For Quick Alerts
ALLOW NOTIFICATIONS  
For Daily Alerts

ಟಿಸಿಎಸ್ ವಿಶ್ವದ ಮೂರನೆಯ ಅತಿದೊಡ್ಡ ಐಟಿ ಸೇವಾ ಕಂಪನಿ

ಟಿಸಿಎಸ್ ಸಂಸ್ಥೆ ಡಿಎಕ್ಸಸಿ ಟೆಕ್ನಾಲಜಿ ಅನ್ನು ಮೀರಿಸಲಿದ್ದು, ಎರಡು ವರ್ಷಗಳಲ್ಲಿ ಐಟಿ (ಮಾಹಿತಿ ತಂತ್ರಜ್ಞಾನ) ಉದ್ಯಮದಲ್ಲಿ ಮೊದಲ ಬದಲಾವಣೆಯಾಗಿದೆ.

|

2018-19ರ ಸಾಲಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ (ಟಿಸಿಎಸ್) ವಿಶ್ವದ ಮೂರನೆಯ ಅತಿದೊಡ್ಡ ಸಾಫ್ಟ್ವೇರ್ ಸೇವಾ ಪೂರೈಕೆದಾರ ಸಂಸ್ಥೆಯಾಗಿ ಹೊರಹೊಮ್ಮಿದೆ.

 
ಟಿಸಿಎಸ್ ವಿಶ್ವದ ಮೂರನೆಯ ಅತಿದೊಡ್ಡ ಐಟಿ ಸೇವಾ ಕಂಪನಿ

ಟಿಸಿಎಸ್ ಸಂಸ್ಥೆ ಡಿಎಕ್ಸಸಿ ಟೆಕ್ನಾಲಜಿ ಅನ್ನು ಮೀರಿಸಲಿದ್ದು, ಎರಡು ವರ್ಷಗಳಲ್ಲಿ ಐಟಿ (ಮಾಹಿತಿ ತಂತ್ರಜ್ಞಾನ) ಉದ್ಯಮದಲ್ಲಿ ಮೊದಲ ಬದಲಾವಣೆಯಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿಮಿಟೆಡ್ (ಟಿಸಿಎಸ್) ಡಿಎಕ್ಸಸಿ ಟೆಕ್ನಾಲಜಿ ಯನ್ನು ಮೀರಿಸಿದರೆ, ಐಬಿಎಂ, ಅಕ್ಸೆಂಚರ್ ಕ್ಕಿಂತ ಹಿಂದುಳಿದಿದೆ. 2017 ರಲ್ಲಿ ಹೆವ್ಲೆಟ್ ಪ್ಯಾಕರ್ಡ್ ಮತ್ತು ಕಂಪ್ಯೂಟರ್ ಸೈನ್ಸಸ್ ವಿಲೀನದೊಂದಿಗೆ ಡಿಎಕ್ಸ್ಸಿ ಟೆಕ್ನಾಲಜಿ ಅಸ್ತಿತ್ವಕ್ಕೆ ಬಂದಿದೆ.

 

ಡಿಎಕ್ಸ್ಸಿ ಟಿಕ್ನಾಲಜಿ ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶವನ್ನು ಮೇ 23 ರಂದು ಘೋಷಿಸಲಿದ್ದು, ಈ ಫಲಿತಾಂಶ ಉತ್ತಮ ಬೆಳವಣಿಗೆ ಸಾಧಿಸುವುದು ಅಸಂಭವ ಎಂದು ಹೆಚ್ಚಿನ ವಿಶ್ಲೇಷಕರು ಹೇಳಿದ್ದಾರೆ.

ಟಿಸಿಎಸ್ ಶೇ. 9.6 ರಷ್ಟು ಏರಿಕೆ ಕಂಡಿದೆ ಅಥವಾ ಹೊಸ ಉದ್ಯಮದಲ್ಲಿ 1.82 ಬಿಲಿಯನ್ ಡಾಲರ್ ಒಳಗೊಂಡಿದೆ. ಮಾರ್ಚ್ 31 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 20.91 ಶತಕೋಟಿ ಡಾಲರ್ ನಷ್ಟು ಆದಾಯವನ್ನು ಹೊಂದಿದೆ. 2018-19 ರ ಮೊದಲ ಒಂಬತ್ತು ತಿಂಗಳುಗಳಲ್ಲಿ ಟಿಸಿಎಸ್ 15.52 ಶತಕೋಟಿ ಡಾಲರ್ ಆದಾಯವನ್ನು ಸೃಷ್ಟಿಸಿದೆ. ಆದರೆ DXC 15.47 ಶತಕೋಟಿ ಡಾಲರ್ ಆದಾಯ ಗಳಿಸಿತು. ಅಂದರೆ ಟಿಸಿಎಸ್ ಆದಾಯದಲ್ಲಿ DXC ಯನ್ನು ಮೀರಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಟಿಸಿಎಸ್ ಸಾಕಷ್ಟು ಬದಲಾವಣೆಗಳ್ನು ಕಂಡಿದೆ. ಉದ್ಯೋಗಿಗಳ ಕಾರ್ಯಕ್ಷಮತೆ, ಸಿಬ್ಬಂದಿ ಬದಲಾವಣೆ ಪ್ರಮುಖ ಪಾತ್ರವಹಿಸಿದೆ. 2017 ರಲ್ಲಿ, ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ರಾಜೇಶ್ ಗೋಪಿನಾಥನ್ ರನ್ನು ಮುಖ್ಯ ಕಾರ್ಯನಿರ್ವಾಹಕರಾಗಿ ಟಿಸಿಎಸ್ ಜವಾಬ್ಧಾರಿ ವಹಿಸಿಕೊಟ್ಟಿತು. ಟಿಸಿಎಸ್ ಕಂಪನಿ ತನ್ನ ಎಲ್ಲಾ ಹಿರಿಯ ಕಾರ್ಯನಿರ್ವಾಹಕರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇದು ಬೆಳವಣಿಗೆ ಮತ್ತು ಲಾಭದಾಯಕತೆಯನ್ನು ಸುಧಾರಿಸಿತು. ಇದನ್ನು ಭಾರತೀಯ ಸಾಂಸ್ಥಿಕ ಘಟಕದಲ್ಲಿನ ಅತ್ಯಂತ ಸುಗಮ ನಿರ್ವಹಣಾ ಪರಿವರ್ತನೆಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯಿಸಲಾಗಿದೆ.

Read more about: tcs it money business
English summary

TCS set to become world’s third-largest IT services company

Tata Consultancy Services Ltd (TCS) is set to surpass DXC Technology Co. to become the world’s third-largest software services provider in fiscal 2018-19.
Story first published: Wednesday, May 8, 2019, 12:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X