For Quick Alerts
ALLOW NOTIFICATIONS  
For Daily Alerts

ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಹಾಕಿದ ಹಣ ವಾಪಸ್: ಆರ್ಟಿಐನಿಂದ ಬಹಿರಂಗ

ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಶಾನ್ ಸಮ್ಮಾನ್ ನಿಧಿ (PM-Kisan) ಯೋಜನೆ ಅಡಿಯಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದ್ದ ಕೋಟಿ ರೂಪಾಯಿ ಹಣ ಕೆಲವೇ ಗಂಟೆ ಅಥವಾ ದಿನಗಳಲ್ಲಿ ವಾಪಸ್ ಪಡೆಯಲಾಗಿದೆ.

|

ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಶಾನ್ ಸಮ್ಮಾನ್ ನಿಧಿ (PM-Kisan) ಯೋಜನೆ ಅಡಿಯಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದ್ದ ಕೋಟಿ ರೂಪಾಯಿ ಹಣ ಕೆಲವೇ ಗಂಟೆ ಅಥವಾ ದಿನಗಳಲ್ಲಿ ವಾಪಸ್ ಪಡೆಯಲಾಗಿದೆ ಎಂದು ದ ವೈರ್ ಸಲ್ಲಿಸಿದ ಮಾಹಿತಿಯ ಹಕ್ಕು (ಆರ್ಟಿಐ) ಅರ್ಜಿಯ ಮೂಲಕ ಬಹಿರಂಗಗೊಂಡಿದೆ.
ಈ ವರದಿಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದ ಹಣ ಕೆಲವೇ ಗಂಟೆಗಳಲ್ಲಿ ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

ಕೇಲವೆ ಗಂಟೆ/ದಿನಗಳಲ್ಲಿ ಹಣ ವಾಪಸ್!

ಕೇಲವೆ ಗಂಟೆ/ದಿನಗಳಲ್ಲಿ ಹಣ ವಾಪಸ್!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ ರೂ. 6,000 ಜಮಾ ಮಾಡಲಾಗುವುದು. ಮೂರು ಕಂತುಗಳಲ್ಲಿ ತಲಾ ರೂ. 2000 ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಿತ್ತು.
ಯೋಜನೆಯ ಮೊದಲ ಕಂತಿನ ರೂಪದಲ್ಲಿ ರೈತರ ಬ್ಯಾಂಕ್ ಖಾತೆಗೆ ಹಾಕಿರುವ ರೂ. 2000 ಕೆಲವೇ ಗಂಟೆಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ವಾಪಸ್ ಪಡೆದುಕೊಳ್ಳಲಾಗಿದೆ.

27,307 ಖಾತೆಗಳಿಂದ ಹಣ ಹಿಂದಕ್ಕೆ

27,307 ಖಾತೆಗಳಿಂದ ಹಣ ಹಿಂದಕ್ಕೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ,ಕೆನರಾ ಬ್ಯಾಂಕ್ ಸೇರಿದಂತೆ ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳು ಈ ಯೋಜನೆಯಡಿ ಅನೇಕ ಫಲಾನುಭವಿಗಳ ಖಾತೆಗೆ ಹಾಕಲಾಗಿದ್ದ ಹಣವನ್ನು ಕಡಿತ ಮಾಡಲಾಗಿದೆ ಎಂದು ತಿಳಿಸಿವೆ.
2019 ರ ಮಾರ್ಚ್ 8 ರ ವರೆಗೆ ಎಸ್ಬಿಐ ವತಿಯಿಂದ 27,307 ಖಾತೆಗಳಿಗೆ ರೂ. 5.46 ಕೋಟಿ ಜಮಾ ಮಾಡಲಾಗಿತ್ತು. ಬಳಿಕ ಅದನ್ನು ಹಿಂದಕ್ಕೆ ಪಡೆಯಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ ಸುಮಾರು 3 ಕೋಟಿ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ ಎಂದು ಕೃಷಿ ಸಚಿವಾಲಯ ಹೇಳಿದೆ. ಆದರೆ ಹಣ ವಾಪಸ್ ಪಡೆದ ಬಗ್ಗೆ ಮಾಹಿತಿ ಇಲ್ಲ ಎಂದಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ಹೇಳಿದ್ದೇನು?
 

ಬ್ಯಾಂಕ್ ಆಫ್ ಮಹಾರಾಷ್ಟ್ರ ಹೇಳಿದ್ದೇನು?

ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಠೇವಣಿಯಾದ ಹಣ ಕಡಿತಗೊಳಿಸಲಾಗಿದೆ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ದೃಢಪಡಿಸಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ 1,88,000 ಖಾತೆಗಳಲ್ಲಿ 37.70 ಕೋಟಿ ರೂಪಾಯಿಗಳನ್ನು ಜಮಾ ಮಾಡಿತ್ತು. ಆದರೆ ಇದರಲ್ಲಿ ರೂ. 61.2 ಲಕ್ಷ ಹಿಂಪಡೆಯಲಾಗಿದೆ.

ಆಂಧ್ರ ಬ್ಯಾಂಕ್

ಆಂಧ್ರ ಬ್ಯಾಂಕ್

ಆರ್ಟಿಐಗೆ ಪ್ರತಿಕ್ರಿಯೆಯಾಗಿ, ಆಂಧ್ರ ಬ್ಯಾಂಕ್ ಸುಮಾರು ರೂ. 170 ಕೋಟಿ ಮೊತ್ತವನ್ನು ಸುಮಾರು 8,54,000 ಖಾತೆಗಳಲ್ಲಿ ಜಮಾ ಮಾಡಿತ್ತು ಎಂದು ಹೇಳಿದೆ. ಇದರಲ್ಲಿ ರೂ. 90,50,02,178 ಹಿಂತೆಗೆದುಕೊಳ್ಳಲಾಗಿದೆ.

ರೈತರ ಆರೋಪ

ರೈತರ ಆರೋಪ

ತಮ್ಮ ಖಾತೆಗಳಿಗೆ ಜಮೆ ಆಗಿದ್ದ ರೂ. 2000 ಕೆಲವೇ ಗಂಟೆಗಳಲ್ಲಿ ಹಿಂದಕ್ಕೆ ಪಡೆಯಲಾಗಿದೆ ಎಂದು ರೈತರು ಆರೋಪಿಸಿಲಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಆನ್ಲೈನ್ ಸುದ್ದಿ ಜಾಲ ತಾಣ ‘ದಿ ವೈರ್' ಪಡೆದ ಮಾಹಿತಿಯಲ್ಲಿ ವಿಷಯ ಬಹಿರಂಗಗೊಂಡಿದೆ.

ಮುಜುಗರ ಸಂಭವ

ಮುಜುಗರ ಸಂಭವ

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನ ಮಂತ್ರಿ ಪಿಎಂ ಕಿಸಾನ್ ಯೋಜನೆ ಯಶಸ್ವಿಯಾಗಿಸುವಂತೆ ಕೇಳಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ರೈತರ ಖಾತೆಗೆ ಹಾಕಿದ ಹಣವನ್ನು ವಾಪಸ್ ಪಡೆಯುತ್ತಿರುವ ಮಾಹಿತಿ ಬಯಲಾಗಿದ್ದು, ಮುಜುಗರ ಆದಂತಾಗಿದೆ.

English summary

Under PM Kisan Scheme, Why is Money Credited Into Some Farmers' Accounts Quickly Deducted?

RTI revealed that crores of rupees credited into farmers’ accounts under the Modi government’s ambitious PM Kisan Samman Nidhi.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X