For Quick Alerts
ALLOW NOTIFICATIONS  
For Daily Alerts

ಸಕ್ಸಸ್​ಫುಲ್ ಬಿಸಿನೆಸ್ ಹೊಂದಿರುವ ಬಾಲಿವುಡ್ ನಟರು ಯಾರು ಗೊತ್ತೆ?

|

ನಮ್ಮ ದೇಶದಲ್ಲಿ ತುಂಬಾ ಜನರಿಗೆ ಸಿನಿಮಾಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ! ಜಗತ್ತಿನಾದ್ಯಂತ ನಮ್ಮ ಬಾಲಿವುಡ್, ಸೌತ್ ಇಂಡಿಯಾದ ಸಿನಿಮಾಗಳಿಗೆ ವ್ಯಾಪಕ ಮಾರುಕಟ್ಟೆ ಇದೆ. ನಟನೆ ಜೊತೆಗೆ ಬಾಲಿವುಡ್, ಸೌತ್ ಇಂಡಿಯಾ ಹೀಗೆ ಬೇರೆ ಬೇರೆ ಭಾಷೆಗಳ ನಟರು ತಮ್ಮ ಸ್ವಂತ ಉದ್ಯಮಗಳನ್ನು ಕೂಡ ನಡೆಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಬಗ್ಗೆ ತಿಳಿದುಕೊಳ್ಳಬೇಕೆಂಬ ಬಯಕೆ ತುಂಬಾ ಜನ ಅಭಿಮಾನಿಗಳಿಗಿರುತ್ತದೆ.

ಪ್ರಸ್ತುತ ಲೇಖನದಲ್ಲಿ ಬಾಲಿವುಡ್ ನ ಖ್ಯಾತ ನಟರು ಯಶಸ್ವಿ ಬಿಸಿನೆಸ್ ಹೊಂದಿರುವುದರ ಬಗ್ಗೆ ಮಾಹಿತಿ ನೀಡಿಲಾಗಿದೆ. ಬನ್ನಿ ನೋಡೋಣ..

ಶಾರುಖ್ ಖಾನ್
 

ಶಾರುಖ್ ಖಾನ್

ರೆಡ್ ಚಿಲ್ಲೀಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಮತ್ತು ಸಹಸಂಸ್ಥೆಗಳ ಸಮೂಹಗಳಿಗೆ ಶಾರುಖ್ ಖಾನ್ ಸಹ-ಚೇರ್ಮನ್ ಆಗಿದ್ದಾರೆ. ಇದು ಚಲನಚಿತ್ರಗಳನ್ನು ನಿರ್ಮಿಸಿದರೆ ವಿಎಫ್ ಎಕ್ಸ್ ಸಂಸ್ತೆ ವಿಎಫ್ಎಕ್ಸ್ (ದೃಶ್ಯ ಪರಿಣಾಮ) ಹಾಗೂ ಅನಿಮೇಶನ್ ಅಥವಾ ಕಲಾಚಲನಚಿತ್ರಗಳನ್ನು ನಿರ್ಮಿಸಿ ಇತರ ಚಿತ್ರನಿರ್ಮಾಣ ಸಂಸ್ಥೆಗಳಿಗೆ ಒದಗಿಸುತ್ತದೆ. ಅಲ್ಲದೇ ಭಾರತದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಕೊಲ್ಕೊತ್ತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕರೂ ಆಗಿದ್ದಾರೆ. 2008 ರಲ್ಲಿ ಈ ತಂಡದ ಮಾಲೀಕತ್ವದ ಹಕ್ಕುಗಳನ್ನು ಇವರು ಜೂಹಿ ಚಾವ್ಲಾರೊಂದಿಗೆ ಪಡೆದುಕೊಂಡಿದ್ದಾರೆ. ಈ ಜೋಡಿ ಹಲವು ಯಶಸ್ವಿ ಚಲನಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಐಪಿಎಲ್ ನಲ್ಲಿ ಕೆಕೆಆರ್ ಒಂದು ಶ್ರೀಮಂತ ತಂಡವಾಗಿದೆ ಹಾಗೂ ಇದರ ಬ್ರಾಂಡ್ ಮೌಲ್ಯ ಕೆಲವಾರು ಮಿಲಿಯನ್ನುಗಳಷ್ಟಿದೆ. ಅಲ್ಲದೇ ಶಾರುಖ್ ಟಿವಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರ ನಿರೂಪಕ ಹಾಗೂ ಪ್ರಸ್ತುತಕಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಹಲವಾರು ಉತ್ಪನ್ನಗಳಿಗೆ ತಮ್ಮ ಹೆಸರನ್ನು ಬಳಸಿಕೊಳ್ಳಲು ನೀಡುವ ಒಪ್ಪಂದದಿಂದಲೂ, ಜಾಹೀರಾತುಗಳ ಮೂಲಕ ಇವರು ಬಹಳಷ್ಟು ಹಣವನ್ನು ಗಳಿಸುತ್ತಾರೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

