For Quick Alerts
ALLOW NOTIFICATIONS  
For Daily Alerts

ಬದಲಾಗಿದೆ ಐಟಿ ರಿಟರ್ನ್ಸ್ ಪಾವತಿ ಕ್ರಮ: ಹೊಸ ನಿಯಮದಲ್ಲಿ ಏನೇನಿದೆ?

|

ನವದೆಹಲಿ, ಏಪ್ರಿಲ್ 15: ವಾರ್ಷಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ಕಾರ್ಯಕ್ಕೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಚಾಲನೆ ನೀಡಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಸಲ್ಲಿಸಿದ ರೀತಿಯಲ್ಲಿಯೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದು ಸಾಧ್ಯವಿಲ್ಲ. 2019-20ನೇ ಸಾಲಿನ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಈ ವೇಳೆ ತೆರಿಗೆ ಪಾವತಿದಾರರು ಕೆಲವು ವಿವರಗಳನ್ನು ಸಲ್ಲಿಸುವುದು ಕಡ್ಡಾಯ.

ಐಟಿ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದ್ದು, ಅದರ ನಿಯಮಾವಳಿಗಳಲ್ಲಿ ಕೆಲವು ಬದಲಾವಣೆಗಳಾಗಿರುವುದರಿಂದ ಗಡುವು ಕೊನೆಗೊಳ್ಳುವ ದಿನದವರೆಗೂ ಕಾಯದೆ ಆದಷ್ಟು ಬೇಗನೆ ಸಲ್ಲಿಸುವುದು ಒಳಿತು.

ಲೋಕಸಭಾ ಚುನಾವಣೆ ಎಫೆಕ್ಟ್! ಜನ್ ಧನ್ ಖಾತೆಗಳಿಗೆ ತಲಾ 10 ಸಾವಿರ ಜಮಾ..!ಲೋಕಸಭಾ ಚುನಾವಣೆ ಎಫೆಕ್ಟ್! ಜನ್ ಧನ್ ಖಾತೆಗಳಿಗೆ ತಲಾ 10 ಸಾವಿರ ಜಮಾ..!

ಐಟಿಆರ್ 1ರಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಿವೆ...

ಸ್ಟ್ಯಾಂಡರ್ಡ್ ಡಿಡಕ್ಷನ್‌ನ ಹೊಸ ಅಂಶವನ್ನು ಇದರಲ್ಲಿ ಸೇರಿಸಲಾಗಿದೆ. ಇದರಲ್ಲಿ ನೀವು 40,000 ರೂಪಾಯಿ ಫ್ಲ್ಯಾಟ್ ಡಿಡಕ್ಷನ್‌ಗೆ ಅಹವಾಲು ಸಲ್ಲಿಸಬಹುದು. ಹಿರಿಯ ನಾಗರಿಕರು ಉಳಿತಾಯ, ನಿಶ್ಚಿತ ಠೇವಣಿಗಳ ಹಾಗೂ ಪೋಸ್ಟ್ ಆಫೀಸ್ ಠೇವಣಿಗಳ ಬಡ್ಡಿ ಮೇಲೆ 50,000 ರೂಪಾಯಿವರೆಗೆ ವಿನಾಯಿತಿ ಪಡೆಯಬಹುದು.

ಇದಲ್ಲದೆ, ತೆರಿಗೆ ಪಾವತಿದಾರರು ಇತರೆ ಮೂಲಗಳಿಂದ ಬರುವ ಆದಾಯದ ಸ್ವರೂಪವನ್ನು ನಿರ್ದಿಷ್ಟವಾಗಿ ತಿಳಿಸಲು ಅರ್ಜಿ ಸೂಚಿಸುತ್ತದೆ. ಕಳೆದ ವರ್ಷದವರೆಗೆ ನೀವು ಇತರೆ ಮೂಲದ ಮೊತ್ತವನ್ನು ನಮೂದಿಸಿದರೆ ಸಾಕಿತ್ತು. ಇದರೊಂದಿಗೆ ಯಾವುದೇ ಅದಾಯ ವಿನಾಯಿತಿ ಮತ್ತು ತೆರಿಗೆ ಪ್ರಯೋಜನಕ್ಕೆ ಯಾವ ನಿಯಮದ ಅಡಿ ಅವಕಾಶ ಹೊಂದಿದೆ ಎಂಬುದರ ಮಾಹಿತಿ ಒದಗಿಸಬೇಕು. ಇದರಲ್ಲಿ ವಾರ್ಷಿಕ ಅವಧಿಯಲ್ಲಿ ಪಡೆಯುವ ಎಚ್ಆರ್‌ಎಯನ್ನು ಒಳಗೊಂಡಿರುತ್ತದೆ.

