For Quick Alerts
ALLOW NOTIFICATIONS  
For Daily Alerts

ಗೂಳಿ ಅಬ್ಬರ..! ಸೆನ್ಸೆಕ್ಸ್ 537 ಪಾಯಿಂಟ್ ಏರಿಕೆ

ಲೋಕಸಭಾ ಚುನಾವಣೆಯ ಫಲಿತಾಂಶದ ಹತ್ತಿರದಲ್ಲೇ ಸೆನ್ಸೆಕ್ಸ್ ಮತ್ತು ನಿಪ್ಟಿ ಒಂದು ಪ್ರತಿಶತದಷ್ಟು ಏರಿಕೆ ಕಂಡು, ಮೇ 17ರಂದು ದಿನದ ಅಂತ್ಯಕ್ಕೆ ಉನ್ನತ ಮಟ್ಟದಲ್ಲಿ ವಹಿವಾಟು ಮುಗಿಸಿವೆ.

|

ಲೋಕಸಭಾ ಚುನಾವಣೆಯ ಫಲಿತಾಂಶದ ಹತ್ತಿರದಲ್ಲೇ ಸೆನ್ಸೆಕ್ಸ್ ಮತ್ತು ನಿಪ್ಟಿ ಒಂದು ಪ್ರತಿಶತದಷ್ಟು ಏರಿಕೆ ಕಂಡು, ಮೇ 17ರಂದು ದಿನದ ಅಂತ್ಯಕ್ಕೆ ಉನ್ನತ ಮಟ್ಟದಲ್ಲಿ ವಹಿವಾಟು ಮುಗಿಸಿವೆ.

ಗೂಳಿ ಅಬ್ಬರ..! ಸೆನ್ಸೆಕ್ಸ್ 537 ಪಾಯಿಂಟ್ ಏರಿಕೆ

ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 537.29 ಪಾಯಿಂಟ್ ಏರಿಕೆ ಕಂಡು 37930.77 ಕ್ಕೆ ತಲುಪಿದ್ದು, ನಿಫ್ಟಿ ಸೂಚ್ಯಂಕ 150.10 ಪಾಯಿಂಟ್ ಗಳ ಏರಿಕೆಯೊಂದಿಗೆ 11407.20 ಕ್ಕೆ ವಹಿವಾಟು ಮುಗಿಸಿದೆ.
ಸುಮಾರು 1381 ಷೇರುಗಳು ಲಾಭ ಕಂಡರೆ, 1112 ಷೇರುಗಳು ಕುಸಿದವು ಮತ್ತು 140 ಷೇರುಗಳು ಬದಲಾಗದೆ ಹಾಗೆ ಉಳಿದವು.

ಝೀ ಎಂಟರ್ಟೈನ್ಮೆಂಟ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಹೀರೋ ಮೊಟೊಕಾರ್ಪ್ ಮತ್ತು ಮಾರುತಿ ಸುಜುಕಿ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿವೆ. ಯೆಸ್ ಬ್ಯಾಂಕ್, ಡಾ. ರೆಡ್ಡಿಸ್ ಲ್ಯಾಬ್ಸ್, ವೇದಾಂತ, ಹಿಂಡಾಲ್ಕೊ ಮತ್ತು ಇನ್ಫೋಸಿಸ್ ನಷ್ಟು ಅನುಭವಿಸಿದವು.
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಮೆಟಲ್‌ ಸೇರಿದಂತೆ ಮುಂಚೂಣಿ ಕ್ಷೇತ್ರಗಳ ಷೇರುಗಳು ಉತ್ತಮ ಖರೀದಿಯಾದ ಕಾರಣ ಸೆನ್ಸೆಕ್ಸ್‌ ಸೂಚ್ಯಂಕ 200ಕ್ಕೂ ಅಧಿಕ ಪಾಯಿಂಟ್ ಜಿಗಿತವನ್ನು ದಾಖಲಿಸಿತು. ಜೊತೆಗೆ ನಿಫ್ಟಿ ಸೂಚ್ಯಂಕ 11,300 ಅಂಕಗಳ ಗಡಿಯನ್ನು ದಾಟಿ ಮುಂದುವರೆದಿತ್ತು.

ಇಂದು ಬೆಳಿಗ್ಗೆ 10.40 ಸುಮಾರಿಗೆ ಸೆನ್ಸೆಕ್ಸ್ 193.89 ಪಾಯಿಂಟ್ ಮುನ್ನಡೆಯೊಂದಿಗೆ 37,588.45 ಅಂಕಗಳಲ್ಲೂ ಹಾಗು ನಿಫ್ಟಿ 51.20 ಅಂಕಗಳ ಏರಿಕೆಯೊಂದಿಗೆ 11,308.30 ಅಂಕಗಳಲ್ಲಿ ವಹಿವಾಟು ನಿರತವಾಗಿದ್ದವು. ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 16 ಪೈಸೆಗಳ ಕುಸಿತವನ್ನು ಕಂಡು ರೂ. 70.20 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

English summary

Nifty ends above 11,400, Sensex jumps 537 points

Sensex and Nifty rallied over 1 percent each, closing near their day's high level on May 17 ahead of exit poll of Lok Sabha election 2019.
Story first published: Friday, May 17, 2019, 16:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X