ಹೊಸ ಹಣಕಾಸು ವರ್ಷದ ಮೊದಲ ದಿನವಾದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 300 ಅಂಕಗಳ ಏರಿಕೆಯನ್ನು ದಾಖಲಿಸಿ 39,017.06 ಅಂಕಗಳ ಮಟ್ಟಕ್ಕೇರಿತು. ಎನ್ಎಸ್ಇ ನಿಫ್ಟಿ ಸೂಚ್ಯಂಕವು 11,700 ಅಂಕಗಳ ಮಟ್ಟ ಮೀರಿದೆ. 2018 ರ
ಹೊಸ ಹಣಕಾಸು ವರ್ಷದ ಮೊದಲ ದಿನವಾದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 300 ಅಂಕಗಳ ಏರಿಕೆಯನ್ನು ದಾಖಲಿಸಿ 39,017.06 ಅಂಕಗಳ ಮಟ್ಟಕ್ಕೇರಿತು. ಎನ್ಎಸ್ಇ ನಿಫ್ಟಿ ಸೂಚ್ಯಂಕವು 11,700 ಅಂಕಗಳ ಮಟ್ಟ ಮೀರಿದೆ. 2018 ರ ಸೆಪ್ಟೆಂಬರ್ ನಂತರ ಮೊದಲ ಬಾರಿಗೆ ಈ ದಾಖಲೆ ಕಂಡುಬಂದಿದೆ.

ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ, ವಿದೇಶಿ ಬಂಡವಾಳದ ಒಳಹರಿವು ಹೆಚ್ಚಿರುವುದು ಮುಂಬಯಿ ಷೇರುಪೇಟೆಯಲ್ಲಿನ ಏರಿಕೆಗೆ ಕಾರಣವಾಗಿದೆ.
ಇಂದು ಬೆಳಗ್ಗೆ 11.35 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 265.05 ಪಾಯಿಂಟ್ ಏರಿಕೆಯೊಂದಿಗೆ 38,938 ಕಗಳಅಂಶಗಳಲ್ಲಿ ಹಾಗು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಸೂಚ್ಯಂಕ 59 ಪಾಯಿಂಟ್ ಏರಿಕೆಯೊಂದಿಗೆ 11,682.20 ಅಂಶಗಳಲ್ಲಿ ವ್ಯವಹಾರ ನಿರತವಾಗಿದ್ದವು.
ಟಾಟಾ ಮೋಟರ್, ಟಾಟಾ ಸ್ಟೀಲ್, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಷೇರುಗಳು ಬೆಳಗ್ಗಿನ ವಹಿವಾಟಿನ ಸಂದರ್ಭದಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಹಿಂಡಾಲ್ಕೋ, ಟಾಟಾ ಮೋಟರ್, ವೇದಾಂತ, ಗೇಲ್, ಟಾಟಾ ಸ್ಟೀಲ್; ಟಾಪ್ ಲೂಸರ್‌ಗಳು : ಐಓಸಿ, ಇಂಡಿಯಾಬುಲ್ಸ್ ಹೌಸಿಂಗ್, ಬಿಪಿಸಿಎಲ್, ಕೋಲ್ ಇಂಡಿಯಾ, ಒಎನ್‌ಜಿಸಿ ಕಂಪನಿಗಳು ಲಾಭದಲ್ಲಿದ್ದವು.


Click it and Unblock the Notifications