For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ದರ ಇಳಿಕೆ ಸಾಧ್ಯತೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರ ಇಳಿಕೆ ಮಾಡುವಂತೆ ಹಲವು ರಾಜ್ಯಗಳು ಮನವಿ ಸಲ್ಲಿಸಿದ್ದು, ಕೈಗಾರಿಕಾ ವಲಯದ ಚೇತರಿಕೆಗೆ ಕೇಂದ್ರ ಸರ್ಕಾರ ಕೆಲವು ಸರಕುಗಳ ಮೇಲಿನ ಜಿಎಸ್ಟಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

|

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರ ಇಳಿಕೆ ಮಾಡುವಂತೆ ಹಲವು ರಾಜ್ಯಗಳು ಮನವಿ ಸಲ್ಲಿಸಿದ್ದು, ಕೈಗಾರಿಕಾ ವಲಯದ ಚೇತರಿಕೆಗೆ ಕೇಂದ್ರ ಸರ್ಕಾರ ಕೆಲವು ಸರಕುಗಳ ಮೇಲಿನ ಜಿಎಸ್ಟಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿಎಸ್ಟಿ ದರ ಇಳಿಕೆ ಸಾಧ್ಯತೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಶೇ. 28ರ ಶ್ರೇಣಿಯಿಂದ ಮತ್ತಷ್ಟು ಸರಕುಗಳು ಬೇರ್ಪಡಿಸುವ ಸಾಧ್ಯತೆ ಇದ್ದು, ಜೂನ್‌ 20ರಂದು ಜಿಎಸ್‌ಟಿ ಮಂಡಳಿಯು ಸಭೆ ಸೇರಲಿದೆ. ಈ ಸಭೆಯಲ್ಲಿ ರಾಜ್ಯಗಳ ಮನವಿ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ. ವಾಹನಗಳ ಮಾರಾಟ ತೀವ್ರವಾಗಿ ಕುಸಿದಿದ್ದು, ಮುಖ್ಯವಾಗಿ ಆಟೊಮೊಬೈಲ್ ವಲಯದ ಜಿಎಸ್‌ಟಿ ದರ ಇಳಿಸುವಂತೆ ರಾಜ್ಯಗಳು ಮನವಿ ಮಾಡಿವೆ.
ಈ ನಿಟ್ಟಿನಲ್ಲಿ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಶೇ. 28ರ ಶ್ರೇಣಿಯ ಯಾವ ಉತ್ಪನ್ನಗಳನ್ನು ಬೇರ್ಪಡಿಸಬಹುದು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಅನುಬೋಗಿ ಸರಕುಗಳ ಬೇಡಿಕೆ ಕುಸಿತ ಕಂಡಿದ್ದು, ರೆಫ್ರಿಜಿರೇಟರ್, ಸಿಗರೇಟ್, ಮೋಟಾರ್ ಸೈಕಲ್, ಸಣ್ಣ ಕಾರು, ತಂಪು ಪಾನೀಯ ಮುಂತಾದ ಸರಕುಗಳ ದರ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಾಹನಗಳ ಬೇಡಿಕೆಯಲ್ಲಿ ನಗರ ಮತ್ತು ಗ್ರಾಮೀಣ ವಲಯದಲ್ಲಿ ಬೇಡಿಕೆ ಮಂದಗತಿಯಲ್ಲಿದೆ. ಪ್ರಯಾಣಿಕರ ವಾಹನಗಳ ಮಾರಾಟ ಏಪ್ರಿಲ್‌ನಲ್ಲಿ ಶೇ. 17ಕ್ಕೆ ಇಳಿದಿದ್ದು, ಆಟೋಮೊಬೈಲ್ ನಷ್ಟದಲ್ಲಿದೆ.

English summary

GST Rates for some goods may be slashed

GST Rates for some goods may be slashed in upcoming gst board meeting.
Story first published: Tuesday, June 11, 2019, 15:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X