For Quick Alerts
ALLOW NOTIFICATIONS  
For Daily Alerts

ಶಾಕಿಂಗ್ ನ್ಯೂಸ್! ನೋಟು ರದ್ದತಿ ಪರಿಣಾಮ 50 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ

2016ರ ನವೆಂಬರ್‌ 8 ರಂದು ಪ್ರಧಾನಿ ಮೋದಿಯವರು ರೂ. 500/1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದು ಭಾರೀ ಪರಿಣಾಮವನ್ನೇ ಬೀರಿದ್ದು, ಬರೋಬ್ಬರಿ 50 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಅಧ್ಯಯನ ವರದಿ ಮಾಡಿದೆ.

|

2016ರ ನವೆಂಬರ್‌ 8 ರಂದು ಪ್ರಧಾನಿ ಮೋದಿಯವರು ರೂ. 500/1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದು ಭಾರೀ ಪರಿಣಾಮವನ್ನೇ ಬೀರಿದ್ದು, ಬರೋಬ್ಬರಿ 50 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಅಧ್ಯಯನ ವರದಿ ಮಾಡಿದೆ.
2018 ರಲ್ಲಿ ಭಾರತದ ನಿರುದ್ಯೋಗವು ಶೇಕಡಾ 6 ರಷ್ಟನ್ನು ತಲುಪಿದ್ದು, 2000 ಮತ್ತು 2010 ರ ದಶಕದಲ್ಲಿ ಇದು ದುಪ್ಪಟ್ಟು ಏರಿಕೆಯಾಗಿದೆ. ಅಜೀಮ್ ಪ್ರೇಮ್ ಜೀ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಸ್ಟೈನಬಲ್ ಎಂಪ್ಲಾಯ್ಮೆಂಟ್ ಸಂಸ್ಥೆ ವರದಿ ಇದು ಬಹಿರಂಗಗೊಳಿಸಿದೆ.

 

ದೇಶದಾದ್ಯಂತ ಚಲಾವಣೆಯಲ್ಲಿದ್ದ ಶೇ. 80ರಷ್ಟು ನೋಟುಗಳು 2016ರ ನವೆಂಬರ್‌ ನಲ್ಲಿ ಮೌಲ್ಯ ಕಳೆದುಕೊಂಡವು. ಇದರಿಂದಾಗಿ ಕಪ್ಪು ಹಣ, ನಕಲಿ ನೋಟು ಸಮಸ್ಯೆಗಳು ಕಡಿಮೆಯಾಗುವವು ಎಂದು ನಿರ್ಧಾರ ಕೈಗೊಂಡಿದ್ದಾಗಿ ಸರಕಾರ ಸಮರ್ಥನೆ ನೀಡಿತ್ತು.

ಶೇ. 99.3ರಷ್ಟು ನೋಟುಗಳು ಆರ್‌ಬಿಐಗೆ

ಶೇ. 99.3ರಷ್ಟು ನೋಟುಗಳು ಆರ್‌ಬಿಐಗೆ

ವಾಸ್ತವದಲ್ಲಿ ನಿಷೇಧಗೊಂಡಿದ್ದ ನೋಟುಗಳ ಪೈಕಿ ಶೇ. 99.3ರಷ್ಟು ನೋಟುಗಳು ಆರ್‌ಬಿಐಗೆ ಮರಳಿದ್ದವು. ಅಲ್ಲದೇ ನೋಟು ರದ್ದತಿ ಸಂಪೂರ್ಣ ವಿಫಲವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ನ್ಯಾಷನಲ್‌ ಸ್ಯಾಂಪಲ್‌ ಸರ್ವೇ ಆಫೀಸ್‌ (ಎನ್‌ಎಸ್‌ಎಸ್‌ಒ) ಬಿಡುಗಡೆ ಮಾಡಿದ 2017-18ರ ಎಂಪ್ಲಾಯ್ಮೆಂಟ್‌ ಸರ್ವೇಯಲ್ಲಿ ಉದ್ಯೋಗ ನಷ್ಟ 40 ವರ್ಷಗಳಲ್ಲೇ ಅಧಿಕ ಎನಿಸಿಕೊಂಡಿತ್ತು.

50 ಲಕ್ಷ ಉದ್ಯೋಗ ನಷ್ಟ

50 ಲಕ್ಷ ಉದ್ಯೋಗ ನಷ್ಟ

ಮಂಗಳವಾರ ಅಜೀಮ್‌ ಪ್ರೇಮ್‌ಜೀ ಯೂನಿವರ್ಸಿಟಿಯ ಸೆಂಟರ್‌ ಫಾರ್‌ ಸಸ್ಟೈನೇಬಲ್‌ ಎಂಪ್ಲಾಯ್ಮೆಂಟ್ ಸಂಶೋಧಕರ 'ಸ್ಟೇಟ್‌ ಆಫ್‌ ವರ್ಕಿಂಗ್ ಇಂಡಿಯಾ' ವರದಿ ಬಿಡುಗಡೆಯಾಗಿದೆ. 2016 ನವೆಂಬರ್‌ ನಂತರ ಉದ್ಯೋಗ ಕುಸಿತ ಆರಂಭವಾಗಿದ್ದು, ನೋಟು ನಿಷೇಧದಿಂದ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ. 2018ರಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಶೇ. 6ಕ್ಕೆ ಹೆಚ್ಚುವ ಮೂಲಕ ಗರಿಷ್ಠ ಪ್ರಮಾಣವನ್ನು ತಲುಪಿದೆ.

ಯುವಕರ ಮೇಲೆ ಎಫೆಕ್ಟ್
 

ಯುವಕರ ಮೇಲೆ ಎಫೆಕ್ಟ್

ಗ್ರಾಮೀಣ ಮತ್ತು ನಗರ ಎರಡು ಪ್ರದೇಶಗಳಲ್ಲಿ ನಿರೋದ್ಯಗಿಗಳ ಪೈಕಿ 20-24 ವರ್ಷದ ಯುವಕರೇ ಹೆಚ್ಚಿದ್ದಾರೆ ಎಂದು ಸೆಂಟರ್‌ ಫಾರ್‌ ಸಸ್ಟೈನೇಬಲ್‌ ಎಂಪ್ಲಾಯ್ಮೆಂಟ್ ಸಂಶೋಧಕರ 'ಸ್ಟೇಟ್‌ ಆಫ್‌ ವರ್ಕಿಂಗ್ ಇಂಡಿಯಾ' ವರದಿ ಹೇಳಿದೆ. ಅಧ್ಯಯನವು ಖಾಸಗಿ ಸಂಸ್ಥೆ ಸಿಎಂಐಇ ನೀಡಿದ ಅಂಶಗಳನ್ನು ಒಳಗೊಂಡಿದ್ದು, ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ನಿರಾಕರಿಸಿದ ಪಿರಿಯಾಡಿಕ್‌ ಲೇಬರ್‌ ಫೋರ್ಸ್‌ ಸಮೀಕ್ಷೆ ಅಂಶಗಳನ್ನು ಅಧ್ಯಯನದಲ್ಲಿ ಬಳಸಿಲ್ಲ.

Read more about: note ban money rbi narendra modi
English summary

50 Lakh People Have Lost Their Jobs Since the Demonetisation Exercise

Azim Premji University's Centre for Sustainable Employment, 50 lakh people lost their jobs after Narendra Modi’s demonetisation exercise in November 2016.
Story first published: Wednesday, April 17, 2019, 16:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X