For Quick Alerts
ALLOW NOTIFICATIONS  
For Daily Alerts

ಡಿವಿಡೆಂಡ್ ಹೇಗೆ ವಿತರಿಸಲಾಗುತ್ತದೆ? ಲಾಭಾಂಶ ಪ್ರಕಟಿಸಿದ ಕಂಪನಿಗಳು ಯಾವುವು?

By ಕೆ ಜಿ ಕೃಪಾಲ್
|

ಈಗಿನ ದಿನಗಳಲ್ಲಿಎಲ್ಲವೂ ವ್ಯಾವಹಾರಿಕ ದೃಷ್ಟಿಯಿಂದ ನಡೆಯುತ್ತಿದ್ದು, ಪ್ರತಿಯೊಂದು ಚಟುವಟಿಕೆಯು ನಗದಿನ ರೂಪದಲ್ಲಿ ಪ್ರತಿಫಲವನ್ನು ಅಪೇಕ್ಷಿಸುತ್ತಿರುವಾಗ, ಷೇರುಗಳಲ್ಲಿ ಹಣದ ಹೂಡಿಕೆಗೆ ಯಾವ ರೀತಿ ಲಾಭವನ್ನಪೇಕ್ಷಿಸಬಹುದು.

ಕಂಪನಿಗಳು ಗಳಿಸಿದ ಲಾಭದಲ್ಲಿ ಸವಕಳಿ, ತೆರಿಗೆ ಮುಂತಾದವುಗಳನ್ನು ತೆಗೆದಿರಿಸಿದ ನಂತರ ಉಳಿದ ಹಣದಲ್ಲಿ ತನ್ನ ಷೇರುದಾರರಿಗೆ ಅವರು ಹೊಂದಿರುವ ಷೇರುಗಳಿಗೆ ಅನುಗುಣವಾಗಿ ಹಂಚುವುದೇ ಲಾಭಾಂಶ(ಡಿವಿಡೆಂಡ್)ವಾಗಿದೆ.

ಈಗ ಕಂಪನಿಗಳು ಲಾಭಗಳಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಹಣವನ್ನು ಆಡಳಿತ ಮಂಡಳಿ ಇಚ್ಛಿಸಿದರೆ ಹೆಚ್ಚಿನ ಲಾಭಾಂಶವನ್ನು ವಿತರಿಸಬಹುದು. ಹೆಚ್ಚಿನ ಹಣವನ್ನು ಕಂಪನಿಯ ಆಂತರಿಕ ಮೂಲಗಳಿಂದ ಒದಗಿಸಬಹುದು.

ಅಕ್ಷಯ ತೃತೀಯದಂದು ಈ 'ಆಸ್ತಿ'ಯನ್ನೂ ಖರೀದಿಸಬಹುದು, ಮಾರಾಟವೂ ಸಲೀಸು

ಲಾಭಾಂಶ ವಿತರಿಸಲು ಇತಿಮಿತಿಗಳಿಲ್ಲ. ಕೆಲವು ಕಂಪನಿಗಳು ಒಂದೇ ಬಾರಿ ಲಾಭಾಂಶ ವಿತರಿಸಿದರೆ ಮತ್ತೆ ಕೆಲವು ಕಂತುಗಳಲ್ಲಿ ವಿತರಿಸುತ್ತವೆ. ಇದನ್ನು ಮಧ್ಯಂತರ ಲಾಭಾಂಶವೆನ್ನುವರು. ಲಾಭಾಂಶ ವಿತರಣೆಯಲ್ಲಿ ಯಾವುದೇ ತೆರಿಗೆಯನ್ನು ಮುರಿಯುವುದಿಲ್ಲ. ಅದು ತೆರಿಗೆ ಮುಕ್ತವಾಗಿರುತ್ತದೆ. ಕಾರಣ ಲಾಭಾಂಶ ಘೋಷಿಸಿದ ಕಂಪನಿಗಳು ಮೊದಲೇ ಲಾಭಾಂಶ ವಿತರಣಾ ತೆರಿಗೆಯನ್ನು ಪಾವತಿಸಿರುತ್ತವೆ. ಘೋಷಿಸಿದ ಲಾಭಾಂಶ, ಕಂಪನಿಯು ಬದಲಾಯಿಸದಿದ್ದರೆ ಅಥವಾ ಹಿಂಪಡೆಯದಿದ್ದರೆ ಪೂರ್ಣವಾಗಿ ದೊರೆಯುತ್ತದೆ.

