For Quick Alerts
ALLOW NOTIFICATIONS  
For Daily Alerts

ಜೆಟ್ ಏರ್ವೇಸ್ ವಿರುದ್ದ ದಿವಾಳಿ ಪ್ರಕ್ರಿಯೆಗೆ ಚಾಲನೆ

ಸಾಲದ ಸುಳಿಗೆ ಸಿಲುಕಿ ಆರ್ತಿಕ ಬಿಕ್ಕಟ್ಟಿನಲ್ಲಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ವಿರುದ್ದ ದಿವಾಳಿ ಪ್ರಕ್ರಿಯಾ ಕ್ರಮಗಳನ್ನು ಪ್ರಾರಂಭಿಸಲಾಗಿದೆ.

|

ಸಾಲದ ಸುಳಿಗೆ ಸಿಲುಕಿ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ವಿರುದ್ದ ದಿವಾಳಿ ಪ್ರಕ್ರಿಯಾ ಕ್ರಮಗಳನ್ನು ಪ್ರಾರಂಭಿಸಲಾಗಿದೆ.

 

ಜೆಟ್ ಏರ್ವೇಸ್ ವಿರುದ್ದ ದಿವಾಳಿ ಪ್ರಕ್ರಿಯೆಗೆ ಚಾಲನೆ

2016ರ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ಕಾಯಿದೆ ಪ್ರಕಾರ, ರಾಷ್ಟ್ರೀಯ ಕಂಪನಿ ಕಾಯಿದೆ ಪ್ರಾದಿಕಾರ (ಎನ್ಸಿಎಲ್ಟಿ) ಕಳೆದ ವಾರ ಎಸ್‌ಬಿಐ ಸಲ್ಲಿಸಿದ್ದ ದಿವಾಳಿತನ ಅರ್ಜಿಯನ್ನು ಒಪ್ಪಿಕೊಂಡಿದೆ. ಜೆಟ್ ಏರ್ವೇಸ್ ವಿರುದ್ದ ದಿವಾಳಿ ಗೊತ್ತುವಳಿ ಪ್ರಕ್ರಿಯೆಗೆ (ಸಿಐಆರ್ಪಿ) ಸೂಚನೆ ನೀಡಲಾಗಿದೆ ಎಂದು ಎನ್ಸಿಎಲ್ಟಿ ಆದೇಶದಲ್ಲಿ ತಿಳಿಸಿದೆ.

ಎನ್‌ಸಿಎಲ್‌ಟಿ ಮುಂಬೈ ಪೀಠವು ಜೂನ್ 20, 2019 ರ ಆದೇಶಕ್ಕೆ ಅನುಸಾರವಾಗಿ, ದಿವಾಳಿತನ ಸಂಹಿತೆ 2016 ರ ನಿಬಂಧನೆಗಳ ಪ್ರಕಾರ ಜೆಟ್ ಏರ್ವೇಸ್ ವಿರುದ್ದ ದಿವಾಳಿ ಗೊತ್ತುವಳಿ ಪ್ರಕ್ರಿಯೆಗೆ (ಸಿಐಆರ್ಪಿ) ಪ್ರಾರಂಭಿಸಲಾಗಿದೆ ಎಂದು ಜೆಟ್ ಏರ್‌ವೇಸ್ ನಿಯಂತ್ರಕದಲ್ಲಿ ತಿಳಿಸಿದೆ.

 

ದೀವಾಳಿ ಪ್ರಕ್ರಿಯೆ ಆರಂಭ ಆಗಿರುವುದರಿಂದ ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರ ಅಧಿಕಾರ ಅಮಾನತುಗೊಂಡಿದೆ. ಅಲ್ಲದೇ ಮಧ್ಯಂತರ ಗೊತ್ತುವಳಿ ವೃತ್ತಿಪರರ ಮೂಲಕ ಅಧಿಕಾರ ನಿರ್ವಹಿಸಬೇಕಾಗಿದೆ ಎಂದಿದೆ.
ದೀವಾಳಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 15 ದಿನಗಳಿಗೊಮ್ಮೆ ಪ್ರಗತಿ ವಿವರ ತಿಳಿಸುವಂತೆ ಹೇಳಿದ್ದು, ದೇಶದ ಹಿತಾಸಕ್ತಿಯ ದೃಷ್ಟಿಯಿಂದ ೯೦ ದಿನಗಳ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಎನ್ಸಿಎಲ್ಟಿ ಸೂಚನೆ ನೀಡಿದೆ. ಜೆಟ್ ಏರ್‌ವೇಸ್ ದಿವಾಳಿತನಕ್ಕೆ ಒಳಪಟ್ಟ ಮೊದಲ ದೇಶೀ ವಿಮಾನಯಾನ ಸಂಸ್ಥೆಯಾಗಿದೆ.

Read more about: airlines money business jet airways
English summary

Jet Airways insolvency process

Insolvency proceedings have been initiated against debt-ridden Jet Airways, followed by the National Company Law Tribunal (NCLT) admitting an insolvency petition filed against it by SBI last week.
Story first published: Monday, June 24, 2019, 12:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X