For Quick Alerts
ALLOW NOTIFICATIONS  
For Daily Alerts

ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ಮುನ್ನ ಈ ಐದು ವಿಷಯ ತಿಳಿದುಕೊಳ್ಳಿ..

|

ಪ್ಯಾನ್ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ)ಆದಾಯ ತೆರಿಗೆ ಇಲಾಖೆ ವಿತರಿಸುತ್ತದೆ. ಪ್ರತಿ ನಾಗರಿಕರಿಗೂ (ವೈಯಕ್ತಿಕ, ಸಂಸ್ಥೆ ಅಥವಾ ಕಂಪನಿಯಂತಹ) ಯೂನಿಕ್ ಪ್ಯಾನ್ ನೀಡಲಾಗುತ್ತದೆ.

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಎನ್‌ಎಸ್‌ಡಿಎಲ್ (ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್) ಮತ್ತು ಯುಟಿಐಟಿಎಸ್ಎಲ್ (ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್) ವೆಬ್‌ಸೈಟ್‌ಗಳ ಮೂಲಕ ಪ್ಯಾನ್ ಕಾರ್ಡ್‌ಗಾಗಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದು. ಶಾಶ್ವತ ಖಾತೆ ಸಂಖ್ಯೆ (ಪ್ಯಾನ್), ಹೆಸರೇ ಸೂಚಿಸುವಂತೆ, ಶಾಶ್ವತ ಸಂಖ್ಯೆಯಾಗಿದ್ಉ, ಅದು ಬದಲಾಗುವುದಿಲ್ಲ. ಇ-ಪ್ಯಾನ್ ಸ್ವೀಕರಿಸಲು ನಿಮ್ಮ ಇ-ಮೇಲ್ ಐಡಿಯನ್ನು ಪ್ಯಾನ್ ಅರ್ಜಿ ನಮೂನೆಯಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.

ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ:

ಅರ್ಜಿ ಸಲ್ಲಿಸಿ
 

ಅರ್ಜಿ ಸಲ್ಲಿಸಿ

ದೇಶದ ಪ್ರತಿಯೊಬ್ಬ ನಾಗರಿಕರೂ ಅಥವಾ ತೆರಿಗೆದಾರರು ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು. ಪ್ಯಾನ್ ಹೊಂದಿರದ ವ್ಯಕ್ತಿಗಳು ಬಜೆಟ್‌ನಲ್ಲಿ ಘೋಷಿಸಿದಂತೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಬದಲಿಗೆ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಬಹುದು.

 ಪ್ಯಾನ್ ಕಡ್ಡಾಯ

ಪ್ಯಾನ್ ಕಡ್ಡಾಯ

ಪ್ಯಾನ್ ಅನ್ನು ನಮೂದಿಸುವುದು ಕಡ್ಡಾಯವಾಗಿರುವ ಆರ್ಥಿಕ ಅಥವಾ ಹಣಕಾಸು ವಹಿವಾಟುಗಳನ್ನು ಕೈಗೊಳ್ಳಲು ಬಯಸುವ ಯಾವುದೇ ವ್ಯಕ್ತಿ ಪ್ಯಾನ್ ಹೊಂದಿರಬೇಕು. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಗತ್ಯವಿಲ್ಲದ ವ್ಯಕ್ತಿಗಳು ಸಹ ಸ್ವಯಂಪ್ರೇರಣೆಯಿಂದ ಆನ್‌ಲೈನ್‌ನಲ್ಲಿ ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು.

10 ಸಾವಿರ ದಂಡ

10 ಸಾವಿರ ದಂಡ

ಒಂದಕ್ಕಿಂತ ಹೆಚ್ಚು ಪ್ಯಾನ್ ಪಡೆಯುವುದು/ಹೊಂದಿರುವುದು ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೇ ರೂ. 10,000ವರೆಗೆ ದಂಡ ವಿಧಿಸಲಾಗುವುದು.

ಪ್ಯಾನ್ ಬದಲಾವಣೆ

ಪ್ಯಾನ್ ಬದಲಾವಣೆ

ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿದ್ದರೆ, ಪ್ರಸ್ತುತ ಬಳಸುತ್ತಿರುವ ಪ್ಯಾನ್ ಅನ್ನು ನಮೂದಿಸುವ ಮೂಲಕ ಪ್ಯಾನ್ ಬದಲಾವಣೆ ವಿನಂತಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅಜಾಗರೂಕತೆಯಿಂದ ಹಂಚಿಕೆಯಾಗಿರುವ ಎಲ್ಲಾ ಇತರ ಪ್ಯಾನ್ ಕಾರ್ಡ್ ವಿವರ ಸಹ ನಮೂನೆಯಲ್ಲಿ ನಮೂದಿಸಬೇಕು.

ಥರ್ಡ್ ಪಾರ್ಟಿ ಪರಿಶೀಲನೆ
 

ಥರ್ಡ್ ಪಾರ್ಟಿ ಪರಿಶೀಲನೆ

ಆದಾಯ ತೆರಿಗೆ ಇಲಾಖೆಯು ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ, ಪ್ಯಾನ್ ಅರ್ಜಿದಾರರ ಗುರುತು ಮತ್ತು ವಿಳಾಸವನ್ನು ಪರಿಶೀಲಿಸಲು ಥರ್ಡ್ ಪಾರ್ಟಿ ಪರಿಶೀಲನೆಯನ್ನು ನಡೆಸಲಾಗುತ್ತದೆ. ಪ್ಯಾನ್ ಅರ್ಜಿಯ ಸಮಯದಲ್ಲಿ ಸಲ್ಲಿಸಿದ ದಾಖಲೆ ನಕಲಿ ಎಂದು ಕಂಡುಬಂದಲ್ಲಿ ಆದಾಯ ತೆರಿಗೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ.

English summary

Five Things To Know Before Applying For A PAN Card

PAN, a ten-digit alphanumeric identifier, is issued by Income Tax Department. Each assessee (such as individual, firm or company) is issued a unique PAN.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more