For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ನೌಕರರಿಗೆ ಗುಡ್ ನ್ಯೂಸ್!ಅಂತೂ ಇಂತೂ ಸಂಬಳ ಬಂತು!

ಬಿಎಸ್ಎನ್ಎಲ್ ನೌಕರರ ಜುಲೈ ತಿಂಗಳ ವೇತನ ಪಾವತಿಯಾಗಿದೆ. ಆಂತರಿಕ ಸಂಚಯದಿಂದ ವೇತನ ಪಾವತಿಗೆ ಧನಸಹಾಯ ನೀಡಲಾಗುತ್ತಿದೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ ಕೆ ಪುರ್ವಾರ್ ತಿಳಿಸಿದ್ದಾರೆ.

|

ಬಿಎಸ್ಎನ್ಎಲ್ ನೌಕರರ ಜುಲೈ ತಿಂಗಳ ವೇತನ ಪಾವತಿಯಾಗಿದೆ. ಆಂತರಿಕ ಸಂಚಯದಿಂದ ವೇತನ ಪಾವತಿಗೆ ಧನಸಹಾಯ ನೀಡಲಾಗುತ್ತಿದೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ ಕೆ ಪುರ್ವಾರ್ ತಿಳಿಸಿದ್ದಾರೆ.

ಬಿಎಸ್ಎನ್ಎಲ್ ನೌಕರರಿಗೆ ಗುಡ್ ನ್ಯೂಸ್!

ನೌಕರರ ಸಂಘವು ಕಳೆದ ವಾರ, ಜುಲೈಗೆ ನೌಕರರ ವೇತನವನ್ನು ನಿಗದಿತ ದಿನಾಂಕದಂದು ಪಾವತಿಸಲಾಗಿಲ್ಲ ಮತ್ತು ವೇತನ ಪಾವತಿ ಯಾವಾಗ ಮಾಡಲಾಗುವುದು ಎಂಬುದರ ಬಗ್ಗೆ ಮ್ಯಾನೆಜ್ಮೆಂಟ್ ತಿಳಿಸಿಲ್ಲ ಎಂದು ಹೇಳಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಿ ಕೆ ಪುರ್ವಾರ್ ಅವರು, ಆಗಸ್ಟ್ 5 ರಂದು ವೇತನವನ್ನು ಪಾವತಿಸಲಾಗುವುದು ಎಂದು ಹೇಳಿದ್ದರು.
ಈಗಾಗಲೇ ಬಿಎಸ್ಎನ್ಎಲ್ ನೌಕರರ ವೇತನವನ್ನು ಬಿಡುಗಡೆ ಮಾಡಿದ್ದು, ಹಣವನ್ನು ಬ್ಯಾಂಕುಗಳಿಗೆ ವರ್ಗಾಯಿಸಲಾಗಿದೆ ಎಂದು ಪುರ್ವಾರ್ ಸೋಮವಾರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಬಿಎಸ್ಎನ್ಎಲ್ ಜುಲೈ ತಿಂಗಳ ಸಂಬಳವನ್ನು ಪಾವತಿ ಮಾಡದಿರುವುದಕ್ಕೆ ಕಂಪನಿಯು ನಷ್ಟದಲ್ಲಿರುವುದು ಕಾರಣವಾಗಿತ್ತು.
ಕಳೆದ ಆರು ತಿಂಗಳಲ್ಲಿ ಇದು ಎರಡನೇ ಘಟನೆಯಾಗಿದೆ. ತಿಂಗಳ ಕೊನೆ ಕೆಲಸದ ದಿನ ನೌಕರರಿಗೆ ಸಂಬಳ ಸಿಗುತ್ತಿತ್ತು. ಆದರೆ ಈ ಬಾರಿ ಜುಲೈ ಮುಗಿದು ಆಗಸ್ಟ್ ಆರಂಭವಾದರೂ ಸಂಬಳ ಸಿಕ್ಕಿರಲಿಲ್ಲ. ಬಿಎಸ್ಎನ್ಎಲ್ ಸಂಬಳ ಪಾವತಿಗಾಗಿ ಒಟ್ಟು ರೂ. 850 ಕೋಟಿ ಖರ್ಚು ಮಾಡುತ್ತದೆ.
ಬಿಎಸ್‌ಎನ್‌ಎಲ್‌ನ ನಷ್ಟವು ಸುಮಾರು ರೂ. 14,000 ಕೋಟಿ ಎಂದು ಅಂದಾಜಿಸಲಾಗಿದ್ದು, 2018-19ರ ಅವಧಿಯಲ್ಲಿ ಆದಾಯ ರೂ. 19,308 ಕೋಟಿಗೆ ಇಳಿದಿದೆ. ಸಾರ್ವಜನಿಕ ವಲಯದ ಸಂಸ್ಥೆಯ ತಾತ್ಕಾಲಿಕ ನಷ್ಟವು 2015-16ರಲ್ಲಿ ರೂ. 4,859 ಕೋಟಿ, 2016-17ರಲ್ಲಿ ರೂ. 4,793 ಕೋಟಿ, 2017-18ರಲ್ಲಿ ರೂ. 7,993 ಕೋಟಿಗಳಾಗಿತ್ತು.

Read more about: bsnl salary money
English summary

BSNL Released salary payment for July

BSNL on Monday said that it has released salaries of employees for payment for the month of July.
Story first published: Tuesday, August 6, 2019, 16:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X