For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 117.77 ಪಾಯಿಂಟ್ ಇಳಿಕೆ

ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 117.77 ಪಾಯಿಂಟ್ ಇಳಿಕೆ ಕಂಡು 39,714.20 ಮಟ್ಟಕ್ಕೆ ಕುಸಿದಿದೆ. ನಿಫ್ಟಿ ಸೂಚ್ಯಂಕ 23.10 ಅಂಕಗಳ ಕುಸಿತದೊಂದಿಗೆ 11,922.80 ಕ್ಕೆ ತಲುಪಿದೆ.

|

ನರೇಂದ್ರ ಮೋದಿ ಸರ್ಕಾರದ ಕ್ಯಾಬಿನೆಟ್ ಖಾತೆ ಪ್ರಕಟಣೆಯ ನಂತರ ಷೇರುಪೇಟೆಯು ಶುಕ್ರವಾರದ ದಿನದ ವಹಿವಾಟಿನ ಅಂತ್ಯಕ್ಕೆ ನಕರಾತ್ಮಕವಾಗಿ ಮುಚ್ಚಿದೆ.

ಸೆನ್ಸೆಕ್ಸ್ 117.77 ಪಾಯಿಂಟ್ ಇಳಿಕೆ

ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 117.77 ಪಾಯಿಂಟ್ ಇಳಿಕೆ ಕಂಡು 39,714.20 ಮಟ್ಟಕ್ಕೆ ಕುಸಿದಿದೆ. ನಿಫ್ಟಿ ಸೂಚ್ಯಂಕ 23.10 ಅಂಕಗಳ ಕುಸಿತದೊಂದಿಗೆ 11,922.80 ಕ್ಕೆ ತಲುಪಿದೆ. ಸುಮಾರು 1020 ಷೇರುಗಳು ಏರಿಕೆ, 1534 ಷೇರುಗಳು ಇಳಿಕೆ ಮತ್ತು 155 ಷೇರುಗಳು ಯಥಾಸ್ಥಿತಿಯಲ್ಲಿದ್ದವು.
ಯೆಸ್ ಬ್ಯಾಂಕ್, ಐಟಿಸಿ, ಗ್ರಾಸಿಮ್ ಇಂಡಸ್ಟ್ರೀಸ್, ವೇದಾಂತ ಮತ್ತು ಝೀ ಎಂಟರ್ಟೇನ್ಮೆಂಟ್ ಷೇರುಗಳು ನಿಫ್ಟಿಯಲ್ಲಿ ನಷ್ಟ ಅನುಭವಿಸಿದವು. ಟೆಕ್ ಮಹೀಂದ್ರಾ, ಏಷ್ಯನ್ ಪೇಂಟ್ಸ್, ಟಿಸಿಎಸ್, ಐಓಸಿ ಮತ್ತು ಬ್ರಿಟಾನಿಯ ಇಂಡಸ್ಟ್ರೀಸ್ಗಳು ಲಾಭ ಗಳಿಸಿದವು.

ಇಂದು ಶುಕ್ರವಾರದ ಆರಂಭಿಕ ವಹಿವಾಟನಲ್ಲಿ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ 300 ಅಂಕಗಳ ಏರಿಕೆಯೊಂದಿಗೆ 40,000 ಅಂಕಗಳ ದಾಖಲೆಯ ಮಟ್ಟವನ್ನು ಪುನರ್‌ ಸಂಪಾದಿಸಿ ಮುನ್ನಡೆದಿತ್ತು.
ಜೊತೆಗೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 81.20 ಪಾಯಿಂಟ್ ಜಿಗಿತದೊಂದಿಗೆ 12,000 ಅಂಕಗಳ ಮಟ್ಟವನ್ನು ದಾಟಿತು.
ವಿದೇಶಿ ಬಂಡವಾಳದ ಒಳ ಹರಿವಿನಲ್ಲಾದ ಹೆಚ್ಚಳ ಮತ್ತು ದೇಶಿಯ ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಧನಾತ್ಮಕತೆಯಿಂದಾಗಿಯು ಬ್ಯಾಂಕಿಂಗ್‌ ಮತ್ತು ಐಟಿ ಶೇರುಗಳ ಮೇಲೆ ಸಕರಾತ್ಮಕ ಪ್ರಭಾವ ಬೀರಿತ್ತು.

ಇಂದು ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕ 220.36 ಅಂಕಗಳ ಏರಿಕೆ ಸಾಧಿಸಿ 40,052.33 ಅಂಕಗಳಲ್ಲೂ, ನಿಫ್ಟಿ 69.50 ಅಂಕಗಳ ಏರಿಕೆಯೊಂದಿಗೆ 12,015.40 ಅಂಕಗಳಲ್ಲೂ ವ್ಯವಹಾರ ನಿರತವಾಗಿತ್ತು. ಇಂದು ಬೆಳಗ್ಗೆ ಡಾಲರ್‌ ಎದುರು ರೂಪಾಯಿ ಮೌಲ್ಯ 15 ಪೈಸೆ ಏರಿಕೆ ಕಂಡು ರೂ. 69.72 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

English summary

Sensex ends 117 points lower

the Sensex was down 117.77 points at 39,714.20, while Nifty was down 23.10 points at 11,922.80.
Story first published: Friday, May 31, 2019, 16:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X