ಡಿವಿಡೆಂಡ್ ಹೇಗೆ ವಿತರಿಸಲಾಗುತ್ತದೆ? ಲಾಭಾಂಶ ಘೋಷಿಸಿದ ಕಂಪನಿಗಳ ಪಟ್ಟಿ

 

ಕಂಪನಿಗಳು ಕೆಲವು ವಿಶೇಷ ಸಂದರ್ಭಗಳು ಅಂದರೆ, ರಜತಮಹೋತ್ಸವ, ಸುವರ್ಣಮಹೋತ್ಸವದಂತಹ ಸಂದರ್ಭಗಳಲ್ಲಿ ವಿಶೇಷ ಲಾಭಾಂಶ ಪ್ರಕಟಿಸಬಹುದು. ಕೆಲವೊಮ್ಮೆ ಕಂಪನಿಗಳು ತಮ್ಮ ಸ್ವತ್ತು, ಬ್ರಾಂಡ್, ಅಂಗಸಂಸ್ಥೆ ಇತ್ಯಾದಿಗಳ ಮಾರಾಟದಿಂದ ಬಂದಂತಹ ಹಣವನ್ನು ಒಂದು ಬಾರಿ ವಿಶೇಷ ಲಾಭಾಂಶ ನೀಡುವುದುಂಟು.

ಸ್ಟ್ರೈಡ್ಸ್ ಶಾಸೂನ್ ಕಂಪನಿಯು 2013ರ ಅಂತ್ಯದಲ್ಲಿ ತನ್ನ ವಿಭಾಗವನ್ನು ಮಾರಾಟ ಮಾಡಿ ಬಂದಂತಹ ಹಣದಿಂದ ಪ್ರತಿಷೇರಿಗೆ ರೂ.500ರಂತೆ ಲಾಭಾಂಶ ವಿತರಿಸಿದ್ದು ಉತ್ತಮ ನಿದರ್ಶನವಾಗಿದೆ.

ಕೈ ತಪ್ಪಿದ್ದರಲ್ಲೂ ಖುಷಿ ಇರುತ್ತದೆ; ಇದು ಒಂದು ಬ್ಯಾಂಕ್ ನ ಕಥೆ

ಶೇಕಡಾವಾರು ಲಾಭಾಂಶವನ್ನು ಒಂದು ಷೇರಿಗೆ ಎಷ್ಟಾಗಬಹುದು ಎಂದು ಲೆಕ್ಕ ಹಾಕಲು ಷೇರಿನ ಮುಖಬೆಲೆಯೇ ಆಧಾರವಾಗುವುದು. ಅಂದರೆ ಲಾಭಾಂಶವು ಷೇರಿನ ಮುಖಬೆಲೆಯ ಮೇಲೆ ನೀಡಲಾಗುವುದು. ಉದಾಹರಣೆಗೆ : ಕಂಪನಿಯುಶೇ.100% ಲಾಭಾಂಶ ಘೋಷಿಸಿದೆ ಎಂದರೆ, ರೂ.10ರ ಮುಖಬೆಲೆಯ ಷೇರಿಗೆ ಅದು ರೂ.10, ರೂ.2ರ ಮುಖಬೆಲೆಯ ಷೇರಿಗೆ ಅದು ರೂ.2 ಎಂದರ್ಥ.

