಾಕ್/ಅನ್‌ಲಾಕ್ ಮಾಡುವುದು ಹೇಗೆ?

2018-19ನೇ ಸಾಲಿನ ಲೆಕ್ಕಪತ್ರ ಸಲ್ಲಿಕೆ ವೇಳೆ ಇಬ್ಬರು ಅರ್ಜಿದಾರರು ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತು.

2019-20ನೇ ಸಾಲಿನ ತೆರಿಗೆ ವರ್ಷದಿಂದ ಈ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿಯೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತು.

ಸುಪ್ರೀಕೋರ್ಟ್ ತೀರ್ಪು: ಆಧಾರ್ ಯಾವುದಕ್ಕೆ ಕಡ್ಡಾಯ, ಯಾವುದಕ್ಕೆ ಕಡ್ಡಾಯವಲ್ಲಸುಪ್ರೀಕೋರ್ಟ್ ತೀರ್ಪು: ಆಧಾರ್ ಯಾವುದಕ್ಕೆ ಕಡ್ಡಾಯ, ಯಾವುದಕ್ಕೆ ಕಡ್ಡಾಯವಲ್ಲ

'ನ್ಯಾಯಾಲಯದ ಆದೇಶವಿದ್ದರೂ ಮತ್ತು ಅನೇಕ ಬಾರಿ ಪ್ರಯತ್ನಿಸಿದ್ದರೂ ಐಟಿಆರ್ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ವೆಬ್‌ಸೈಟ್‌ನಲ್ಲಿ ಇ-ಫೈಲಿಂಗ್ ಮಾಡುವಾಗ ಆಧಾರ್ ಅಥವಾ ಆಧಾರ್ ನೋಂದಣಿ ಸಂಖ್ಯೆ ಒದಗಿಸುವುದನ್ನು ಬಿಟ್ಟುಬಿಡುವ ಆಯ್ಕೆಯೇ ನೀಡಿಲ್ಲ' ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ಆರೋಪಿಸಿದ್ದರು.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆಧಾರ್ ಕುರಿತು ಮಹತ್ವದ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಮೊಬೈಲ್ ಸಿಮ್ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂದು ಹೇಳಿತ್ತು.

English summary

Supreme court said linking of PAN card with Aadhaar is mandatory for filling income tax returns

The Supreme Court has said linking of PAN card with Aadhaar Card is mandatory for filling Income Tax Returns. It upheld the section 139AA of the Income Tax Act.
Story first published: Thursday, February 7, 2019, 12:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X