ಹಿಂದಿ ಚಿತ್ರನಟಿ ಶಿಲ್ಪಾ ಶೆಟ್ಟಿಯವರೂ ಹಲವಾರು ಲಾಭಗಳಿಸುವ ಉದ್ದಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇವುಗಳ ವಹಿವಾಟನ್ನು ಇವರ ಪತಿ ರಾಜ್ ಕುಂದ್ರಾರವರೇ ನಿರ್ವಹಿಸುತ್ತಾರೆ. ಇದಕ್ಕೂ ಮುನ್ನ ಐಪಿಎಲ್ ಪಂದ್ಯಾವಳಿಗಳಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಪಾಲುಗಾರಿಕೆಯನ್ನು ಹೊಂದಿದ್ದ ಇವರು ಸುಪ್ರೀಂ ಕೋರ್ಟ್ ಪಂಥಕಟ್ಟುವಿಕೆಯ ಆರೋಪ ಹೊರಿಸಿದ ಬಳಿಕ ಇದರ ಪಾಲುದಾರಿಕೆಯನ್ನು ಮಾರಿದ್ದರು. ಬಳಿಕ ಶಿಲ್ಪಾರವರು ಇತರ ಉದ್ಯಮದಲ್ಲಿ ತಮ್ಮ ಪತಿಯೊಂದಿಗೆ ಭಾಗಿಯಾಗಿದ್ದಾರೆ. ಅಲ್ಲದೇ ತಮ್ಮದೇ ಆದ ಚಿತ್ರೋದ್ಯಮವನ್ನು ಸ್ಥಾಪಿಸಿ 2014ರಲ್ಲಿ ಡಿಶ್ಕಿಯಾಂ ಎಂಬ ಚಿತ್ರವನ್ನೂ ನಿರ್ಮಿಸಿದ್ದಾರೆ. ಅಲ್ಲದೇ ಲೋಲಿಸ್ ಎಂಬ ಭಾರತೀಯ ಸೌಂದರ್ಯ ಮಳಿಗೆ ಮತ್ತು ಸ್ಪಾ ಗಳ ಸಮೂಹ ಸಂಸ್ಥೆಗಳ ಒಡತಿಯೂ ಆಗಿದ್ದಾರೆ. 2015ರಲ್ಲಿ ಯೋಗಾಭ್ಯಾಸದ ಡಿವಿಡಿಯನ್ನು ಬಿಡುಗಡೆಗೊಳಿಸಿದ ಬಳಿಕ ಇವರಿಗೆ ಭಾರೀ ಪ್ರಮಾಣದ ಮೆಚ್ಚುಗೆ ಮತ್ತು ಲಾಭ ದೊರಕಿದೆ. ಇವರು ತಮ್ಮ ವಾಣಿಜ್ಯ ವಹಿವಾಟುಗಳ ಜೊತೆಗೇ ಟೀವಿ ಮಾಧ್ಯಮದಲ್ಲಿಯೂ ವ್ಯಸ್ತರಾಗಿದ್ದಾರೆ. ಇವರು ಕೆಲವಾರು ಟೀವಿ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿದ್ದಾರೆ. ತೀರಾ ಇತ್ತೀಚಿನದ್ದೆಂದರೆ ಸೋನಿ ಎಂಟರ್ಟೈನ್ಮೆಂಟ್ ಚಾನೆಲ್ ನ ಸುಪರ್ ಡಾನ್ಸರ್ ಕಾರ್ಯಕ್ರಮ. ಹಾಗಾಗಿ ನಟಿಯಾಗಿರುವ ಹೊರತು ಶಿಲ್ಪಾರವರು ಯಶಸ್ವಿ ವಾಣಿಜ್ಯೋದ್ಯಮಿ, ನಿರ್ಮಾಪಕಿ, ರೂಪದರ್ಶಿ ಹಾಗೂ ಟಿವಿ ಪ್ರಸ್ತುತಕಾರ್ತಿಯೂ ಆಗಿದ್ದಾರೆ.

