For Quick Alerts
ALLOW NOTIFICATIONS  
For Daily Alerts

ದೇನಾ, ಬರೋಡಾ, ವಿಜಯಾ ಬ್ಯಾಂಕ್ ವಿಲೀನ: ಏಪ್ರಿಲ್ 1ರಿಂದ ಆಗಲಿರುವ ಪ್ರಮುಖ ಬದಲಾವಣೆ ಇಲ್ಲಿವೆ..

ಸರ್ಕಾರಿ ಸ್ವಾಮ್ಯದ ಎರಡು ಪ್ರಮುಖ ಬ್ಯಾಂಕುಗಳು ಏಪ್ರಿಲ್ 1ರಿಂದ ಕಾರ್ಯಾಚರಣೆ ನಿಲ್ಲಿಸಲಿವೆ. ಹೌದು, ದೇನಾ ಮತ್ತು ವಿಜಯಾ ಬ್ಯಾಂಕ್ ಗಳು ಏಪ್ರಿಲ್ 1 ರಂದು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾಗಲಿವೆ.

|

ಸರ್ಕಾರಿ ಸ್ವಾಮ್ಯದ ಎರಡು ಪ್ರಮುಖ ಬ್ಯಾಂಕುಗಳು ಏಪ್ರಿಲ್ 1ರಿಂದ ಕಾರ್ಯಾಚರಣೆ ನಿಲ್ಲಿಸಲಿವೆ. ಹೌದು, ದೇನಾ ಮತ್ತು ವಿಜಯಾ ಬ್ಯಾಂಕ್ ಗಳು ಏಪ್ರಿಲ್ 1 ರಂದು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾಗಲಿವೆ. ಈ ವಿಲೀನದ ನಂತರ ಬ್ಯಾಂಕ್ ಆಫ್ ಬರೋಡಾ ದೇಶದ 3ನೇ ಅತಿ ದೊಡ್ಡ ಬ್ಯಾಂಕ್ ಎನಿಸಲಿದೆ. ವಿಲೀನದ ನಂತರ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಖಾತೆಗಳು ಹಾಗು ಬ್ಯಾಂಕಿಂಗ್ ಕಾರ್ಯಾಚರಣೆ ಬರೋಡಾ ಬ್ಯಾಂಕಿಗೆ ವರ್ಗಾವಣೆಯಾಗಲಿದೆ. ಇದು ಗ್ರಾಹಕರ ಮೇಲೆ ಹಲವು ಪರಿಣಾಮ ಬೀರಲಿದ್ದು, ದೇನಾ ಬ್ಯಾಂಕ್ ಹಾಗು ವಿಜಯ ಬ್ಯಾಂಕ್ ಗ್ರಾಹಕರು ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ.

 

ಏನು ಬದಲಾಗಲಿದೆ?

ಏನು ಬದಲಾಗಲಿದೆ?

- ವಿಲೀನದ ನಂತರ ದೇನಾ ಮತ್ತು ವಿಜಯಾ ಬ್ಯಾಂಕ್ ಗ್ರಾಹಕರೆಲ್ಲ ಬ್ಯಾಂಕ್ ಆಫ್ ಬರೋಡಾಗೆ ವರ್ಗಾವಣೆಯಾಗಲಿದ್ದಾರೆ.
- ಗ್ರಾಹಕರಿಗೆ ಹೊಸ ಖಾತೆಯ ಸಂಖ್ಯೆ ಮತ್ತು ಕಸ್ಟಮರ್ ಐಡಿ ನೀಡಲಾಗುತ್ತದೆ.
- ಸಾಲಗಾರರು, ಇಎಂಐ ಪಾವತಿಸುವವರು ಹೊಸ ಅರ್ಜಿ ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಬೇಕು.
- ಹೊಸ ಡೆಬಿಟ್ ಕಾರ್ಡ್, ಚೆಕ್ ಬುಕ್ ಮತ್ತು ಕ್ರೆಡಿಟ್ ಕಾರ್ಡ್ ನೀಡಲಾಗುವುದು.

