ಜೂನ್ ತಿಂಗಳ ಅಂತ್ಯಕ್ಕೆ ಒಸಾಕಾದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ.
ಜೂನ್ ತಿಂಗಳ ಅಂತ್ಯಕ್ಕೆ ಒಸಾಕಾದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ.

ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಇಂಡೋ-ಪೆಸಿಫಿಕ್ ವಲಯದ ಎರಡನೇ ಸುತ್ತಿನ ಜೈ (JAI- Japan, America, India) ತ್ರಿಪಕ್ಷೀಯ ಸಭೆ ನಡೆಸುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಎಲ್ಲರ ದೃಷ್ಟಿ ಮೋದಿ-ಟ್ರಂಪ್ ಸಭೆಯ ಮೇಲಿದೆ. ಈ ಜೈ (JAI- Japan, America, India) ತ್ರಿಪಕ್ಷೀಯ ಸಭೆಗೂ ಮುನ್ನ ಮುಂದಿನ ವಾರ ಹೊಸ ದೆಹಲಿಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮಾತುಕತೆ ನಡೆಸಲಿದ್ದಾರೆ.
ಇರಾನ್ ನಿಂದ ತೈಲ ಅಮದು ಮಾಡಲು ಭಾರತಕ್ಕೆ ನೀಡಿದ್ದ ಆದ್ಯತಾ ವ್ಯಾಪಾರ ನೀತಿಯನ್ನು ಹಿಂತೆಗೆದುಕೊಂಡ (ಜಿಎಸ್‌ಪಿ) ಕುರಿತು ಯಾವುದೇ ಪ್ರಸ್ತಾಪ ಮಾಡುವುದಿಲ್ಲ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಅಮೆರಿಕ ಮತ್ತು ಚೀನಾ ಟ್ರೇಡ್ ವಾರ್ ಲಾಭ ಪಡೆಯಲು ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡಬಹುದಾದ 151 ವಸ್ತುಗಳನ್ನು ಸರ್ಕಾರ ಗುರುತಿಸಿದೆ. ಆದರೆ ಅಮೆರಿಕವು ಕೂಡ ಭಾರತದ ಜತೆಗಿನ ವಾಣಿಜ್ಯ ನೀತಿ ಬಗ್ಗೆ ಕಠಿಣ ನಿಲುವು ತಳೆದಿದೆ ಎನ್ನಲಾಗಿದೆ.
ವಾಣಿಜ್ಯ ಸಮರದಿಂದಾಗಿ ಭಾರತ- ಅಮೆರಿಕ ನಡುವೆ ವ್ಯಾಪಾರ ಬಾಂಧವ್ಯ ಹಳಸುತ್ತಿದ್ದರೂ, ರಕ್ಷಣಾತ್ಮಕ ಸಹಕಾರಗಳನ್ನು ಎರಡು ದೇಶಗಳು ವೃದ್ಧಿಸುತ್ತಿವೆ. ಭಾರತವು ಅಮೆರಿಕದಿಂದ ಸೀ ಗಾರ್ಡಿಯನ್ಸ್, ಮಲ್ಟಿರೋಲ್ ಎಂಎಚ್ -60 ರೋಮಿಯೋ ಹೆಲಿಕಾಪ್ಟರ್ ಮತ್ತು 'ನಾಸ್ಮಾಸ್'(NASAMS) ಕ್ಷಿಪಣಿಗಳ ಖರೀದಿಗೆ ಭಾರತ ಮುಂದಾಗಿದೆ. ರಕ್ಷಣಾತ್ಮಕ ವಲಯಕ್ಕೆ ಸಂಬಂಧಿಸಿದಂತೆ ವ್ಯಾಪಾರ ನಡೆಯುತ್ತಿದ್ದರೂ, ಅದಕ್ಕಿಂತ ಮೊದಲು ವಾಣಿಜ್ಯ ಬಿಕ್ಕಟ್ಟು ಬಗೆಹರಿಯಬೇಕಿದೆ.


Click it and Unblock the Notifications