ಸುನಿಲ್ ಶೆಟ್ಟಿ
 

ಸುನಿಲ್ ಶೆಟ್ಟಿ

ಸ್ವತಃ ದೇಹದಾರ್ಢತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸುನಿಲ್ ಶೆಟ್ಟಿಯವರು ದೇಶದಾದ್ಯಂತ ಹಲವೆಡೆ ವ್ಯಾಯಾಮಶಾಲೆ ಅಥವಾ ಜಿಮ್ ಗಳನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ ಪಾಪ್ ಕಾರ್ನ್ ಎಂಟರ್ಟೈನ್ಮೆಂಟ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯ ಒಡೆತನ ಹೊಂದಿರುವ ಇವರು ಖೇಲ್ (2003), ರಕ್ತ್ (2004), ಭಾಗಂ ಭಾಗ್ (2006), ಮಿಷನ್ ಇಸ್ತಾಂಬುಲ್ (2008), ಇಎಂಐ (2008) ಮತ್ತು ಲೂಟ್ (2011) ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಇವರು ಮಿಷ್ಚೀಫ್ ಎಂಬ ಹೆಸರಿನ ಸೌಂದರ್ಯ ಮಳಿಗೆಗಳ ಒಡೆತನವನ್ನೂ ಹೊಂದಿದ್ದಾರೆ. ಅಲ್ಲದೇ ಉಡುಪಿ ರುಚಿಯ ಹೋಟೆಲುಗಳನ್ನು ಮುಂಬೈಯಲ್ಲಿ ಪ್ರಾರಂಭಿಸಿದ್ದಾರೆ. ಅಲ್ಲದೇ ಎಸ್2 ರಿಯಾಲಿಟಿ ಎಂಬ ಹೆಸರಿನ ವೈಭವಯುತ ಭೂಮಿ ಮತ್ತು ಕಟ್ಟಡಗಳನ್ನು ನಿರ್ಮಿಸಿ ಒದಗಿಸುವ ಸಂಸ್ಥೆಯ ಒಡೆತನ ಹೊಂದಿದ್ದಾರೆ. ಅಲ್ಲದೇ ಹಕೀಂ ಆಲಿಂ ರವರ ಸೆಲೂನುಗಳಲ್ಲಿ ಶೇ. ಐವತ್ತರಷ್ಟು ಪಾಲುದಾರಿಕೆಯನ್ನೂ ಹೊಂದಿದ್ದಾರೆ.

