For Quick Alerts
ALLOW NOTIFICATIONS  
For Daily Alerts

ಆರ್‌ಬಿಐ ಹಣಕಾಸು ನೀತಿ: ರೆಪೊ ದರ ಶೇ. 5.4ಕ್ಕೆ ಇಳಿಕೆ

ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು 35 ಬಿಪಿಎಸ್ ನಿಂದ ಶೇ. 5.4ಕ್ಕೆ ಕಡಿತಗೊಳಿಸಿದೆ. ರಿವರ್ಸ್ ರೆಪೊ ಶೇ. 5.15ಕ್ಕೆ ಕಡಿತಗೊಳಿಸಲಾಗಿದೆ. 2019-20ರ ಜಿಡಿಪಿ ಬೆಳವಣಿಗೆ ಜೂನ್ ನಲ್ಲಿನ ಶೇ. 7 ರಿಂದ ಶೇ. 6.9ಕ್ಕೆ ಇಳಿಸಲಾಗಿದೆ.

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂದು ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ಶಕ್ತಿಕಾಂತ ದಾಸ್ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಸತತ ನಾಲ್ಕನೇ ಬಾರಿಗೆ ಆರ್‌ಬಿಐ ತನ್ನ ರೆಪೊ ದರದಲ್ಲಿ 35 ಬೇಸಿಸ್ ಪಾಯಿಂಟ್‌ (ಬಿಪಿಎಸ್) ಕಡಿತಗೊಳಿಸಿದೆ.

ಆರ್‌ಬಿಐ ಹಣಕಾಸು ನೀತಿ: ರೆಪೊ ದರ ಶೇ. 5.4ಕ್ಕೆ ಇಳಿಕೆ

ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು 35 ಬಿಪಿಎಸ್ ನಿಂದ ಶೇ. 5.4ಕ್ಕೆ ಕಡಿತಗೊಳಿಸಿದೆ. ರಿವರ್ಸ್ ರೆಪೊವನ್ನು ಶೇ. 5.15ಕ್ಕೆ ಕಡಿತಗೊಳಿಸಲಾಗಿದೆ. 2019-20ರ ಜಿಡಿಪಿ ಬೆಳವಣಿಗೆಯನ್ನು ಜೂನ್ ನಲ್ಲಿನ ಶೇ. 7 ರಿಂದ ಶೇ. 6.9ಕ್ಕೆ ಇಳಿಸಲಾಗಿದೆ.
ಆರ್ಬಿಐ ಹಣಕಾಸು ನಿತಿಯು ರೆಪೊ ದರ ಕಡಿತಗೊಳಿಸಿರುವುದರಿಮದ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನ ಸಿಗಲಿದ್ದು, ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.
ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ಆರ್ಥಿಕ ಕುಸಿತ, ಕಡಿಮೆ ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟು ನಿರ್ಧಾರ ರೂಪಿಸಿದೆ.

ಮುಂದೆ ಎದುರಾಗಬಹುದಾದ ಅಪಾಯಗಳು ಸ್ಥಿರವಾಗಿದ್ದರೆ, ಸಿಪಿಐ ಹಣದುಬ್ಬರವು ಹಣಕಾಸು ವರ್ಷ 2020ರ ಎರಡನೇ ತ್ರೈಮಾಸಿಕದಲ್ಲಿ ಶೇ. 3.1 ಮತ್ತು ಹಣಕಾಸು ವರ್ಷ 2020ರ ದ್ವಿತೀಯಾರ್ಧದಲ್ಲಿ ಶೇ. 3.5-3.7 ಎಂದು ನಿರೀಕ್ಷಿಸಲಾಗಿದೆ. ಹಣಕಾಸು ವರ್ಷ 2021 ರ ಮೊದಲ ತ್ರೈಮಾಸಿಕದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವನ್ನು ಶೇ. 3.6 ಎಂದು ಅಂದಾಜಿಸಲಾಗಿದೆ.
ಆರ್ಥಿಕ ವರ್ಷ 2020ರ ಜಿಡಿಪಿ ಬೆಳವಣಿಗೆ ಜೂನ್ ನೀತಿಯಲ್ಲಿ ಶೇ. 7 ರಿಂದ ಆಗಸ್ಟ್‌ನಲ್ಲಿ ಶೇ. 6.9% ಕ್ಕೆ ನಿಗದಿಪಡಿಸಲಾಗಿದೆ. 2021 ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ. 7.4 ಎಂದು ನಿರ್ಧರಿಸಲಾಗಿದೆ.

English summary

RBI Monetary Policy: MPC cuts repo rate to 5.4%

Real GDP growth for 2019-20 is revised downwards from 7 percent in the June policy to 6.9 percent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X