For Quick Alerts
ALLOW NOTIFICATIONS  
For Daily Alerts

ಕರಡಿ ಕುಣಿತ! ಸೆನ್ಸೆಕ್ಸ್ ಮತ್ತೆ 300 ಅಂಕ ಕುಸಿತ

ಮುಂಬೈ ಷೇರುಪೇಟೆ ನಿರಂತರವಾಗಿ ಕಳೆದ ಕೆಲ ದಿನಗಳಿಂದ ನಷ್ಟ ಅನುಭವಿಸುತ್ತಿದ್ದು, ಗುರುವಾರದ ಆರಂಭಿಕ ವಹಿವಾಟಿನ ಸಂದರ್ಭದಲ್ಲಿ 200 ಅಂಕಗಳ ಕುಸಿತ ಕಂಡಿತ್ತು. ಇದು ದಿನದ ಮಧ್ಯಂತರದಲ್ಲಿ 300 ಪಾಯಿಂಟ್ ಕುಸಿತ ದಾಟಿತ್ತು.

|

ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಮುಂದುವರೆದಿದ್ದು, ಜಾಗತಿಕ ಷೇರುಪೇಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಮುಂಬೈ ಷೇರುಪೇಟೆ ನಿರಂತರವಾಗಿ ಕಳೆದ ಕೆಲ ದಿನಗಳಿಂದ ನಷ್ಟ ಅನುಭವಿಸುತ್ತಿದ್ದು, ಗುರುವಾರದ ಆರಂಭಿಕ ವಹಿವಾಟಿನ ಸಂದರ್ಭದಲ್ಲಿ 200 ಅಂಕಗಳ ಕುಸಿತ ಕಂಡಿತ್ತು. ಇದು ದಿನದ ಮಧ್ಯಂತರದಲ್ಲಿ 300 ಪಾಯಿಂಟ್ ಕುಸಿತ ದಾಟಿತ್ತು.

ಕರಡಿ ಕುಣಿತ! ಸೆನ್ಸೆಕ್ಸ್ ಮತ್ತೆ 300 ಅಂಕ ಕುಸಿತ

ಅಮೆರಿಕಾ ಮತ್ತು ಚೀನಾ ದೇಶಗಳ ನಡುವಿನ ವಾಣಿಜ್ಯ ಬಿಕ್ಕಟ್ಟು ಶಮನಕ್ಕೆ 11ನೇ ಸುತ್ತಿನ ಮಾತುಕತೆ ಮೇ ತಿಂಗಳ 9 ಮತ್ತು10 ರಂದು ವಾಷಿಂಗ್ಟನ್‌ ನಲ್ಲಿ ನಡೆಯಲಿದೆ. ಉಬಯ ದೇಶಗಳ ನಡುವಿನ ಮಾತುಕತೆ ಎಷ್ಟರ ಮಟ್ಟಿಗೆ ಫಲದಾಯಕ ಆಗಬಹುದು ಎಂಬುದು ಕೂಡು ಷೇರುಪೇಟೆಯ ಮೇಲೆ ಪ್ರಭಾವ ಬೀರಲಿದೆ.
ಆಕಸ್ಮಾತ್ ಯುಎಸ್ಎ ನಮ್ಮ ದೇಶದ ಉತ್ಪನ್ನಗಳ ಮೇಲೆ ಶೇ. 25 ಆಮದು ಸುಂಕ ಹಾಕಿದರೆ ನಾವು ಕೂಡ ಅಮೆರಿಕನ್‌ ಉತ್ಪನ್ನಗಳಿಗೆ ತಸರಿಯಾದ ಆಮದು ಸುಂಕ ವಿಧಿಸುತ್ತೇವೆ ಎಂದು ಚೀನಾ ಹೇಳಿರುವುದು ಜಾಗತಿಕ ಷೇರು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಬೆಳಿಗ್ಗೆ 10.45ರ ಹಿತ್ತಿಗೆ ಸೆನ್ಸೆಕ್ಸ್ ಸೂಚ್ಯಂಕ 79.61 ಪಾಯಿಂಟ್ ನಷ್ಟದೊಂದಿಗೆ 37,709.52 ಅಂಕಗಳಲ್ಲೂ ನಿಫ್ಟಿ ಸೂಚ್ಯಂಕ 22 ಅಂಕಗಳ ನಷ್ಟದೊಂದಿಗೆ ವ್ಯವಹಾರ ನಿರತವಾಗಿದ್ದವು.
ಅದೇ ರೀತಿ ಮಧ್ಯಾಹ್ನ 2.45ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕ 183 ಅಂಕ ಕುಸಿತದೊಂದಿಗೆ 37605.75 ಅಂಶಗಳಲ್ಲಿ ಹಾಗು ನಿಪ್ಟಿ ಸೂಚ್ಯಂಕ 34 ಪಾಯಿಂಟ್ ನಷ್ಟದೊಂದಿಗೆ 11325 ಅಂಕಗಳಲ್ಲಿ ವ್ಯವಹಾರ ನಡೆಸಿದವು.
ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯವ 16 ಪೈಸೆಗಳ ಹಿನ್ನಡೆ ಕಂಡು ರೂ. 69.87 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