ಟ್ವಿಂಕಲ್ ಖನ್ನಾ

ಟ್ವಿಂಕಲ್ ಖನ್ನಾ

ತಮ್ಮ ತಾಯಿ ಡಿಂಪಲ್ ಕಪಾಡಿಯಾರೊಂದಿಗೆ ಮೇಣದ ಬತ್ತಿಯನ್ನು ತಯಾರಿಸುವ ಉದ್ಯಮದಲ್ಲಿ ಟ್ವಿಂಕಲ್ ಖನ್ನಾರವರು ಬಹಳಷ್ಟು ಹಣ ಗಳಿಸುತ್ತಿದ್ದಾರೆ. ಈ ಸಂಸ್ಥೆ ಕೇವಲ ಭಾರತದ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ವಿದೇಶಗಳಿಗೂ ತಮ್ಮ ಉತ್ಪನ್ನಗಳನ್ನು ಮಾರುತ್ತಿದೆ. ಅಲ್ಲದೇ ಮುಂಬೈಯಲ್ಲಿ ದ ವೈಟ್ ವಿಂಡೋ ಎಂಬ ಹೆಸರಿನ ಒಳಾಂಗಣ ವಿನ್ಯಾಸದ ಸಂಸ್ಥೆಯನ್ನೂ ಇವರು ಪ್ರಾರಂಭಿಸಿದ್ದಾರೆ. ಅಲ್ಲದೇ ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಇವರು ವೃತ್ತಪತ್ರಿಕೆಯೊಂದರ ನಿಯತಕಾಲಿಕೆಯನ್ನೂ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಖ್ಯಾತ ವೃತ್ತಪತ್ರಿಕೆಗಳಾದ ಡಿಎನ್ಎ ಮತ್ತು ಟೈಮ್ಸ್ ಆಫ್ ಇಂಡಿಯಾದಲ್ಲಿ ಇವರ ಲೇಖನಗಳು ಪ್ರಕಟವಾಗುತ್ತಿವೆ. ಆಗಸ್ಟ್ 2015ರಲ್ಲಿ ಇವರ ಕೃತಿ 'ಮಿಸಸ್ ಫನ್ನೀಬೋನ್ಸ್' ಪ್ರಕಟವಾಗಿದ್ದು ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಈ ಮೂಲಕ 2015ರಲ್ಲಿ ಅತಿ ಹೆಚ್ಚು ಪ್ರತಿಗಳು ಮಾರಾಟವಾದ ಕೃತಿಯ ಲೇಖಕಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಇವರ ಎರಡನೆಯ ಕೃತಿ 'ದ ಲೆಜೆಂಡ್ ಆಫ್ ಲಕ್ಷ್ಮೀ ಪ್ರಸಾದ್' ಅಮೆಜಾನ್ ನಲ್ಲಿ ಎರಡನೆಯ ಅತಿ ಹೆಚ್ಚು ಮಾರಾಟವಾಗುವ ಕೃತಿಯ ಪಟ್ಟ ಪಡೆದಿದೆ. ಅಲ್ಲದೇ ಇವರು ಚಿತ್ರ ನಿರ್ಮಾಪಕಿಯೂ ಆಗಿದ್ದು ಇದುವರೆಗೆ ಗ್ರೇಜಿಂಗ್ ಗೋಟ್ಸ್ ಎಂಬ ಸಂಸ್ಥೆಯ ಮೂಲಕ ಆರು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಅಜಯ್ ದೇವಗನ್

ಅಜಯ್ ದೇವಗನ್

ಅಜಯ್ ದೇವಗನ್ ತಮ್ಮ ಗಳಿಕೆಯ ಹಣವನ್ನು ವಿವಿಧ ಯೋಜನೆಗಳಲ್ಲಿ ತೊಡಗಿಸಿದ್ದಾರೆ. ಈ ನಟ ಗುಜರಾತ್ ನಲ್ಲಿರುವ ಚಾರ್ನಾಕಾ ಸೋಲಾರ್ ಪ್ರಾಜೆಕ್ಟ್ ಎಂಬ ಸಂಸ್ಥೆಯಲ್ಲಿಯೂ ಹಣ ಹೂಡಿದ್ದಾರೆ. ಈ ಇಪ್ಪತ್ತೈದು ಮೆಗಾವ್ಯಾಟ್ ನ ಸಂಸ್ಥೆಯಲ್ಲಿ ರೋಗಾ ಸಂಸ್ಥೆಯ ಜೊತೆ ಅಜಯ್ ಸಹಾ ಕೆಲವಾರು ಕೋಟಿ ರೂಪಾಯಿಗಳನ್ನು ಹೂಡಿದ್ದಾರೆ. ಕೇವಲ ಎಂಟು ತಿಂಗಳಲ್ಲಿಯೇ ಕಾರ್ಯಾರಂಭಗೊಳಿಸಿದ ಸಂಸ್ಥೆ ಡಿಸೆಂಬರ್ 31, 2011ರಿಂದ ಸೇವೆ ಸಲ್ಲಿಸುತ್ತಿದೆ. ಇದರ ಜೊತೆಗೇ ಅಜಯ್ ದೇವಗನ್ ಫಿಲ್ಮ್ಸ್ ಎಂಬ ಸಂಸ್ಥೆಯ ಒಡೆತನವನ್ನು 2000ರಿಂದ ಹೊಂದಿದ್ದು ಸ್ವತಃ ನಟಿಸಿದ ರಾಜು ಚಾಚಾ ಎಂಬ ಚಿತ್ರದಲ್ಲಿ ಪತ್ನಿ ಕಾಜೋಲ್ ನಾಯಕಿಯಾಗಿದ್ದಾರೆ. ಅಲ್ಲದೇ ಇವರು ವಿ ಎಫ್ ಎಕ್ಸ್ ಸ್ಟುಡಿಯೋ ಒಂದನ್ನೂ ಹೊಂದಿದ್ದಾರೆ.