2019-20ನೇ ಹೊಸ ಹಣಕಾಸು ವರ್ಷದಲ್ಲಿ ಈ ಬದಲಾವಣೆಗಳು ನಿಮ್ಮ ಮೇಲೆ ಪರಿಣಾಮ ಬೀರಲಿವೆ..2019-20ನೇ ಹೊಸ ಹಣಕಾಸು ವರ್ಷದಲ್ಲಿ ಈ ಬದಲಾವಣೆಗಳು ನಿಮ್ಮ ಮೇಲೆ ಪರಿಣಾಮ ಬೀರಲಿವೆ..

ಐಟಿಆರ್ 2ನಲ್ಲಿ ಕೂಡ ಬದಲಾವಣೆಗಳಾಗಿವೆ..

ವಾಸದ ಮಾಹಿತಿ ಒದಗಿಸುವ ವೇಳೆ ಭಾರತದಲ್ಲಿ ಕಳೆದ ದಿನಗಳ ಸಂಖ್ಯೆಯ ಕುರಿತಾಗಿ ವಿವರವಾಗಿ ಮಾಹಿತಿ ನೀಡಬೇಕು. 2018-19ರವರೆಗೆ ಕೇವಲ ನಿವಾಸಿ, ನಿವಾಸಿ ಆದರೆ ಸಾಮಾನ್ಯ ನಿವಾಸಿ ಮತ್ತು ಅನಿವಾಸಿ ಎಂಬ ಆಯ್ಕೆಗಳನ್ನು ಆಯ್ದುಕೊಂಡರೆ ಸಾಕಿತ್ತು.

ನಿವಾಸಿಯೇತರ ತೆರಿಗೆದಾರರು ತೆರಿಗೆ ಪಾವತಿ ದೃಢೀಕರಣ ಸಂಖ್ಯೆಯೊಂದಿಗೆ ವಿದೇಶದಲ್ಲಿರುವ ವಾಸದ ಮಾಹಿತಿಗಳನ್ನು ಒದಗಿಸಬೇಕು. ಪ್ರಸಕ್ತ ಹಣಕಾಸು ವರ್ಷದಲ್ಲಿ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ವಾಸಿಸಿದ್ದ ವಿವರಗಳನ್ನು ವಿದೇಶಗಳಲ್ಲಿ ಭಾರತೀಯ ನಾಗರಿಕರು (ಒಸಿಐ) ಅಥವಾ ಭಾರತ ಮೂಲದ ವ್ಯಕ್ತಿಗಳು (ಪಿಐಒ) ಸಲ್ಲಿಸುವುದು ಅಗತ್ಯ.

ಏಪ್ರಿಲ್ 1 ರಿಂದ ಪ್ರಮುಖ 6 ಬದಲಾವಣೆಗಳು ಆಗಲಿವೆ, ಸಿದ್ದರಾಗಿ... ಏಪ್ರಿಲ್ 1 ರಿಂದ ಪ್ರಮುಖ 6 ಬದಲಾವಣೆಗಳು ಆಗಲಿವೆ, ಸಿದ್ದರಾಗಿ...

ನೀವು ಸ್ಥಿರ ಆಸ್ತಿಯನ್ನು ಮಾರಾಟ ಮಾಡಿದ್ದರೆ, ಹೆಚ್ಚು ಕಠಿಣವಾದ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ನೀವು ಖರೀದಿದಾರರ ಹೆಸರು, ಪ್ಯಾನ್, ವರ್ಗಾಯಿಸಿದ ಮೊತ್ತ ಮತ್ತು ಆಸ್ತಿಯ ವಿಳಾಸಗಳನ್ನು ನಮೂದಿಸಬೇಕು. ಬಹುಖರೀದಿದಾರರು ಇದ್ದಲ್ಲಿ ಪ್ರತಿಯೊಬ್ಬರ ಮಾಲೀಕತ್ವ ಮತ್ತು ಮೊತ್ತದ ಷೇರುಗಳ ವಿವರಗಳನ್ನು ಹಂಚಿಕೊಳ್ಳಬೇಕು.

