For Quick Alerts
ALLOW NOTIFICATIONS  
For Daily Alerts

ಆಧಾರ್ ನೀಡಿದವರಿಗೆ ತೆರಿಗೆ ಇಲಾಖೆಯೇ ಪ್ಯಾನ್ ಕಾರ್ಡ್ ವಿತರಣೆ

ನಿರ್ಮಲಾ ಸೀತಾರಾಮನ್ ಅವರು ಜುಲೈ ೫ರಂದು ಮಂಡಿಸಿರುವ ಬಜೆಟ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ದಾಖಲಿಸಲು ಪ್ಯಾನ್‌ಗೆ ಪರ್ಯಾಯವಾಗಿ ಆಧಾರ್ ಕಾರ್ಡ್ ನೀಡಬಹುದು ಎಂದು ಹೇಳಿದ್ದಾರೆ.

|

ನಿರ್ಮಲಾ ಸೀತಾರಾಮನ್ ಅವರು ಜುಲೈ ೫ರಂದು ಮಂಡಿಸಿರುವ ಬಜೆಟ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ದಾಖಲಿಸಲು ಪ್ಯಾನ್‌ಗೆ ಪರ್ಯಾಯವಾಗಿ ಆಧಾರ್ ಕಾರ್ಡ್ ನೀಡಬಹುದು ಎಂದು ಹೇಳಿದ್ದಾರೆ. ಆದರೆ ಪ್ಯಾನ್‌ ಕಾರ್ಡ್ ಅಪ್ರಸ್ತುತವಾಗುವ ಪ್ರಶ್ನೆಯೇ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದೆ.

 

ಆಧಾರ್ ನೀಡಿದವರಿಗೆ ತೆರಿಗೆ ಇಲಾಖೆಯೇ ಪ್ಯಾನ್ ಕಾರ್ಡ್ ವಿತರಣೆ

ಆಧಾರ್ ಕಾರ್ಡ್ ಒದಗಿಸಿ ಐಟಿಆರ್ ಸಲ್ಲಿಸಿದವರಿಗೆ ಆದಾಯ ತೆರಿಗೆ ಇಲಾಖೆಯೇ ಪ್ಯಾನ್‌ ಅನ್ನು ಸ್ವಯಂ ಪ್ರೇರಣೆಯಿಂದ ವಿತರಿಸಲಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಈ ಹಿಂದೆ ಆದಾಯ ತೆರಿಗೆ ರಿಟರ್ನ್ ಗಾಗಿ (ಐಟಿಆರ್) ಆಧಾರ್ ಮತ್ತು ಪ್ಯಾನ್‌ ಸಂಖ್ಯೆ ಜೋಡಣೆ ಮಾಡುವುದನ್ನು ಸಿಬಿಡಿಟಿ ಕಡ್ಡಾಯಗೊಳಿಸಿತ್ತು. ತೆರಿಗೆದಾರರನ್ನು ಉತ್ತೇಜಿಸುವ ಸಲುವಾಗಿ ಪ್ಯಾನ್‌ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಬಳಸಲು ಬಜೆಟ್ ಮಂಡನೆ ಸಂದರ್ಭದಲ್ಲಿ ಅವಕಾಶ ನೀಡಲಾಗಿದೆ.
ಹಣಕಾಸು ವ್ಯವಹಾರಗಳ ಸಂದರ್ಭಗಳಲ್ಲಿ ಪ್ಯಾನ್‌ ಕಾರ್ಡ್ ಮುಖ್ಯವಾಗಿ ಬೇಕು. ಹೀಗಾಗಿ ತೆರಿಗೆದಾರರಿಗೆ ಹೆಚ್ಚುವರಿ ಆಯ್ಕೆಯಾಗಿ ಪ್ಯಾನ್‌ಗೆ ಪರ್ಯಾಯವಾಗಿ ಆಧಾರ್‌ ಬಳಸಲು ಅವಕಾಶ ನೀಡಲಾಗಿದೆ. ಪ್ಯಾನ್‌ ಸಂಖ್ಯೆ ಬದಲಿಗೆ ಆಧಾರ್ ನಮೂದಿಸಿದವರಿಗೆ ತೆರಿಗೆ ಇಲಾಖೆಯೇ ಪ್ಯಾನ್‌ ಕಾರ್ಡ್ ತಲುಪಿಸುತ್ತದೆ. ಪ್ರಸ್ತುತ ದೇಶದಾದ್ಯಂತ 120 ಕೋಟಿ ಆಧಾರ್ ಕಾರ್ಡ್ ಗಳನ್ನು, 41 ಕೋಟಿ ಪ್ಯಾನ್‌ ಕರ್ಡ್ ಗಳನ್ನು ವಿತರಿಸಲಾಗಿದೆ. ಇವುಗಳ ಪೈಕಿ 22 ಕೋಟಿ ಪ್ಯಾನ್‌ ಕಾರ್ಡ್ಗಳು ಆಧಾರ್ ನೊಂದಿಗೆ ಲಿಂಕ್ ಆಗಿವೆ.

English summary

I-T will 'suo motu' allot PAN to those only furnishing Aadhaar

The taxman will "suo motu" allot a fresh PAN to a person who files I-T returns with only Aadhaar as part of a new arrangement to link the two databases.
Story first published: Monday, July 8, 2019, 14:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X