ಸುಶ್ಮಿತಾ ಸೇನ್

ಸುಶ್ಮಿತಾ ಸೇನ್

ಸುಶ್ಮಿತಾ ಸೇನ್ ಓರ್ವ ಯಶಸ್ವೀ ಉದ್ಯಮಿಯಾಗಿದ್ದಾರೆ. ತಂತ್ರ ಎಂಟರ್ಟೈನ್ಮೆಂಟ್ ಎಂಬ ಸಂಸ್ಥೆಯನ್ನು ಇವರು ಸ್ಥಾಪಿಸಿದ್ದು ಹಲವಾರು ಚಲನಚಿತ್ರಗಳನ್ನು ನಿರ್ಮಿಸುತ್ತಿದೆ. ಅಲ್ಲದೇ ಇವರು ದುಬೈಯಲ್ಲಿ ಚಿನ್ನದ ಒಡವೆಗಳ ಮಳಿಗೆಗಳನ್ನೂ ಹೊಂದಿದ್ದು ಇವರ ತಾಯಿ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಸೆನಾಜಿಯೋನ್ ಎಂಬ ಹೆಸರಿನ ಆಹಾರ ಮಳಿಗೆಗಳನ್ನು ಪ್ರಾರಂಭಿಸಲೂ ಇವರು ಯೋಜಿಸುತ್ತಿದ್ದಾರೆ. ' ಐ ಆಮ್ ಶಿ' ಎಂಬ ವಿಶ್ವ ಸುಂದರಿ ಕಾರ್ಯಕ್ರಮದ ಮೇಲ್ವಿಚಾರಣೆಯನ್ನೂ ಇವರು ಹೊತ್ತಿದ್ದು ಇತ್ತೀಚೆಗೆ ಈ ಹೊಣೆಯನ್ನು ಫೆಮಿನಾ ಸಂಸ್ಥೆ ವಹಿಸಿಕೊಂಡಿದೆ.

ಜಾನ್ ಅಬ್ರಹಾಂ

ಜಾನ್ ಅಬ್ರಹಾಂ

ಜೆಎ ಎಂಟರ್ಟೈನ್ಮೆಂಟ್ ಎಂಬ ಸಂಸ್ಥೆಯನ್ನು ಇವರು ಸ್ಥಾಪಿಸಿದ್ದು, ಇದರ ಪ್ರಥಮ ಪ್ರಯತ್ನದಲ್ಲಿ ಆಯುಶ್ಮಾನ್ ಖುರಾನ ಮತ್ತು ಯಾಮಿನಿ ಗುಪ್ತ ನಟಿಸಿದ ವಿಕ್ಕಿ ಡೋನರ್ (2012) ಎಂಬ ಚಿತ್ರ ಬಿಡುಗಡೆ ಕಂಡಿದೆ. ಈ ಚಿತ್ರ ಆ ವರ್ಷದ ಒಟ್ಟಾರೆ ಮನರಂಜನೆ ನೀಡಿದ ಅತಿ ಜನಪ್ರಿಯ ಚಿತ್ರ ಎಂಬ ಪ್ರಶಸ್ತಿಯನ್ನೂ ಪಡೆದಿದೆ. ಅಲ್ಲದೇ ಎನ್ಡಿ ಟಿವಿಯ ಏಳನೆಯ ಆವೃತ್ತಿಯ ಲಾಭಕರ ನೇತೃತ್ವ ಪ್ರಶಸ್ತಿಗಳಲ್ಲಿ ವರ್ಷದ ಕ್ರಿಯಾತ್ಮಕ ಉದ್ಯಮಿ ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅಲ್ಲದೇ ಇವರ ಇತರ ಚಿತ್ರಗಳು ಬಹಳಷ್ಟು ವಿಮರ್ಶೆಗಳಿಗೆ ಗುರಿಯಾಗಿದ್ದು ಲಾಭವನ್ನೂ ಗಳಿಸಿವೆ. ಚಲನಚಿತ್ರ ಮತ್ತು ಬೈಕ್ ಗಳ ಹೊರತಾಗಿ ಜಾನ್ ರವರು ದೇಹದಾರ್ಢ್ಯತೆಗೂ ಹೆಚ್ಚಿನ ಮಹತ್ವ ನೀಡುತ್ತಾರೆ.