ಬ್ಯಾಂಕ್ ಗಳು ತಮ್ಮ ಎಲ್ಲಾ ಶಾಖೆಗಳನ್ನು ತಂತ್ರಜ್ಞಾನದ ಮೂಲಕ ಜೋಡಿಸಿಕೊಂಡಿರುವ ವ್ಯವಸ್ಥೆಯಿರುವುದರಿಂದ ಗ್ರಾಹಕರು ತಮ್ಮ ಡಿಮ್ಯಾಟ್ ಖಾತೆಯಲ್ಲಿನ ಬ್ಯಾಂಕ್ ಖಾತೆಯ ಐಎಫ್ಎಸ್ಸಿಕೋಡ್ ನ್ನು ನೊಂದಾಯಿಸದ್ದಲ್ಲಿ ಕಂಪನಿಗಳು ವಿತರಿಸುವ ಲಾಭಾಂಶವು ನೇರವಾಗಿ ಗ್ರಾಹಕರ ಖಾತೆಗೆ ಜಮೆಯಾಗುವುದು.

ಕಂಪನಿಗಳು ಪ್ರಕಟಿಸಿದ ಲಾಭಾಂಶಗಳು ನೀಡಲೇಬೇಕೆಂದಿಲ್ಲ. ವೈವಿಧ್ಯಮಯ ಕಾರಣಗಳಿಂದ ಅವನ್ನು ಹಿಂಪಡೆಯಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇಂಡಿಯನ್ ಬ್ಯಾಂಕ್ ಹಿಂದಿನ ವರ್ಷ ಲಾಭಾಂಶ ಪ್ರಕಟಿಸಿ ನಂತರ ರದ್ದುಗೊಳಿಸಿದೆ.

ಷೇರು ಪೇಟೆಯಲ್ಲಿ 'ಲಾಭ ಬಂದಾಗ ಮಾರು' ಎಂಬುದು ಸಾರ್ವಕಾಲಿಕ ಮಂತ್ರ

ಹೂಡಿಕೆದಾರರು ಪ್ರತಿ ಷೇರಿಗೆ ದೊರೆಯುವ ಲಾಭಾಂಶದ ಜೊತೆಗೆ ನಿಗದಿತ ದಿನಾಂಕ ಮತ್ತು ಲಾಭಾಂಶರಹಿತ ವಹಿವಾಟಿನ ದಿನದ ಬಗ್ಗೆ ಅರಿತು ಚಟುವಟಿಕೆ ನಡೆಸಿದಲ್ಲಿ ಚಟುವಟಿಕೆ ಸರಾಗವಾಗುತ್ತದೆ. ಲಾಭಾಂಶ ವಿತರಣೆಯ ನಂತರ ಷೇರುಗಳ ಬೆಲೆಗಳು ಅದೇ ಪ್ರಮಾಣದಲ್ಲಿ ಅಥವಾ ಅತಿ ಹೆಚ್ಚಿನ ಪ್ರಮಾಣದಲ್ಲಿ ಇಳಿಯಬಹುದು. ಇದು ಪೇಟೆಯ ಸ್ಥಿತಿಗತಿಗಳನ್ನು ಆಧರಿಸಿರುವುದಲ್ಲದೆ ಕಂಪನಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ.

ಮಾರ್ಚ್ ಅಂತ್ಯದ ವಾರ್ಷಿಕ ಸಾಧನೆಗಳನ್ನು ಅನೇಕ ಕಂಪನಿಗಳು ಪ್ರಕಟಿಸಿದ್ದು ತಮ್ಮ ಫಲಿತಾಂಶದೊಂದಿಗೆ ಆಕರ್ಷಕ ಲಾಭಾಂಶವನ್ನು ಪ್ರಕಟಿಸಿರುವ ಕೆಲವು ಕಂಪನಿಗಳ ಪಟ್ಟಿ ಈ ರೀತಿ ಇದೆ. ಲಾಭಾಂಶ ಪಡೆಯುವ ಉದ್ದೇಶದಿಂದ ಷೇರುಗಳನ್ನು ಖರೀದಿಸುವುದಕ್ಕಿಂತ ಮುಂಚೆ ಅರ್ಹತೆಯ ಬಗ್ಗೆ ಖಾತ್ರಿಪಡಿಸಿಕೊಂಡು ನಿರ್ಧರಿಸಿರಿ.