ಐಟಿಆರ್ 1 ಬೇಕು/ಬೇಡ

ಐಟಿಆರ್ 1 ಬೇಕು/ಬೇಡ

* ನೀವು 50 ಲಕ್ಷದವರೆಗೆ ಸಂಬಳ, ಪಿಂಚಣಿ ಅಥವಾ ಬಡ್ಡಿ ಮೂಲಕ ಆದಾಯ ಹೊಂದಿರುವ ಸಾಮಾನ್ಯ ನಿವಾಸಿ ವ್ಯಕ್ತಿಯಾಗಿದ್ದಲ್ಲಿ, ಕೃಷಿ ಆದಾಯ 5,000ದವರೆಗೆ ಇದ್ದಲ್ಲಿ ಮತ್ತು ಒಂದು ಸ್ವಂತ ಮನೆ ಹೊಂದಿದ್ದಲ್ಲಿ ಐಟಿಆರ್ 1 (ಸಹಜ್) ಬಳಸಬೇಕು.

* ನೀವೊಂದು ಕಂಪೆನಿಯ ನಿರ್ದೇಶಕರಾಗಿದ್ದು ಅಥವಾ ಪಟ್ಟಿಮಾಡದ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ಅಥವಾ ಬಂಡವಾಳ ಲಾಭ/ನಷ್ಟಗಳನ್ನು ಘೋಷಿಸಬೇಕಿದ್ದರೆ ಐಟಿಆರ್ 1ನ್ನು ಬಳಸುವುದು ಬೇಡ.

ಐಟಿಆರ್ 2 ಬೇಕು/ಬೇಡ

ಐಟಿಆರ್ 2 ಬೇಕು/ಬೇಡ

* ಐಟಿಆರ್ 1ನ್ನು ಬಳಸಲು ಸಾಧ್ಯವಾಗದ ಸಂಬಳ ಪಡೆಯುವ ವ್ಯಕ್ತಿಯಾಗಿದ್ದರೆ ಐಟಿಆರ್ 2ಅನ್ನು ಬಳಸಬೇಕಾಗುತ್ತದೆ.

* ಯಾವುದೇ ವ್ಯವಹಾರ ಅಥವಾ ವೃತ್ತಿಯಿಂದ ಆದಾಯ ಹೊಂದಿಲ್ಲದೆ ಇದ್ದರೆ ಐಟಿಆರ್ 2 ಬಳಸುವ ಅಗತ್ಯವಿಲ್ಲ.

* ನೀವು ಪಟ್ಟಿಮಾಡದ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ, ಐಟಿಆರ್ 1ಅನ್ನು ಈ ವರ್ಷ ಬಳಸುವಂತಿಲ್ಲ. ಕಂಪೆನಿಯೊಂದರ ನಿರ್ದೇಶಕರಾಗಿರುವ ವ್ಯಕ್ತಿ ಕೂಡ ಇದನ್ನು ಬಳಸುವಂತಿಲ್ಲ. 5,000 ರೂಗಿಂತ ಕಡಿಮೆ ನಿಮ್ಮ ಕೃಷಿ ಆದಾಯ ಇದ್ದರೆ ಈ ಅರ್ಜಿ ನಿಮಗೆ ಪ್ರಸ್ತುತವಾಗುತ್ತದೆ. ಒಂದು ವೇಳೆ ಅದನ್ನು ಮೀರಿದರೆ ಐಟಿಆರ್ 2 ಬಳಸಬೇಕಾಗುತ್ತದೆ.

* ಐಟಿಆರ್ 2 ನಲ್ಲಿ ನಿಮ್ಮ ಬಳಿ ಇರುವ ಪಟ್ಟಿಮಾಡದ ಷೇರುಗಳ ವಿವರ ಒದಗಿಸಬೇಕು. ಇದರಲ್ಲಿ ಕಂಪೆನಿಗಳ ಹೆಸರು, ಪ್ಯಾನ್, ನಿಮ್ಮ ಬಳಿ ಇರುವ ಷೇರುಗಳ ಸಂಖ್ಯೆ, ಖರೀದಿ ಅಥವಾ ಚಂದಾದಾರಿಕೆ ವೆಚ್ಚ, ಪ್ರತಿ ಷೇರಿನ ಹಂಚಿಕೆ/ಖರೀದಿ ಮೊತ್ತ, ವರ್ಷದಲ್ಲಿ ವರ್ಗಾಯಿಸಲಾದ ಷೇರುಗಳು ಮತ್ತು ಅಂತ್ಯದ ಬಾಕಿಯ ವಿವರಗಳಿರಬೇಕು.

