For Quick Alerts
ALLOW NOTIFICATIONS  
For Daily Alerts

ಮಾತೃಶ್ರೀ ಯೋಜನೆ ಸಹಾಯಧನ ದುಪ್ಪಟ್ಟು, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಕೆ

ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯ ಫಲಾನುಭವಿಗಳಿಗೆ ಡಬಲ್ ಧಮಾಕಾ! ಇಂದಿನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಎಚ್. ಡಿ ಕುಮಾರಸ್ವಾಮಿಯವರು ಮಾತೃಶ್ರೀ ಯೋಜನೆಯ ಮಾಸಿಕ ಧನವನ್ನು ಹಿಂದಿನ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಹೆಚ್ಚಿಸುವುದಾಗಿ ಘೋಷಣೆ.

|

ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯ ಫಲಾನುಭವಿಗಳಿಗೆ ಡಬಲ್ ಧಮಾಕಾ! ಇಂದಿನ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಎಚ್. ಡಿ ಕುಮಾರಸ್ವಾಮಿಯವರು ಮಾತೃಶ್ರೀ ಯೋಜನೆಯ ಮಾಸಿಕ ಧನವನ್ನು ಹಿಂದಿನ ಒಂದು ಸಾವಿರದಿಂದ ಎರಡು ಸಾವಿರಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯ ಸಹಾಯಧನ ನವೆಂಬರ್ ೧ರಿಂದ ಜಾರಿಗೆ ಬರಲಿದೆ.

ಮಾತೃಶ್ರೀ ಯೋಜನೆ ಸಹಾಯಧನ ದುಪ್ಪಟ್ಟು

ಮುಖ್ಯಮಂತ್ರಿ ಮಾತೃಶ್ರೀ ಯೋಜನೆಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಒಟ್ಟು ೪೭೦ ಕೋಟಿ ಮೊತ್ತ ಮೀಸಲಿಟ್ಟಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಕುಟುಂಬ) ಗರ್ಭಿಣಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಈ ಯೋಜನೆ ಪ್ರಕಟಿಸಿದ್ದು, ಈಗಾಗಲೇ ರಾಜ್ಯಸರ್ಕಾರದ ಮಾತೃಪೂರ್ಣ ಮತ್ತು ಕೇಂದ್ರ ಸರ್ಕಾರದ ಮಾತೃ ವಂದನಾ ಯೋಜನೆಗಳು ಕೂಡ ಜಾರಿಯಲ್ಲಿವೆ. ಮಾತೃಶ್ರೀ ಮೊತ್ತವನ್ನು ಮೊದಲನೆಯ ಹೆರಿಗೆ ಪೂರ್ವದ ಮೂರು ತಿಂಗಳಿಗೆ ತಲಾ ಎರಡು ಸಾವಿರ ಹಾಗು ಹೆರಿಗೆ ನಂತರದ ಮೂರು ತಿಂಗಳು ತಲಾ ಎರಡು ಸಾವಿರ ನೀಡಲಾಗುತ್ತದೆ.

ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ರೂ. ೫೦೦ ಹಾಗು ಅಂಗನವಾಡಿ ಸಹಾಯಕಿಯರ ಗೌರವಧನ ರೂ. ೨೫೦ ಹೆಚ್ಚಿಸಲಾಗಿದ್ದು, ನವೆಂಬರ್ ಒಂದರಿಂದಲೇ ಜಾರಿಯಾಗಲಿದೆ.

English summary

Karnataka Budget 2019: Mathrushree Scheme Subsidy Doubled

Krnataka Budget 2019: CM H D Kumaraswamy increased Mathrushree Scheme Subsidy amount.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X