For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 427 ಅಂಕ ಕುಸಿತ; ಷೇರುಪೇಟೆಯ ಕುಸಿತಕ್ಕೆ ಕಾರಣಗಳೇನು?

ಜಾಗತಿಕ ಮಾರುಕಟ್ಟೆಗಳಲ್ಲಿನ ದೌರ್ಬಲ್ಯ ಮತ್ತು ಡಾಲರ್‌ ಎದುರು ರೂಪಾಯಿಯ ಹಿನ್ನಡೆ ಕಾರಣದಿಂದಾಗಿ ಮುಂಬಯಿ ಷೆರುಪೇಟೆ ಇಂದಿನ ವಹಿವಾಟಿನಲ್ಲಿ 427 ಅಂಕ ನಷ್ಟಕ್ಕೆ ಗುರಿಯಾಗಿದೆ.

|

ಜಾಗತಿಕ ಮಾರುಕಟ್ಟೆಗಳಲ್ಲಿನ ದೌರ್ಬಲ್ಯ ಮತ್ತು ಡಾಲರ್‌ ಎದುರು ರೂಪಾಯಿಯ ಹಿನ್ನಡೆ ಕಾರಣದಿಂದಾಗಿ ಮುಂಬಯಿ ಷೆರುಪೇಟೆ ಇಂದಿನ ವಹಿವಾಟಿನಲ್ಲಿ 427 ಅಂಕ ನಷ್ಟಕ್ಕೆ ಗುರಿಯಾಗಿದೆ.
ಕಳೆದ ಶುಕ್ರವಾರ ಸೆನ್ಸೆಕ್ಸ್‌ 222.14 ಪಯಿಂಟ್ ನಷ್ಟ ಕಂಡಿತ್ತು. ಇಂದು ಸೋಮವಾರ ಬೆಳಗ್ಗೆ 11ರ ಆಸುಪಾಸಿನಲ್ಲಿ ಸೆನ್ಸೆಕ್ಸ್‌ 336.78 ಪಾಯಿಂಟ್ ನಷ್ಟದೊಂದಿಗೆ 37,827.83 ಅಂಶ ಹಾಗು ನಿಫ್ಟಿ ಸೂಚ್ಯಂಕ 100 ಅಂಕಗಳ ನಷ್ಟದೊಂದಿಗೆ 11,356.90 ಅಂಶಕ್ಕೆ ಇಳಿಕೆ ಕಂಡಿದ್ದವು.
ಮಧ್ಯಾಹ್ನ 2.20 ಗಂಟೆ ಸುಮಾರಿಗೆ ಸೆನ್ಸೆಕ್ಸ ಸೂಚ್ಯಂಕ 423.43 ನಷ್ಟದೊಂದಿಗೆ 37,738 ಅಂಶಗಳಲ್ಲಿ ಹಾಗು ನಿಪ್ಟಿ ಸೂಚ್ಯಂಕವು 123 ಪಾಯಿಂಟ್ ಇಳಿಕೆಯೊಂದಿಗೆ 11333 ಅಂಶಗಳಲ್ಲಿ ವಹಿವಾಟು ನಡೆಸಿದೆ.

 

ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 16 ಪೈಸೆಗಳ ನಷ್ಟಕ್ಕೆ ಗುರಿಯಾಗಿ ರೂ. 69.11 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ಗೋದ್ರೆಜ್ ಪ್ರಾಪರ್ಟೀಸ್, ವೋಲ್ಟಾಸ್, ಜೆಟ್ ಏರ್ವೇಸ್, ವೇದಾಂತ, ಟಾಟಾ ಮೋಟಾರ್ಸ್, ಹಿಂಡಾಲ್ಕೊ, ಯೆಸ್ ಬ್ಯಾಂಕ್, ಜೆಎಸ್ಡಬ್ಲ್ಯೂ ಸ್ಟೀಲ್, ಡಿಎಲ್ಎಫ್, ಶೋಭಾ, ಜೀ ಎಂಟರ್ಟೈನ್ಮೆಂಟ್, ಆರ್ಐಎಲ್ ಮತ್ತು ಐಸಿಐಸಿಐ ಬ್ಯಾಂಕ್ ಲಾಭದೊಂದಿಗೆ ಕ್ರಿಯಾಶೀಲವಾಗಿದ್ದವು.