ಇನ್ನುಳಿದ ಬದಲಾವಣೆಗಳು

ಇನ್ನುಳಿದ ಬದಲಾವಣೆಗಳು

* ಐಟಿಆರ್ 1ರಲ್ಲಿ ಎಚ್‌ಆರ್ಎಯಂತಹ ಆದಾಯ ವಿನಾಯಿತಿ ಮಾಹಿತಿಗಳನ್ನು ಒದಗಿಸಬೇಕು. ಇತರೆ ಮೂಲಗಳ ಆದಾಯದ ಸ್ವರೂಪವನ್ನು ನಿರ್ದಿಷ್ಟಪಡಿಸಬೇಕು.

* ಐಟಿಆರ್ 1ರಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತು ಬ್ಯಾಂಕ್, ಹಾಗೂ ಪೋಸ್ಟ್ ಆಫೀಸ್ ಠೇವಣಿಯ ಬಡ್ಡಿಗಳ ಮೇಲಿನ ವಿನಾಯಿತಿಯನ್ನು 80TTB ಅಡಿ ತರಲಾಗಿದೆ.

ವಿವರವಾದ ಮಾಹಿತಿ ಐಟಿಆರ್ 2

ವಿವರವಾದ ಮಾಹಿತಿ ಐಟಿಆರ್ 2

* ಐಟಿಆರ್ 2 ನಲ್ಲಿ ಭಾರತದಲ್ಲಿ ಮತ್ತು ಹೊರದೇಶಗಳಲ್ಲಿ ಕಳೆದ ದಿನಗಳ ಸಂಖ್ಯೆಯ ಸವಿವರ ಮಾಹಿತಿ ನೀಡಬೇಕು. ಇದು ವಾಸದ ಸ್ಥಾನಮಾನವನ್ನು ನಿರ್ಧರಿಸಲು ಅಗತ್ಯ.

* ಪಟ್ಟಿಯಲ್ಲಿರದ ಷೇರುಗಳ ಮಾಹಿತಿ ಬಹಿರಂಗಪಡಿಸುವುದು

* ಗೃಹ ಖರೀದಿದಾರು, ಆಸ್ತಿ ಮಾರಾಟ ಮಾಡಿದ್ದರೆ ಅದರ ವಿವರ.

* ಜಮೀನಿನ ಮಾಲೀಕತ್ವ, ಗಾತ್ರ, ಸ್ಥಳ ಮತ್ತು ವಿಳಾಸ ಹಾಗೂ ನೀರಾವರಿಯ ಸ್ಥಿತಿ ಸೇರಿದಂತೆ ಕೃಷಿ ಆದಾಯಕ್ಕೆ ಸಂಬಂಧಿಸಿದ ವಿವರ ನೀಡಬೇಕು.

ಕೃಷಿ ಆದಾಯ

ಕೃಷಿ ಆದಾಯ

ಪ್ರಸಕ್ತ ಸಾಲಿನಲ್ಲಿ ಕೃಷಿ ಅದಾಯದ ಬಗ್ಗೆ ಗಮನ ಹರಿಸಲಾಗಿದೆ. 5 ಲಕ್ಷವನ್ನು ಮೀರುವ ಕೃಷಿ ಆದಾಯವನ್ನು ಜಿಲ್ಲೆಯ ಹೆಸರು, ಪಿನ್ ಕೋಡ್, ಭೂಮಿಯ ಅಳತೆ, ಸ್ವಂತ ಅಥವಾ ಗೇಣಿಗೆ ಪಡೆದುಕೊಂಡಿದ್ದೇ, ನೀರಾವರಿ ಅಥವಾ ಆದಾಯ ನೀತಿಗಳಿಂದ ವಿನಾಯಿತಿಗೆ ಅರ್ಹವಾದ ಮಳೆ ಆಶ್ರಿತವೇ ಎಂಬ ಮುಂತಾದ ಹೆಚ್ಚುವರಿ ಮಾಹಿತಿಗಳನ್ನು ಪ್ರತ್ಯೇಕವಾಗಿ ಒದಗಿಸಬೇಕು.

English summary

changes new details requirements in Income Tax return forms taxpayer

Taxpayers have to contend new steps while filing Income Tax returns for the assessment year 2019-20.
Story first published: Monday, April 15, 2019, 18:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X