ಕರಿಶ್ಮಾ ಕಪೂರ್

ಕರಿಶ್ಮಾ ಕಪೂರ್

ಬಾಲಿವುಡ್ ನಟಿಯಾಗಿ ಯಶಸ್ವಿ ಜೀವನವನ್ನು ಪೂರೈಸಿದ ಬಳಿಕ ಲೋಲೋ ಎಂಬ ಮನೆ ಹೆಸರಿನ ಕರಿಶ್ಮಾ ಇತರ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಯಶಸ್ವಿಯಾದ ಇ-ಕಾಮರ್ಸ್ ತಾನವನ್ನು ಹೊಂದಿದ್ದು ತಾಯಿ ಮತ್ತು ಮಗುವಿನ ಕಾಳಜಿಯ ಉತ್ಪನ್ನಗಳನ್ನು ಈ ತಾಣದ ಮೂಲಕ ಮಾರಲಾಗುತ್ತಿದೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ಚಲನಚಿತ್ರ ನಿಮಾಣಕ್ಕೂ ಹೊರತಾಗಿ ಸಲ್ಮಾನ್ ಖಾನ್ ಇತರ ವಿಭಾಗಗಳಲ್ಲಿಯೂ ತಮ್ಮ ವರ್ಚಸ್ಸು ಮತ್ತು ಹೆಸರನ್ನು ಬಳಸಿ ಲಾಭಗಳಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಮನರಂಜನೆ, ಸ್ಪರ್ಧಾತ್ಮಕ ಕ್ರೀಡೆ, ಅನುಮೋದನೆಗಳು ಮತ್ತು ಬ್ರಾಂಡೆಡ್ ಉಡುಪುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಿಂದ್ರಾ ರೀಟೇಲ್ ವೆಂಚರ್ಸ್ ಸಂಸ್ಥೆಗೆ ರಹದಾರಿ ನೀಡಿರುವ ಇವರ 'ಬೀಯಿಂ ಹ್ಯೂಮನ್' ಎಂಬ ಸಂಸ್ಥೆ ಹಲವಾರು ನಗರಗಳಲ್ಲಿ ಫ್ಯಾಶನ್ ಮತ್ತು ಇತರ ಸಂಬಂಧಿತ ಉತ್ಪನ್ನಗಳನ್ನು ಮಾರುತ್ತಿದೆ. ಇದರ ಹೊರತಾಗಿ ಸ್ಮಾರ್ಟ್ ಫೋನ್ ಗಳಿಗಾಗಿ ಬಳಸಲಾಗುವ 'ಬೀಯಿಂಗ್ ಸ್ಮಾರ್ಟ್' ಎಂಬ ಗುಣಮುದ್ರೆಯ ಒಡೆತನವನ್ನು ಇವರು ಹೊಂದಿದ್ದು ಈ ಮೂಲಕ ಅಗ್ಗ-ಮಧ್ಯಮದರದ ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೇ ಇವರು ಚೀನಾದ ಮೊಬೈಲ್ ನಿರ್ಮಾಣ ಸಂಸ್ಥೆಯನ್ನು ಆರಿಸಿಕೊಂಡಿದ್ದು ಆಂಡ್ರಾಯ್ಡ್ ಮೂಲಕ ನಡೆಸಲ್ಪಡುವ, ಇಪ್ಪತ್ತು ಸಾವಿರಕ್ಕೂ ಕಡಿಮೆ ಬೆಲೆಯ ಮೊಬೈಲುಗಳನ್ನು ಮಾರುಕಟ್ಟೆಗೆ ಪರಿಚಯಿಸುವತ್ತ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಅಲ್ಲದೇ ಪ್ರತಿ ಜಾಹೀರಾತಿನ ಮೂಲಕ ಲಾಭಗಳಿಸುವ ಯಾತ್ರಾ. ಕಾಂ ತಾಣದ ಪ್ರತಿ ವಹಿವಾಟಿನಲ್ಲಿ ಇವರು ಐದು ಶೇಖಡ ಲಾಭಾಂಶವನ್ನು ಪಡೆಯುತ್ತಾರೆ. ಅಂದರೆ ಈ ತಾಣದ ಮೂಲಕ ಇನ್ನೂ ಪ್ರಾರಂಭಗೊಂಡಿರದ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಗುರುತಿಸಲ್ಪಡುತ್ತವೆ.

