For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2019: ನಿರ್ಮಲಾ ಸೀತಾರಾಮನ್ ರಿಂದ ಮೊದಲ ಬಜೆಟ್, ನಿರೀಕ್ಷೆಗಳು ನೂರಾರು

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದ ಬಜೆಟ್ ಮಂಡನೆಗೆ ಕ್ಷಣಗಣನೆ ರಂಭವಾಗಿದೆ. ಇದೇ ಮೊದಲ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.

|

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಮೊದಲ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಕೇಂದ್ರ ಬಜೆಟ್ - 2019 ಮಂಡನೆ ಮಾಡಲಿದ್ದಾರೆ.

ಕೇಂದ್ರ ಬಜೆಟ್ 2019: ನಿರ್ಮಲಾ ಸೀತಾರಾಮನ್ ರಿಂದ ಮೊದಲ ಬಜೆಟ್

ಕಳೆದ ಅವಧಿಯಲ್ಲಿ ಹಲವಾರು ಆರ್ಥಿಕ ಸಮಸ್ಯೆಗಳನ್ನು ಎದುರಿಸಿರುವ ಮೋದಿ ಸರ್ಕಾರವು ಕುಂಠಿತಗೊಂಡಿರುವ ಆರ್ಥಿಕತೆಯನ್ನು ಸಮತೋಲನಕ್ಕೆ ತರುವ ಮಹತ್ವದ ಜವಾಬ್ದಾರಿ ಹೊಂದಿದೆ.
ಕಳೆದ ಅವಧಿಯ ತಪ್ಪುಗಳನ್ನು ಸರಿಪಡಿಸಿ ಆರ್ಥಿಕ ಸಮತೋಲನ ಸಾಧಿಸಲೇಬೇಕಾದ ನಿರೀಕ್ಷೆಗಳು ಗರಿಗೆದರಿವೆ. ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರ ಮೊದಲ ಬಜೆಟ್ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲೆ ನಿರೀಕ್ಷೆಗಳ ಭಾರ ಸಾಕಷ್ಟಿದೆ.
ಹಣಕಾಸು ಖಾತೆಯ ಜವಾಬ್ದಾರಿ ಹೊತ್ತಿರುವ ನಿರ್ಮಲಾ ಸೀತಾರಾಮನ್ ಅವರು ಭಾರತದ ಸಂಸತ್ತಿನ ಇತಿಹಾಸದಲ್ಲಿ ವಿತ್ತ ಖಾತೆ ಪಡೆದು ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಡೆಯಲಿದ್ದಾರೆ.
ಲೋಕಸಭಾ ಚುನಾವಣೆಯ ಪೂರ್ವಧಲ್ಲಿ ಪಿಯೂಷ್ ಗೋಯಲ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದರು. ಹೀಗಾಗಿ ಅದರಲ್ಲಿನ ಬಹುತೇಕ ಅಂಶಗಳನ್ನು ಪ್ರಸ್ತುತ ಬಜೆಟ್ ನಲ್ಲಿ ಕಾಣಬಹುದು.
ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಮೊದಲ ಬಜೆಟ್ ನಲ್ಲಿ ಎಲ್ಲಾ ವಲಯದವರೂ ಹಾಗು ಎಲ್ಲಾ ವರ್ಗದ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ, ಆದರೂ ಎಲ್ಲಾ ಪರಿಸ್ಥಿತಿಗಳನ್ನು ಗಮನಿಸಿ ಬಿಗಿ ಹೆಜ್ಜೆಗಳನ್ನಿಡಬೇಕಾದ ಅಗತ್ಯತೆ ಇದೆ. ಆದಾಯ ತೆರಿಗೆ ವಿನಾಯಿತಿಯೂ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳ ಕಡೆಗೆ ಜನಸಾಮಾನ್ಯರ ಕಣ್ಣಿದೆ.
ಏನೇ ಆದರೂ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಮೊದಲ ಬಜೆಟ್ ಮೂಲಕ ಆರ್ಥಿಕ ಸುಸ್ಥಿರತೆ, ಉತ್ಪಾದನಾ ವಲಯಕ್ಕೆ ಉತ್ತೇಜನ, ರೈತರಿಗೆ ಬಲ, ಬ್ಯಾಂಕಿಂಗ್ ವರ್ಧನೆ ಮತ್ತು ಸರ್ವ ಅಭಿವೃದ್ಧಿ ಮೇಲುಗೈ ಸಾಧಿಸಬೇಕಾಗಿದೆ. ಬಜೆಟ್ ಮಂಡನೆ ಮುಗಿದ ನಂತರ ಸರಕಾರದ ಅಧಿಕೃತ ವೆಬ್‌ಸೈಟ್‌ಲ್ಲಿ ಬಜೆಟ್ ಪ್ರತಿ ಲಭ್ಯವಾಗಲಿದೆ.

English summary

Budget 2019: finance minister Nirmala Sitharaman to present first budget Today

nion Finance Minister, Nirmala Sitharaman will deliver her first Union Budget today. It is against the backdrop of a slowing economy, worries over job and falling rural incomes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X