ರಿಲಯನ್ಸ್ ಇಂಡಸ್ಟ್ರೀಸ್, ಎನ್ಟಿಪಿಸಿ, ಕೋಲ್ ಇಂಡಿಯಾ, ಭಾರತ್ ಪೆಟ್ರೋಲಿಯಂ, ಅದಾನಿ ಪೋರ್ಟ್ಸ್, ಜೆಎಸ್ಡಬ್ಲ್ಯೂ ಸ್ಟೀಲ್, ಭಾರ್ತಿ ಇನ್ಫ್ರಾಟೆಲ್, ಎಚ್ಸಿಎಲ್ ಟೆಕ್ನಾಲಜೀಸ್ ಮತ್ತು ಏಷ್ಯನ್ ಪೇಂಟ್ಸ್ ನಷ್ಟ ಅನುಭವಿಸಿದವು. ಮತ್ತೊಂದೆಡೆ, ಝೀ ಎಂಟರ್ಟೇನ್ಮೆಂಟ್, ಯೆಸ್ ಬ್ಯಾಂಕ್, ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಹೀರೋ ಮೋಟೋಕಾರ್ಪ್, ಬಜಾಜ್ ಫಿನ್ಸೆರ್ ಮತ್ತು ಬಜಾಜ್ ಫೈನಾನ್ಸ್ ಕಂಪನಿಗಳು ಲಾಭ ಗಳಿಸಿವೆ.
ಇಂದು ಬ್ರೆಂಟ್‌ ಕಚ್ಚಾತೈಲ ಬೆಲೆ ಶೇ.0.75ರ ಇಳಿಕೆ ಕಂಡು ಬ್ಯಾರಲ್‌ಗೆ 69.87 ಡಾಲರ್‌ ನಷ್ಟಿತ್ತು.
ಇಂದು ಬೆಳಿಗ್ಗೆ ಶಾಂಘೈ, ಹಾಂಕಾಂಗ್‌, ಟೋಕಿಯೋ ಮತ್ತು ಸೋಲ್‌ ಶೇರು ಮಾರುಕಟ್ಟೆಗಳು ಕೂಡ ನಷ್ಟದೊಂದಿಗೆ ಆರಂಭಗೊಂಡವು. ಮ್ಯುಚುವಲ್ ಫಂಡ್

English summary

Sensex Falls Over 300 Points, Nifty Slides Below 11,300

Indian equity benchmarks extended recent losses on Thursday and were on track to close lower for a seventh session in a row.
Story first published: Thursday, May 9, 2019, 14:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X