For Quick Alerts
ALLOW NOTIFICATIONS  
For Daily Alerts

ಹೊಸ ಮಾದರಿಯ ಹೊಚ್ಚ ಹೊಸ 20 ರು ನಾಣ್ಯ ಘೋಷಣೆ

|

12 ಕೋನದ ಪಾಲಿಗಾನ್ ಆಕೃತಿಯುಳ್ಳ ಹೊಚ್ಚ ಹೊಸ 20 ರು ನಾಣ್ಯ ಉತ್ಪಾದನೆ ಕುರಿತಂತೆ ವಿತ್ತ ಸಚಿವಾಲಯವು ಪ್ರಕಟಣೆ ಹೊರಡಿಸಿದೆ.

10 ನಾಣ್ಯದಂತೆ ಎರಡು ವಲಯಗಳನ್ನು ಹೊಂದಿರುವ 20 ರು ಮುಖಬ್ಲೆಯ ನಾಣ್ಯದ ವ್ಯಾಸವು 27 ಮಿ.ಮೀ ನಷ್ಟಿದೆ. ನಾಣ್ಯದ ಹೊರ ಸುತ್ತು 65% ತಾಮ್ರ, 15% ಸತು ಮತ್ತು 20 % ನಿಕ್ಕಲ್ ಹೊಂದಿದೆ. ಒಳ ಸುತ್ತು ಅಥವಾ ನಾಣ್ಯದ ಕೇಂದ್ರಭಾಗವು 75% ತಾಮ್ರ, 20% ಸತು ಮತ್ತು 5% ನಿಕ್ಕಲ್ ನಿಂದ ಮಾಡಲ್ಪಟ್ಟಿದೆ.

ಪ್ರಥಮ ಧ್ವಜಾರೋಹಣ ಸಂಭ್ರಮಕ್ಕಾಗಿ ನೇತಾಜಿ 75 ಹೊಸ ನಾಣ್ಯ

ಹೊಸ ರೂ 20 ನಾಣ್ಯವು ಯಾವುದೇ ಸರಣಿಯನ್ನು ಹೊಂದಿರುವುದಿಲ್ಲ. ಒಂದು ನಾಣ್ಯ 8.54 ಗ್ರಾಂ ತೂಕ ಹೊಂದಿರಲಿದೆ. 2009ರ ಮಾರ್ಚ್ ತಿಂಗಳಿನಲ್ಲಿ ಹೊಚ್ಚ ಹೊಸ 10 ರು ನಾಣ್ಯವನ್ನು ಹೊರ ತರಲಾಗಿತ್ತು. ಈಗ 10 ವರ್ಷಗಳ ಬಳಿಕ 20 ರು ನಾಣ್ಯವನ್ನು ಘೋಷಿಸಲಾಗಿದೆ. ದೃಷ್ಟಿ ವಿಕಲ ಚೇತನರ ಚಲಾವಣೆಗೆ ಅನುಕೂಲವಾಗುವಂತಹ ವಿನ್ಯಾಸಗೊಳಿಸಲಾಗಿರುವ ಹೊಸ ಸರಣಿಯ ರೂ 1, ರೂ 2,ರೂ 5, ರೂ 10 ಹಾಗೂ 20 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಗುರುವಾರ ಬಿಡುಗಡೆಗೊಳಿಸಿದ್ದಾರೆ.

ಹೊಸ ಮಾದರಿಯ ಹೊಚ್ಚ ಹೊಸ 20 ರು ನಾಣ್ಯ ಘೋಷಣೆ

ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಛನ ಹಾಗೂ ಅಶೋಕನ ಸಾರಾನಾಥ ಶಾಸನ ವಾಕ್ಯ "ಸತ್ಯಮೇವ ಜಯತೆ"(ದೇವಾಗರಿ ಲಿಪಿ) ಎಂದಿರಲಿದೆ. ಅಲ್ಲದೆ ಇದರ ಎಡಬಾಗದಲ್ಲಿ 'ಭಾರತ್' ಎನ್ನುವ ದೇವನಾಗರಿ ಲಿಪಿಯಲ್ಲಿ ಪದವಿದ್ದರೆ ಬಲಭಾಗದಲ್ಲಿ "ಇಂಡಿಯಾ' ಎಂದು ಇಂಗ್ಲೀಷ್ ನಲ್ಲಿ ಬರೆದಿರುವುದನ್ನು ಕಾಣಬಹುದು.

ನಾಣ್ಯದ ಹಿಂಭಾಗದಲ್ಲಿ, ರೂಪಾಯಿ ಚಿಹ್ನೆಯುಕೆಳಗಿನ ಭಾಗದಲ್ಲಿ ಕರೆನ್ಸಿ ಮೌಲ್ಯ ಬರೆಯಲ್ಪಡಲಿದೆ.ಅಲ್ಲದೆ ರಾಷ್ಟ್ರದಲ್ಲಿನ ಕೃಷಿ ಪ್ರಾಬಲ್ಯವನ್ನು ಸಾರುವುದಕ್ಕಾಗಿ ಎಡಭಾಗದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಧಾನ್ಯಗಳ ಚಿತ್ರವಿರಲಿದೆ. ಇನ್ನು ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 20 ರೂಪಾಯಿಗಳು ಎಂದು ಅಕ್ಷರಗಳಲ್ಲಿ ಕೆತ್ತಲಾಗಿರುತ್ತದೆ. ಅಲ್ಲದೆ ಇದರ ನಡುವೆ ನಾಣ್ಯ ಬಿಡುಗಡೆಯಾಗಿರುವ ವರ್ಷವನ್ನು ಕೆತ್ತಲಾಗಿದೆ.

ಬಂಗಾರದತ್ತ ಕೇಂದ್ರೀಯ ಬ್ಯಾಂಕರ್ಸ್ ಚಿತ್ತ! ಯಾಕೆ ಗೊತ್ತಾ? ಬಂಗಾರದತ್ತ ಕೇಂದ್ರೀಯ ಬ್ಯಾಂಕರ್ಸ್ ಚಿತ್ತ! ಯಾಕೆ ಗೊತ್ತಾ?

2009ರಿಂದ ಇಲ್ಲಿತನಕ 10 ನಾಣ್ಯಗಳ 13 ಹೊಸ ಆವೃತ್ತಿಗಳು ಬಂದಿವೆ. 10 ರು ನಾಣ್ಯದ ಬಳಕೆ ಬಗ್ಗೆ ಗೊಂದಲ ಮುಂದುವರೆದಿದ್ದರೂ ಎಲ್ಲವೂ ಮಾನ್ಯತೆ ಹೊಂದಿದೆ ಎಂದು ಅರ್ ಬಿಐ ಸ್ಪಷ್ಟಪಡಿಸಿದೆ.

English summary

Govt To Issue A Rs 20 Coin For The First Time Ever

In a Gazette, the Ministry of Finance said that it will be rolling out a Rs 20 coin in the shape of a 12-edged polygon. This is the first time ever a Rs 20 coin will be issued in the country.
Story first published: Thursday, March 7, 2019, 16:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X