ಹೃತಿಕ್ ರೋಶನ್

ಹೃತಿಕ್ ರೋಶನ್

2000 ನೇ ಇಸವಿಯಲ್ಲಿ ತಮ್ಮ ತಂದೆ ರಾಕೇಶ್ ರೋಶನ್ ರವರ ಕಹೋ ನಾ ಪ್ಯಾರ್ ಹೈ ಎಂಬ ಯಶಸ್ವಿ ಚಿತ್ರದ ಮೂಲಕ ಗುರುತಿಸಲ್ಪಟ್ಟ ಹೃತಿಕ್ ರೋಶನ್ ತಮ್ಮ ಫ್ಯಾಶನ್ ಬ್ರಾಂಡ್ ಆದ ಹೆಚ್ಆರ್ಎಕ್ಸ್ ಅನ್ನು ಫ್ಲಿಪ್ ಕಾರ್ಟ್ ಒಡೆತನದ ಆನ್ಲೈನ್ ಸಂಸ್ಥೆಯಾದ ಮಿಂತ್ರಾ ಸಂಸ್ಥೆಗೆ ಮಾರಿದ್ದಾರೆ. ಇವರ ಹೆಚ್ಆರ್ಎಕ್ಸ್ ಬ್ರಾಂಡ್ 2013 ರಲ್ಲಿ ಪ್ರಾರಂಭವಾಗಿದ್ದು ಕ್ರೀಡಾ ಉಡುಪುಗಳಿಗೆ ಹೆಸರಾಗಿತ್ತು ಹಾಗೂ ಈಗ ಮಿಂತ್ರಾ ಈ ಹೆಸರನ್ನು ಉಪಯೋಗಿಸಿಕೊಂಡು ಕ್ರೀಡಾ ಉಡುಪುಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಬೆಂಗಳೂರು ಮೂಲದ ಕ್ಯೂರ್ ಫಿಟ್ ಎಂಬ ದೇಹದಾರ್ಢ್ಯ ಸಂಸ್ಥೆಯ ಹೆಚ್ ಆರ್ ಎಕ್ಸ್ ವರ್ಕ್ ಔಟ್ ಎಂಬ ಉಡುಪುಗಳಲ್ಲಿ ಹೃತಿಕ್ ತಮ್ಮ ಹೂಡಿಕೆಯನ್ನು ಹೂಡಿದ್ದಾರೆ.

ಪ್ರೀತಿ ಜಿಂಟಾ

ಪ್ರೀತಿ ಜಿಂಟಾ

ಕೆನ್ನೆಯ ಗುಳಿಯ ಸುಂದರಿ ಪ್ರೀತಿಯವರು ಬಾಲಿವುಡ್ ಮತ್ತು ಐಪಿಎಲ್ ಉದ್ಯಮದ ಆಕರ್ಷಣೆಯ ಕೇಂದ್ರವಾಗಿದ್ದಾರೆ. ತಮ್ಮ ನಟನಾ ಜೀವನದಲ್ಲಿ ಇವರು ಹಲವಾರು ಯಶಸ್ವೀ ಚಿತ್ರಗಳನ್ನು ನೀಡಿದ್ದಾರೆ. ಇಲ್ಲಿಗೇ ನಿಲ್ಲಿಸದೇ ಇವರು ಅಂಕಣಕಾರ್ತಿಯಾಗಿ, ಸಮಾಜಸೇವಕಿ ಹಾಗೂ ಐಪಿಎಲ್ ತಂಡವಾದ ಕಿಂಗ್ಸ್ ಆಫ್ ಪಂಜಾಬ ತಂಡದ ಒಡತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಇವರು ಯಶಸ್ವಿ ಉದ್ಯಮಿಯಾಗಿದ್ದು ಜಾಣ್ಮೆ ಮತ್ತು ಸೌಂದರ್ಯದ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.

