ಗ್ರಾಹಕರ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮ ಪಾಲಿಸುವಂತೆ ಫೆಬ್ರವರಿ ಅಂತ್ಯದವರೆಗೆ ಮೊಬೈಲ್ ವಾಲೆಟ್ ಕಂಪನಿಗಳಿಗೆ ನಿಗದಿಪಡಿಸಿದ್ದ ಗಡುವನ್ನು ರಿಸರ್ವ್ ಬ್ಯಾಂಕ್ ಆರು ತಿಂಗಳವರೆಗೆ ವಿಸ್ತರಿಸಿದೆ.
ಗ್ರಾಹಕರ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮ ಪಾಲಿಸುವಂತೆ ಫೆಬ್ರವರಿ ಅಂತ್ಯದವರೆಗೆ ಮೊಬೈಲ್ ವಾಲೆಟ್ ಕಂಪನಿಗಳಿಗೆ ನಿಗದಿಪಡಿಸಿದ್ದ ಗಡುವನ್ನು ರಿಸರ್ವ್ ಬ್ಯಾಂಕ್ ಆರು ತಿಂಗಳವರೆಗೆ ವಿಸ್ತರಿಸಿದೆ.

ಈ ಹಿಂದೆ ನೀಡಲಾಗಿದ್ದ ಗಡುವು ಫೆಬ್ರವರಿ ೨೮ಕ್ಕೆ ಮುಗಿಯಲಿದೆ. ಇ-ವ್ಯಾಲೆಟ್ ಕಂಪನಿಗಳ ಕೆವೈಸಿ ವಿವರ ಪಡೆಯುವಲ್ಲಿನ ತೊಡಕಿನಿಂದಾಗಿ ಮತ್ತು ಪರ್ಯಾಯ ವ್ಯವಸ್ಥೆ ಪೂರ್ಣಗೊಳಿಸಲು ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಕೋರಿ ಮೊಬೈಲ್ ವ್ಯಾಲೆಟ್ ಕಂಪನಿಗಳು ಮನವಿ ಮಾಡಿಕೊಂಡಿದ್ದವು.
ಕೆವೈಸಿ ಸಮ್ಯೆಯಿಂದಾಗಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಕಂಪನಿಗಳಿಗೆ ಇದರಿಂದ ತುಸು ನಿರಾಳವಾಗಿವೆ. ಆರ್‌ಬಿಐ 2017ರಲ್ಲಿ ಬಳಕೆದಾರರ ಕೆವೈಸಿ ಕಡ್ಡಾಯವಾಗಿ ಸಂಗ್ರಹಿಸುವಂತೆ ಮೊಬೈಲ್ ವ್ಯಾಲೆಟ್ ಕಂಪನಿಗಳಿಗೆ ಸೂಚನೆ ನೀಡಿತ್ತು.
ಆಗ ಸುಲಭವಾಗಿ ಲಭ್ಯವಿದ್ದ ಇ-ಕೆವೈಸಿ ಪ್ರಕ್ರಿಯೆಯನ್ನು ಕಂಪನಿಗಳು ಅನುಸರಿಸಿದ್ದವು. ಆದರೆ, ಬಳಿಕ ಕೆವೈಸಿಗಾಗಿ ಆಧಾರ್ ಆನ್ಲೈನ್ ಡೇಟಾ ಬಳಸುವುದನ್ನು ಖಾಸಗಿ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿತ್ತು. ಹೀಗಾಗಿ, ಗ್ರಾಹಕರ ಕೆವೈಸಿಯು ಮೊಬೈಲ್ ವಾಲೆಟ್ ಕಂಪನಿಗಳಿಗೆ ದೊಡ್ಡ ತಲೆನೋವು ಎದುರಾಗಿತ್ತು.
ಪೇಟಿಎಂ, ಮೊಬಿಕ್ವಿಕ್, ಅಮೆಜನ್ ಪೇ, ಫೋನ್ ಪೇ ಮುಂತಾದವು ಇ ವಾಲೆಟ್ ಸಂಸ್ಥೆಗಳಾಗಿವೆ.

Click it and Unblock the Notifications