ಬ್ಯಾಂಕಿಂಗ್ ವಿವರ ನವೀಕರಣ

ಬ್ಯಾಂಕಿಂಗ್ ವಿವರ ನವೀಕರಣ

ಗ್ರಾಹಕರು ತಮ್ಮ ಹೊಸ ಖಾತೆ ಸಂಖ್ಯೆಗಳನ್ನು ಮತ್ತು ಐಎಫ್ಎಸ್ಸಿ ಕೋಡ್ ಗಳನ್ನು ಆದಾಯ ತೆರಿಗೆ ಇಲಾಖೆ, ಮ್ಯೂಚುಯಲ್ ಫಂಡ್, ವಿಮೆ ಕಂಪನಿಗಳು, ರಾಷ್ಟ್ರೀಯ ಪಿಂಚಣಿ ಯೋಜನೆ, ಇತ್ಯಾದಿ ಸಂಸ್ಥೆಗಳೊಂದಿಗೆ ಬ್ಯಾಂಕಿಂಗ್ ವಿವರಗಳನ್ನು ನವೀಕರಿಸಬೇಕು.

ಇದು ಬದಲಾಗಲ್ಲ
 

ಇದು ಬದಲಾಗಲ್ಲ

- ಬ್ಯಾಂಕ್ ಆಫ್ ಬರೋಡಾಗೆ ಸೇರ್ಪಡೆಯಾಗುವ ಗ್ರಾಹಕರಿಗೆ ಪರ್ಸನಲ್ ಲೋನ್, ಮನೆ ಸಾಲ, ವಾಹನ ಸಾಲ, ಶಿಕ್ಷಣ ಸಾಲ ಇತ್ಯಾದಿಗಳ ಮೇಲಿನ ಬಡ್ಡಿ ದರಗಳು ಬದಲಾಗದೇ ಇರಬಹುದು.
- ಸ್ಥಿರ ಠೇವಣಿ ಅಥವಾ ರಿಕರಿಂಗ್ ಡಿಪಾಸಿಟ್ ಮೇಲಿನ ಬಡ್ಡಿದರ ಬದಲಾಗದೆ ಇರಬಹುದು.

3ನೇ ದೊಡ್ಡ ಬ್ಯಾಂಕ್

3ನೇ ದೊಡ್ಡ ಬ್ಯಾಂಕ್

ಪ್ರಸ್ತುತ ದೇಶದ ಅತಿದೊಡ್ಡ ಬ್ಯಾಂಕ್ ಅಗಿ ಎಸ್ಬಿಐ ಮೊದಲ ಸ್ಥಾನದಲ್ಲಿದ್ದು, ಹೆಚ್.ಡಿ.ಎಫ್.ಸಿ. 2 ನೇ ಸ್ಥಾನದಲ್ಲಿದೆ. ಐಸಿಐಸಿಐ 3ನೇ ಸ್ಥಾನದಲ್ಲಿದೆ. ಇದೀಗ ದೇನಾ ಮತ್ತು ವಿಜಯಾ ಬ್ಯಾಂಕ್ ವಿಲೀನದ ಬಳಿಕ ಬ್ಯಾಂಕ್ ಆಫ್ ಬರೋಡಾದ ವ್ಯವಹಾರದ ಮೌಲ್ಯ ಏರಿಕೆಯಾಗಲಿದ್ದು, 3 ನೇ ದೊಡ್ಡ ಬ್ಯಾಂಕ್ ಆಗಲಿದೆ. ಬ್ಯಾಂಕುಗಳ ವಿಲೀನದಿಂದ ಕೆಲವು ಶಾಖೆ ಬಂದ್ ಆಗಲಿವೆ.

Read more about: banking money bank merger
English summary

Baroda, Dena Bank, Vijaya Bank merger: Here's what will change for customers of these banks from April 1

Two major state-run banks will stop operations from April 1. These two banks are Dena Bank and Vijaya Bank, and they will be merged with Bank of Baroda next month.
Story first published: Friday, March 29, 2019, 10:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X