For Quick Alerts
ALLOW NOTIFICATIONS  
For Daily Alerts

ಸಿಹಿಸುದ್ದಿ! ಉದ್ಯೋಗ ಸುರಕ್ಷತಾ ಮಸೂದೆ ಜಾರಿ, ಇಲ್ಲಿದೆ ಪ್ರಯೋಜನೆಗಳ ಪಟ್ಟಿ..

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಮಸೂದೆ 2019 ಸಂಸತ್ತಿನಲ್ಲಿ ಮಂಡಿಸಲು ಅನುಮೋದನೆ ನೀಡಿದೆ.

|

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಮಸೂದೆ (Occupational Safety, Health and Working Conditions Bill), 2019 ಸಂಸತ್ತಿನಲ್ಲಿ ಮಂಡಿಸಲು ಅನುಮೋದನೆ ನೀಡಿದೆ.
ಈ ಮಸೂದೆಯೂ ಪ್ರಸ್ತುತ ಸನ್ನಿವೇಶಕ್ಕೆ ಹೋಲಿಸಿದರೆ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ನಿಬಂಧನೆಗಳ ವ್ಯಾಪ್ತಿಯನ್ನು ಹೆಚ್ಚಿಸಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. 13 ಕೇಂದ್ರ ಕಾರ್ಮಿಕ ಕಾಯ್ದೆಗಳ ಸಂಬಂಧಿತ ನಿಬಂಧನೆಗಳ ಸಂಯೋಜನೆ, ಸರಳೀಕರಣ ಮತ್ತು ತರ್ಕಬದ್ಧತೆಯ ನಂತರ ಹೊಸ ಸಂಹಿತೆಯನ್ನು ರಚಿಸಲಾಗಿದೆ.
ಕೇಂದ್ರ ಸರ್ಕಾರವು ಜುಲೈ 10ರಂದು ನಡೆದ ಸಂಪುಟ ಸಭೆಯಲ್ಲಿ ಸೇಫ್ಟಿ ಹೆಲ್ತ್ ಆ್ಯಂಡ್ ವರ್ಕಿಂಗ್ ಕಂಡಿಶನ್ ಬಿಲ್ 2019 ಕ್ಕೆ ಅನುಮೋದನೆ ನೀಡಿದಂತಾಗಿದೆ.

ಉದ್ಯೋಗ ಸುರಕ್ಷತೆ ಮಸೂದೆ ಉದ್ದೇಶ

ಉದ್ಯೋಗ ಸುರಕ್ಷತೆ ಮಸೂದೆ ಉದ್ದೇಶ

ಸುರಕ್ಷತೆ, ಆರೋಗ್ಯ, ಕಲ್ಯಾಣ ಮತ್ತು ಸುಧಾರಿತ ಕೆಲಸದ ಪರಿಸ್ಥಿತಿಗಳು ಕಾರ್ಮಿಕರ ಯೋಗಕ್ಷೇಮಕ್ಕೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಅವಶ್ಯಕವಾಗಿದೆ. ದೇಶದ ಆರೋಗ್ಯಕರ ಉದ್ಯೋಗಿಗಳು ಹೆಚ್ಚು ಉತ್ಪಾದಕವಾಗಿರುತ್ತಾರೆ. ಕಡಿಮೆ ಅಪಘಾತಗಳು ಮತ್ತು ಅನಿರೀಕ್ಷಿತ ಘಟನೆಗಳು ಸಂಭವಿಸುವುದು ಉದ್ಯೋಗದಾತರಿಗೆ ಆರ್ಥಿಕವಾಗಿ ಪ್ಯೋಜನಕಾರಿಯಾಗಿರಲಿದೆ.
ದೇಶದ ಎಲ್ಲಾ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯಕರ ಕೆಲಸದ ಪರಿಸ್ಥಿತಿಗಳನ್ನು ವಿಸ್ತರಿಸುವ ಅಂತಿಮ ಗುರಿಯೊಂದಿಗೆ ಈ ಸಂಹಿತೆ ಜಾರಿ ತರಲಾಗುವುದು. ಸುರಕ್ಷತೆ, ಆರೋಗ್ಯ, ಕಲ್ಯಾಣ ಮತ್ತು ಕೆಲಸದ ಪರಿಸ್ಥಿತಿಗಳ ನಿಬಂಧನೆಗಳ ವ್ಯಾಪ್ತಿಯನ್ನು ಅಸ್ತಿತ್ವದಲ್ಲಿರುವ ಸುಮಾರು 9 ಪ್ರಮುಖ ಕ್ಷೇತ್ರಗಳ 10 ಅಥವಾ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಕಂಪನಿಗಳಿಗೂ ಅನ್ವಯವಾಗಲಿದೆ.

