For Quick Alerts
ALLOW NOTIFICATIONS  
For Daily Alerts

ಕರಡಿ ಮೇಲಾಟ! ಸೆನ್ಸೆಕ್ಸ್ 203 ಪಾಯಿಂಟ್ ಕುಸಿತ

ಅಮೆರಿಕಾ - ಚೀನಾ ನಡುವಿನ ವಾನಿಜ್ಯ ಸಮರ ನಿಲ್ಲುವ ಲಕ್ಷಣಗಳು ಕಾಣುತ್ತಿದ್ದು, ಚೀನಾದೊಂದಿಗೆ ಶೀಘ್ರದಲ್ಲೇ ವಾಣಿಜ್ಯ ವಹಿವಾಟನ್ನು ನಡೆಸಲಾಗುವುದು ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

|

ಅಮೆರಿಕಾ - ಚೀನಾ ನಡುವಿನ ವಾನಿಜ್ಯ ಸಮರ ನಿಲ್ಲುವ ಲಕ್ಷಣಗಳು ಕಾಣುತ್ತಿದ್ದು, ಚೀನಾದೊಂದಿಗೆ ಶೀಘ್ರದಲ್ಲೇ ವಾಣಿಜ್ಯ ವಹಿವಾಟನ್ನು ನಡೆಸಲಾಗುವುದು ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

 ಕರಡಿ ಮೇಲಾಟ! ಸೆನ್ಸೆಕ್ಸ್ 203 ಪಾಯಿಂಟ್ ಕುಸಿತ

ಇದು ಜಾಗತಿಕ ಷೇರು ಪೇಟೆಗಳಲ್ಲಿ ಸ್ಥಿರತೆ ಮೂಡಲು ಕಾರಣವಾಗಿದ್ದಲ್ಲದೇ ಇದರ ಪ್ರಭಾವ ಮುಂಬೈ ಷೇರು ಪೇಟೆ ಮೇಲೆ ಉಂಟಾಗಿತ್ತು. ಆದರೆ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಕುಸಿತ ಕಂಡಿತು.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಕುಸಿತ ಕಂಡಿದ್ದ ಷೇರುಪೇಟೆ, ಬುಧವಾರದ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಹೆಚ್ಚು ಪಾಯಿಂಟ್ ಗಳೊಂದಿಗೆ ಉತ್ತಮ ಮುನ್ನಡೆಯನ್ನು ಸಾಧಿಸಿತು.
ನಂತರದಲ್ಲಿ ಮತ್ತೆ ಕುಸಿತಕ್ಕೆ ಒಳಗಾಗಿದ್ದ ಸೆನ್ಸೆಕ್ಸ್ 3.00 ಗಂಟೆಯ ಆಸುಪಾಸಿನಲ್ಲಿ ಚೇತರಿಕೆ ಕಂಡಿತ್ತು. ಆದರೆ ದಿನದ ವಹಿವಾಟಿ ಅಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕವು 203.65 ಪಾಯಿಂಟ್ ಕುಸಿತದೊಂದಿಗೆ 37,114 ಅಂಕಗಳಲ್ಲಿ ಹಾಗು ನಿಪ್ಟಿ 77.10 ಅಂಕ ಕುಸಿತದೊಂದಿಗೆ ದಿನದ ವಹಿವಾಟು ಮುಗಿಸಿದವು.

ನಿನ್ನೆ ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 227.71 ಅಂಕಗಳ ಮುನ್ನಡೆಯೊಂದಿಗೆ 37,318.53 ಪಾಯಿಂಟ್ ಗಳಲ್ಲಿ ಕೊನೆಗೊಂಡಿತ್ತು. ನಿಫ್ಟಿ 73.85 ಅಂಕಗಳ ಏರಿಕೆಯೊಂದಿ 11,222.05 ಅಂಕಗಳ ಮಟ್ಟಕ್ಕೇರಿತ್ತು.
ಇಂದು ಬೆಳಿಗ್ಗೆ 10.50ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕವು 196.91 ಪಾಯಿಂಟ್ ಏರಿಕೆಯೊಂದಿಗೆ 37,515.44 ಅಂಕಗಳಲ್ಲೂ ಹಾಗು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಸೂಚ್ಯಂಕ 52.30 ಅಂಕಗಳ ಏರಿಕೆಯೊಂದಿಗೆ 11,274.30 ಅಂಕಗಳಲ್ಲಿ ವಹಿವಾಟು ನಡೆಸಿದ್ದವು.

ಯೆಸ್ ಬ್ಯಾಂಕ್, ಟಾಟಾ ಮೋಟರ್ಸ್, ಝೀ ಎಂಟರ್ಟೈನ್ಮೆಂಟ್, ಜೆಎಸ್ಡಬ್ಲ್ಯೂ ಸ್ಟೀಲ್ ಮತ್ತು ಇಂಡಸ್ ಲ್ಯಾಂಡ್ ಬ್ಯಾಂಕ್ ​​ನಿಫ್ಟಿಯಲ್ಲಿ ನಷ್ಟ ಅನುಭವಿಸಿದವು. ಬಜಾಜ್ ಫೈನಾನ್ಸ್, ಐಶರ್ ಮೋಟಾರ್ಸ್, ಯುಪಿಎಲ್, ಐಓಸಿ ಮತ್ತು ಬಜಾಜ್ ಫಿನ್ ಸರ್ವ್ ಕಂಪನಿಗಳು ಲಾಭ ಗಳಿಸಿದವು.
ಡಾಲರ್‌ ಎದುರು ರೂಪಾಯಿ ಮೌಲ್ಯ 18 ಪೈಸೆಗಳ ಏರಿಕೆಯೊಂದಿಗೆ ರೂ. 70.26 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

Read more about: sensex stock bse money
English summary

Nifty ends below 11,200, Sensex falls 203 points

The benchmark indices ended lower in the volatile trading on May 15 with Nifty closed below 11,200 mark.
Story first published: Wednesday, May 15, 2019, 15:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X