 

ಕಂಪನಿ ಹೆಸರುಪ್ರತಿ ಷೇರಿಗೆ ರೂ. ನಿಗದಿತ ದಿನ
ಹೆಚ್ ಸಿ ಎಲ್ ಟೆಕ್2.0017/05/19
ಸುಂದರಂ ಫಾಸ್ಟ್ ನರ್ಸ್3.1017/05/19
ಅಪ್ಕೋ ಟೆಕ್ಸ್ ಇಂಡಸ್ಟ್ರೀಸ್7.5025/05/19
ಏಷಿಯನ್ ಪೇಂಟ್ಸ್7.6515/06/19
ಶ್ರೀರಾಮ್ ಟ್ರಾನ್ಸ್ ಪೋರ್ಟ್7.0021/06/19
ಹಿಂದುಸ್ತಾನ್ ಲಿವರ್13.0022/06/19
ಸುಪ್ರೀಂ ಇಂಡಸ್ಟ್ರೀಸ್9.0004/07/19
ಬಿ ಎ ಎಸ್ ಎಫ್5.0006 /07/19
ಹೆಚ್ ಡಿ ಎಫ್ ಸಿ ಎ ಎಂ ಸಿ12.0006/07/19
ಟಾಟಾ ಸ್ಪಾಂಜ್12.5008/07/19
ಟಾಟಾ ಸ್ಟಿಲ್13.0006/07/19
ಗೃಹ ಫೈನಾನ್ಸ್2.0011/07/19
ಮಾಸ್ಟೆಕ್5.0015/07/19
ಸ್ವರಾಜ್ ಇಂಜಿನ್ಸ್50.0013/07/19
ವೆಂಟ್15.0015/07/19
ಜ್ಯೋತಿ ಲ್ಯಾಬ್3.0016/07/19
ಎಂ ಅಂಡ್ ಎಂ ಫೈನಾನ್ಸ್6.5017/07/19
ಫಿಕ್ಸ್ ಟ್ರಾನ್ಸ್ಮಿಷನ್2.7517/07/19
ಹೀರೊ ಮೋಟೊಕಾರ್ಪ್32.0018/07/19
ಮಹಿಂದ್ರಾ ಲೈಫ್6.0020.07/19
ಪಿರಾಮೆಲ್ ಇಂಟರ್ ಪ್ರೈಸಸ್28.0020/07/19
ಸೋಲಾರ್ ಇಂಡಸ್ಟ್ರೀಸ್7.0020.07/19
ಸೆಂಚುರಿ ಟೆಕ್ಸ್ಟ್ ಟೈಲ್ಸ್7.5023/07/19
ಗಾಡ್ರೇಜ್ ಆಗ್ರೋ4.5027/07/19
ಬ್ರಿಟಾನಿಯ15.0003/08/19
ಎಂ ಆರ್ ಎಫ್54.0003/08/19
ಕಾನ್ಸ್ ಸೈ ನೆರೊಲ್ಯಾಕ್2.6015/07/19
ವೋಲ್ಟಾಸ್4.0019/07/19
ಟಾಟಾ ಎಲಾಕ್ಸಿ13.50-
ಟಾಟಾ ಇನ್ವೆಸ್ಟ್ ಮೆಂಟ್ ಕಾರ್ಪ್20.00-
ಸ್ಟ್ರೈಡ್ಸ್ ಫಾರ್ಮ3.00-
ಇನ್ಫೋಸಿಸ್10.5015/06/19
ವಿಶಾಖ ಇಂಡಸ್ಟ್ರೀಸ್7.0022/06/19
ಟಾಟಾ ಕೆಮಿಕಲ್ಸ್12.5002/07/19

ಕಂಪನಿಗಳು ಪ್ರಕಟಿಸಿದ ಲಾಭಾಂಶವನ್ನ ಬದಲಾಯಿಸಬಹುದು, ರದ್ದುಗೊಳಿಸಲೂಬಹುದು. ದೃಢೀಕರಿಸಿಕೊಂಡು ಖರೀದಿಸಿರಿ.

English summary

Which Indian companies have declared dividends

Which Indian companies have declared dividends? What all things we should keep in mind while buying shares. Dividend is a sum of money paid regularly (annually) by a company to its shareholders out of its profits (or reserves).
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more