ಸನ್ನಿ ಲಿಯೋನ್

ಸನ್ನಿ ಲಿಯೋನ್

ಇವರು ಸೆಪ್ಟೆಂಬರ್ 1, 2012ರಂದು ಬಿಡುಗಡೆಯಾದ ಐ ಆಯ್ ಬೇಶರಮ್.ಕಾಂ ಎಂಬ ವಯಸ್ಕರ ತಾಣದ ಒಡತಿಯಾಗಿದ್ದಾರೆ. ಈ ತಾಣದಲ್ಲಿ ವಯಸ್ಕರಿಗಾಗಿ ಕಾಮದಾಟಿಕೆ, ಒಳ ಉಡುಪುಗಳು, ವಯಸ್ಕರ ಉತ್ಪನ್ನಗಳು, ಮಾದಕ ಉಡುಗೆ, ತೊಡುಗೆ, ಈಜುಕೊಳದ ಉಡುಪುಗಳು, ಪಾದರಕ್ಷೆಗಳು, ಔತಣದಲ್ಲಿ ತೊಡುವ ಉಡುಗೆ, ಜೀವನ ಸುಲಭಗೊಳಿಸುವ ಉತ್ಪನ್ನಗಳು ಮೊದಲಾದವುಗಳನ್ನು ಮಾರಲಾಗುತ್ತದೆ. ಅಲ್ಲದೇ ಬಾಕ್ಸ್ ಲೀಗ್ ಕ್ರಿಕೆಟ್ ಎಂಬ

ಆನ್ಲೈನ್ ತಾಣದ ಸಹಸಂಸ್ಥೆಯಾದ ಪ್ರಾಗ್ರಾನ್ಸಸ್ ಎಂಬ ಸಣ್ಣ ಕಥೆ ಮತ್ತು ಆನ್ಲೈನ್ ಮೂಲಕ ಆಡುವ ಆಟಗಳು ಮೊದಲಾದ ಸೇವೆಗಳನ್ನು ಒದಗಿಸುವ ತಾಣದ ಒಡೆತನವನ್ನು ಹೊಂದಿದ್ದಾರೆ. ಅಲ್ಲದೇ ಈ ತಾಣದಲ್ಲಿ ಇತರ ವಿಭಾಗಗಳಾದ ಪಾದರಕ್ಷೆ, ಉಡುಪುಗಳು ಒದಲಾದ ತಮ್ಮದೇ ಹೆಸರಿನ ಉತ್ಪನ್ನಗಳನ್ನೂ ಮಾರಲಾಗುತ್ತಿದೆ. ಇತ್ತೀಚೆಗೆ ಇವರ ಸಂಸ್ಥೆ ಹೊರಡಿಸಿದ 'ಲಸ್ಟ್' ಎಂಬ ಹೆಸರಿನ ಸುಗಂಧದ್ರವ್ಯವನ್ನು ದುಬೈಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ನಟಿ ಮತ್ತು ರೂಪದರ್ಶಿಯಾಗಿದ್ದ ಇವರ ಜೀವನ ಈಗ ಉದ್ಯಮದತ್ತ ಹೊರಳಿದ್ದು ಸೌಂದರ್ಯ ಪ್ರಸಾದನಗಳ ನಿಟ್ಟಿನಲ್ಲಿ ಮುಂದುವರೆದಿದೆ. ಇವುಗಳಲ್ಲಿ ತುಟಿ, ಕಣ್ಣುಗಳು ಮತ್ತು ಕೆನ್ನೆಗಳಿಗೆ ರಂಗು ನೀಡುವ ಪ್ರಸಾದನಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

English summary

Bollywood Actors Who Have Successful Businesses!

SRK is co-chairman of the motion picture production company Red Chillies Entertainment and its subsidiaries.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more