ಗ್ಲೋಬಲ್ ಮಾರ್ಕೆಟ್ಸ್

ಗ್ಲೋಬಲ್ ಮಾರ್ಕೆಟ್ಸ್

ಏಷ್ಯಾದ ಮಾರುಕಟ್ಟೆಗಳು ನಷ್ಟದೊಂದಿಗೆ ವ್ಯಾಪಾರ ಆರಂಭಿಸಿದ್ದವು. ಜಪಾನ್ ನ ನಿಕಿಕ್ಕಿ ಶೇ. 2.9 ಕುಸಿತ ಕಂಡಿದ್ದು, ದಕ್ಷಿಣ ಕೊರಿಯಾದ ಕೊಸ್ಪಿ ಸೂಚ್ಯಂಕವು ಶೇ. 1.5 ಕುಸಿದಿದೆ ಮತ್ತು ಆಸ್ಟ್ರೇಲಿಯಾದ ಷೇರುಗಳು ಬೆಳಿಗ್ಗಿನ ವ್ಯಾಪಾರದಲ್ಲಿ ಶೇ. 1.3 ಕುಸಿತ ಕಂಡವು. ಶುಕ್ರವಾರದಮದು, ಎಲ್ಲಾ ಮೂರು ಪ್ರಮುಖ ಯುಎಸ್ ಸ್ಟಾಕ್ ಸೂಚ್ಯಂಕಗಳು ಜನವರಿ 3 ರ ನಂತರದ ಅತಿದೊಡ್ಡ ಶೇಕಡಾವಾರು ನಷ್ಟವನ್ನು ದಾಖಲಿಸಿವೆ.

ಲಾಭ ತೆಗೆದುಕೊಳ್ಳುವುದು

ಲಾಭ ತೆಗೆದುಕೊಳ್ಳುವುದು

ವ್ಯಾಪಾರಿಗಳು ಉನ್ನತ ಮಟ್ಟದ ಲಾಭವನ್ನು ಬುಕಿಂಗ್ಗಳಿಸುತ್ತಿರುವಂತೆ ತೋರುತ್ತಿದೆ. ಕಳೆದ ವಾರ ಮಾರ್ಚ್ 11 ರಿಂದ ಮಾರ್ಚ್ 19 ರ ವರೆಗೆ ಸತತ 7 ಸತತ ಅವಧಿ ತಲುಪಿದ ನಂತರ, ನಿಫ್ಟಿ 11500-11600 ಮಟ್ಟದಲ್ಲಿ ವ್ಯವಹಾರ ನಡೆಸಿದೆ. ವಾರಕ್ಕೆ, ಸೂಚ್ಯಂಕ ಕೇವಲ 0.26 ರಷ್ಟು ಏರಿತು.

ಬ್ಯಾಂಕ್ ನಿಫ್ಟಿ ಪರಿಣಾಮ
 

ಬ್ಯಾಂಕ್ ನಿಫ್ಟಿ ಪರಿಣಾಮ

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್ಐಐಗಳು) ಭಾರತೀಯ ಬ್ಯಾಂಕಿಂಗ್ ಸ್ಟಾಕ್ ಗಳ ಮೇಲಿನ ಪ್ರೀತಿ ಜಗತ್ತಿಗೆ ತಿಳಿದಿದೆ. ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಾಕ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ನ ಸ್ಟಾಕ್ ಗಳನ್ನು ಎಫ್ಐಐಗಳು ಖರೀದಿಸುತ್ತಿದೆ. ಈ 4 ಷೇರುಗಳು ಶೇ. 75ಕ್ಕಿಂತ ಹೆಚ್ಚಿದ್ದು, ಈ 4 ಷೇರುಗಳ ಖರೀದಿ ಸಹಾಯದಿಮದ ನಿಫ್ಟಿಬ್ಯಾಂಕ್ ಕೆಲವೇ ವಾರಗಳಲ್ಲಿ 2500 ಪಾಯಿಂಟ್ ಏರಿಕೆ ಕಂಡಿದೆ.

Read more about: bse sensex share market money
English summary

Sensex breaks below 430 points: some factors that could be weighing down market

Sensex below 37,738 while the Nifty50 also broke below its crucial psychological support at 11333 levels.
Story first published: Monday, March 25, 2019, 14:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X