For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 5 kg ಎಲ್ಪಿಜಿ ಸಿಲಿಂಡರ್, ಸಿಗಲಿರುವ ಸೌಲಭ್ಯಗಳೇನು?

ಬಿಜೆಪಿ ಸರ್ಕಾರ ಬಡ ಮಹಿಳೆಯರಿಗೆ ನೆರವಾಗಲು ಮಹತ್ವದ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಬಡ ಮಹಿಳೆಯರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 5 ಕೆ.ಜಿ. ತೂಕದ ಸಣ್ಣ ಎಲ್ಪಿಜಿ ಗ್ಯಾಸ್ ಪೂರೈಸಲಿದೆ.

|

ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೇ ಅವಧಿಗೆ ಸರ್ಕಾರ ರಚನೆ ತಯಾರಿಯಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಮೋದಿಯವರಿಗೆ ಮತ ಹಾಕಿರುವುದರಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಇನ್ನಷ್ಟು ವಿಸ್ತರಿಸಲು ಚಿಂತಿಸಲಾಗಿದೆ.

ಬಿಜೆಪಿ ಸರ್ಕಾರ ಬಡ ಮಹಿಳೆಯರಿಗೆ ನೆರವಾಗಲು ಮಹತ್ವದ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಬಡ ಮಹಿಳೆಯರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 5 ಕೆ.ಜಿ. ತೂಕದ ಸಣ್ಣ ಎಲ್ಪಿಜಿ ಗ್ಯಾಸ್ ಪೂರೈಸಲಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?

ಮಹಿಳೆಯರ ಹೆಸರಿನಲ್ಲಿ ಎಲ್ಪಿಜಿ

ಮಹಿಳೆಯರ ಹೆಸರಿನಲ್ಲಿ ಎಲ್ಪಿಜಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡಲಾಗುತ್ತಿದೆ. ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ಕುಟುಂಬದ ಮಹಿಳೆಯರ ಹೆಸರಿನಲ್ಲಿಯೇ ನೀಡಲಾಗುತ್ತಿದೆ. 5 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಉಚಿತವಾಗಿ ಸಿಕ್ಕರೆ ಬಡ ಮಹಿಳೆಯರಿಗೆ ಮತ್ತಷ್ಟು ಸಹಾಯವಾಗಲಿದೆ. (How to Apply)

8 ಕೋಟಿ ಗ್ಯಾಸ್ ಕನೆಕ್ಷನ್

8 ಕೋಟಿ ಗ್ಯಾಸ್ ಕನೆಕ್ಷನ್

ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (PMUY) 8 ಕೋಟಿ ಎಲ್ಪಿಜಿ ಗ್ಯಾಸ್ ಕನೆಕ್ಷನ್ ನೀಡುವ ಗುರಿಯನ್ನುಇದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಇಲ್ಲಿಯವರೆಗೆ 7.19 ಕೋಟಿ ಉಜ್ವಲ ಸಂಪರ್ಕ ಕಲ್ಪಿಸಲಾಗಿದೆ. ಈ ಗುರಿಯನ್ನು ಪೂರ್ಣಗೊಳಿಸಿದ ನಂತರ ಸಣ್ಣ ಪ್ರಮಾಣದ 5 kg ತೂಕದ ಸಿಲಿಂಡರ್ ಗಳನ್ನು ಈ ಯೋಜನೆಯಲ್ಲಿ ಕಡ್ಡಾಯಗೊಳಿಸಲಾಗುವುದು. 'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ

ಎಲ್ಪಿಜಿ ದರದ ಚಿಂತೆ
 

ಎಲ್ಪಿಜಿ ದರದ ಚಿಂತೆ

ಸಿಲಿಂಡರ್ ಗಳ ಬೆಲೆ ಇಲ್ಲಿ ಪ್ರಮುಖ ಅಂಶವಾಗಿದೆ. ಗ್ಯಾಸ್ ಗಳನ್ನು ರಿಫಿಲ್ ಮಾಡಿಕೊಳ್ಳುವುದು ಕಷ್ಟಕರವಾಗಿದೆ. ದೆಹಲಿಯ ಗ್ರಾಹಕರು 14.2 ಕೆ.ಜಿ ಸಿಲಿಂಡರ್ (ಒಂದು ಕುಟುಂಬ ವರ್ಷಕ್ಕೆ 12 ರಿಫಿಲ್ ಮಾಡುವುದರ ಮೇಲೆ) ಖರೀದಿಸುವ ಸಮಯದಲ್ಲಿ ರೂ. 712 ಪಾವತಿಸಬೇಕಾಗುತ್ತದೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (ಡಿಬಿಟಿ) ಅಡಿಯಲ್ಲಿ ಮಹಿಳಾ ಚಂದಾದಾರರ ಬ್ಯಾಂಕ್ ಖಾತೆಯಲ್ಲಿ ನೀಡಲಾಗುವ ಸಬ್ಸಿಡಿ ಮೊತ್ತ ರೂ. 215 ರಷ್ಟಿದೆ.

5 ಕೆ.ಜಿ. ಸಿಲಿಂಡರ್ ಬೆಲೆ

5 ಕೆ.ಜಿ. ಸಿಲಿಂಡರ್ ಬೆಲೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ನೀಡಲಾಗುವ 5 ಕೆ.ಜಿ. ಸಿಲಿಂಡರ್ ರಿಫಿಲ್ ಮಾಡುವ ಸಂದರ್ಭದ ಪ್ರಸ್ತುತ ವೆಚ್ಚ ರೂ. 260. ಬ್ಯಾಂಕ್ ಖಾತೆಗೆ ವರ್ಗಾಯಿಸಲ್ಪಡುವ ಸಬ್ಸಿಡಿ ಸರಿಸುಮಾರು ರೂ. 80 ಆಗಿರುತ್ತದೆ.

ಎಲ್ಪಿಜಿ ಕಡಿಮೆ ಬಳಕೆ ಏಕೆ?

ಎಲ್ಪಿಜಿ ಕಡಿಮೆ ಬಳಕೆ ಏಕೆ?

ಪೆಟ್ರೋಲಿಯಂ ಸಚಿವಾಲಯದ ಅಧ್ಯಯನದ ಪ್ರಕಾರ, 14.2 ಕಿ.ಗ್ರಾಂ ಸಿಲಿಂಡರ್ ರಿಫಿಲ್ ಮಾಡುವಾಗ ತಗಲುವ ಹೆಚ್ಚಿನ ವೆಚ್ಚವು ಬಿಪಿಎಲ್ ಕುಟುಂಬಗಳು ಕಡಿಮೆ ಸಂಖ್ಯೆಯ ಎಲ್ಪಿಜಿ ಸಿಲಿಂಡರ್ ಬಳಸುತ್ತಿರುವುದುಕ್ಕೆ ಮುಖ್ಯ ಕಾರಣ ಎಂದಿದೆ. ಹೀಗಾಗಿ 5kg ತೂಕದ ಎಲ್ಪಿಜಿ ಸಿಲಿಂಡರ್ ಪೂರೈಸುವುದರಿಂದ ವೆಚ್ಚ್ ದೊಡ್ಡ ಸಿಲಿಂಡರ್ ಗಿಂತ ಎರಡುಪಟ್ಟು ಕಡಿಮೆಯಾಗುತ್ತದೆ. ಇದರಿಂದ ಉಜ್ವಲ ಅಡಿಯಲ್ಲಿ ಬಿಪಿಎಲ್ ಕುಟುಂಬಗಳ ಎಲಪಿಜಿ ಬಳಿಕೆಯ ಪ್ರಮಾಣ ಹೆಚ್ಚಿಸಬಹುದಾಗಿದೆ ಎನ್ನಲಾಗಿದೆ.

English summary

5 kg LPG refill to power PM Ujjwala scheme under Modi Government

NDA government with a focus on delivery and use of smaller 5 kg LPG gas cylinders.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X