ಮಹಿಳಾ ಉದ್ಯೋಗಿಗಳಿಗೆ ಭದ್ರತೆ

ಮಹಿಳಾ ಉದ್ಯೋಗಿಗಳಿಗೆ ಭದ್ರತೆ

ಮಹಿಳೆಯರಿಗೆ ಬೆಳಿಗ್ಗೆ 6 ಗಂಟೆಯ ಮೊದಲು ಹಾಗು ಸಂಜೆ 7 ಗಂಟೆ ನಂತರ ಕೆಲಸ ಮಾಡಲು ಅವಕಾಶವಿದೆ. ಸುರಕ್ಷತೆ, ರಜಾದಿನಗಳು, ಕೆಲಸದ ಸಮಯ ಅಥವಾ ನಿಗದಿತ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಸೂಚಿಸಿರುವ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಅದಾಗ್ಯೂ, ರಾತ್ರಿ ಕೆಲಸಕ್ಕೆ ಮಹಿಳೆಯರ ಒಪ್ಪಿಗೆಯನ್ನು ತೆಗೆದುಕೊಂಡ ನಂತರವೇ ಮುಂದುವರೆಯಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಸಂಜೆ 7 ಗಂಟೆಗಿಂತ ಹೆಚ್ಚು ಸಮಯ ಮಹಿಳೆಯರು ಕೆಲಸ ಮಾಡಿದರೆ ಅವರ ರಕ್ಷಣೆ ಹೊಣೆಯು ಕಂಪನಿಯದ್ದಾಗಿರುತ್ತದೆ. ಹೆಚ್ಚುವರಿ ಸಮಯ ಮಹಿಳೆಯರಿಂದ ಕೆಲಸ ಮಾಡಿಸಿಕೊಳ್ಳಬೇಕೆಂದಾಗ ಮಹಿಳಾ ಉದ್ಯೋಗಿಗಳ ಅನುಮತಿ ಪಡೆಯಬೇಕಾಗುತ್ತದೆ.
ಕಂಪನಿಯಲ್ಲಿ ಮಕ್ಕಳಿಗೆ ಕ್ರಿಚ್ ಹಾಗೂ ಕ್ಯಾಂಟೀನ್ ಕಡ್ಡಾಯವಾಗಿರಬೇಕು. ನಿಗದಿತ ಸಮಯದ ನಂತರ ಉದ್ಯೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನೀಡಬೇಕಾಗುತ್ತದೆ. ದೇಶದ ಎಲ್ಲಾ ಕಂಪನಿಗಳು ನೌಕರರಿಗೆ ನೇಮಕಾತಿ ಪತ್ರ ನೀಡುವುದು ಕಡ್ಡಾಯ.

ವೇತನ ಸಂಹಿತೆ ಮಸೂದೆ

ವೇತನ ಸಂಹಿತೆ ಮಸೂದೆ

44 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸುವ ಗುರಿಯನ್ನು ಹೊಂದಿರುವ 2019 ರ ವೇತನ ಸಂಹಿತೆ ಮಸೂದೆ ಜುಲೈ 3 ರಂದು ಅಂಗೀಕರಿಸಲ್ಪಟ್ಟಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದಾರೆ. ಕನಿಷ್ಠ ವೇತನ ಮತ್ತು ಇತರ ವೇತನ ಸಮಸ್ಯೆಗಳನ್ನು ಒಳಗೊಂಡಿರುವ ವೇತನ ಮಸೂದೆಯನ್ನು ಸಂಸತ್ತಿನಲ್ಲಿ ಎರಡು ಅಥವಾ ಮೂರು ದಿನಗಳಲ್ಲಿ ಪರಿಚಯಿಸಲಾಗುವುದು ಎಂದು ಅವರು ಹೇಳಿದರು.

ಯಾರಿಗೆ ಅನ್ವಯ

ಯಾರಿಗೆ ಅನ್ವಯ

ಉದ್ಯೋಗ ಸುರಕ್ಷತೆ ಮಸೂದೆಯ ನಿರ್ಧಾರವು ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ನಿಬಂಧನೆಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ತಿಳಿಸಿದೆ. 10 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಐಟಿ ಸಂಸ್ಥೆಗಳು ಮತ್ತು ಸೇವಾ ವಲಯ ಸೇರಿದಂತೆ ಎಲ್ಲಾ ವಹಿವಾಟುಗಳಿಗೆ ಮಸೂದೆ ಅನ್ವಯವಾಗುತ್ತದೆ. ಜೊತೆಗೆ ಒಬ್ಬ ಕಾರ್ಮಿಕನನ್ನು ಹೊಂದಿರುವ ಗಣಿ ಮತ್ತು ಹಡಗುಕಟ್ಟೆ ಸಂಸ್ಥೆಗಳಿಗೂ ಅನ್ವಯಿಸುತ್ತದೆ.

Read more about: salary money government schemes
English summary

Cabinet Approves Code On Occupational Safety, Health and Working Conditions Bill, Here's a list of benefits ..

The Union Cabinet chaired by Narendra Modi has approved for introduction of the Code on Occupational Safety, Health and Working Conditions Bill, 2019 in the Parliament.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X