For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ ಜಾರಿ: ರಾಜ್ಯ ನೌಕರರಿಗೆ ಹೋಳಿ ಹಬ್ಬಕ್ಕೆ ಭರ್ಜರಿ ಕೊಡುಗೆ

ರಾಜ್ಯ ಸರ್ಕಾರ ಹೋಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ! ರಾಜ್ಯ ಸರ್ಕಾರಿ ಪದವಿ ಕಾಲೇಜು ಹಾಗು ವಿಶ್ವವಿದ್ಯಾಲಯಗಳ ಉಪನ್ಯಾಸಕರಿಗೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲು ಸಿದ್ದತೆ ನಡೆಸಿದೆ.

|

ರಾಜ್ಯ ಸರ್ಕಾರ ಹೋಳಿ ಹಬ್ಬಕ್ಕೆ ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ!
ರಾಜ್ಯ ಸರ್ಕಾರಿ ಪದವಿ ಕಾಲೇಜು ಹಾಗು ವಿಶ್ವವಿದ್ಯಾಲಯಗಳ ಉಪನ್ಯಾಸಕರಿಗೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲು ಸಿದ್ದತೆ ನಡೆಸಿದೆ.

 

ಯುಜಿಸಿ ವೇತನ ಪಾವತಿ ನಿಯಮದ ಅಡಿಯಲ್ಲಿ ಸಂಬಳ ಪಡೆಯುವ ಉಪನ್ಯಾಸಕರಿಗೆ ಪರಿಷ್ಕೃತ ವೇತನದ ಪ್ರಮಾಣವನ್ನು ಅನುಷ್ಠಾನಗೊಳಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಪರಿಷ್ಕೃತ ವೇತನದ ಪ್ರಮಾಣ

ಪರಿಷ್ಕೃತ ವೇತನದ ಪ್ರಮಾಣ

7ನೇ ವೇತನ ಆಯೋಗದ ಶಿಫಾರಸ್ಸಿನೊಂದಿಗೆ, ರೂ. 15,000 ಮತ್ತು ರೂ. 35,000 ವೇತನ ಪಡೆಯುತ್ತಿದ್ದ ಉಪನ್ಯಾಸಕರು ತಿಂಗಳಿಗೆ ರೂ. 57,700 ವೇತನ ಪಡೆಯಲಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯ ವಿವರಗಳ ಅನ್ವಯ ಉಪನ್ಯಾಸಕರ ಗರಿಷ್ಠ ವೇತನ ಮೀತಿ ರೂ. 1.82 ಲಕ್ಷ. ಆಗಿರಲಿದೆ.
ಹಿರಿಯ ಸಹಾಯಕ ಪ್ರಾದ್ಯಾಪಕರು ರೂ. 39,000 ಬದಲಿಗೆ ರೂ. 68,900 ವೇತನ ಪಡೆಯಲಿದ್ದು, ಗರಿಷ್ಠ ರೂ. 2,05, 500 ವೇತನ ಪಡೆಯಲಿದ್ದಾರೆ. ಅಸೋಸಿಯೇಟ್ ಪ್ರಾಧ್ಯಾಪಕರು ರೂ. 1,31,400 ರಿಂದ ರೂ. 2,17,100 ವರೆಗೆ ಸಂಬಳ ಪಡೆಯಲಿದ್ದಾರೆ. 7ನೇ ವೇತನ ಆಯೋಗ: ಕೇಂದ್ರ ನೌಕರರ ವೇತನ ಏರಿಕೆ ಇಲ್ಲ..

ಯಾರಿಗೆ ವೇತನ ಅನ್ವಯ/ಅನ್ವಯವಾಗುವುದಿಲ್ಲ

ಯಾರಿಗೆ ವೇತನ ಅನ್ವಯ/ಅನ್ವಯವಾಗುವುದಿಲ್ಲ

ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಪರಿಷ್ಕೃತ ವೇತನ ಶಿಕ್ಷಕರು, ಗ್ರಂಥಾಲಯ ಸಿಬ್ಬಂದಿಗಳು ಶಾರೀರಿಕ ಶಿಕ್ಷಣ ಸಿಬ್ಬಂದಿ ಮತ್ತು ಸರ್ಕಾರದ ಸಂಸ್ಥೆಗಳಲ್ಲಿ ಸಮಾನ ಕೇಡರ್ ಸಿಬ್ಬಂದಿಗಳಿಗೆ ಅನ್ವಯವಾಗಲಿದೆ. ಶಿಕ್ಷಕರಾಗಿ ನೇಮಕಾತಿಗೆ ಕನಿಷ್ಠ ಅರ್ಹತೆ ಮೇಲೆ ಯುಜಿಸಿ ನಿಯಮಾವಳಿಗಳನ್ನು ಪೂರೈಸದವರಿಗೆ ಈ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಪ್ರಮಾಣ ಅನ್ವಯ ಆಗುವುದಿಲ್ಲ.

ಹೋಳಿ ಕೊಡುಗೆ
 

ಹೋಳಿ ಕೊಡುಗೆ

ಹೋಳಿ ಹಬ್ಬದ ಸನಿಹದಲ್ಲೇ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನ್ನು ನೀಡಿದ್ದಾರೆ. ಇನ್ನೊಂದೆಡೆ ಲೋಕಸಭಾ ಚುನಾವಣೆ ಕಾವು ಪಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ವೇತನ ಹೆಚ್ಚಚಿಸಿರುವುದು ವಿಶೇಷವಾಗಿದೆ.
7ನೇ ವೇತನ ಆಯೋಗದ ಪರಿಷ್ಕೃತ ವೇತನಕ್ಕಾಗಿ ನಾವು ದೀರ್ಘಕಾಲದಿಂದ ಕಾಯುತ್ತಿದ್ದೆವು. ಈಗ ತುಂಬಾ ಸಂತೋಷವಾಗಿದ್ದೇವೆ ಎಂದು ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಪ್ರೊ. ಮಂಜುನಾಥ್ ಹೇಳಿದ್ದಾರೆ.

English summary

Karnataka government implements 7th Pay Commission

The state government has implemented the 7th Pay Commission recommendations for lecturers of government degree colleges and state universities.
Story first published: Wednesday, March 20, 2019, 12:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X