For Quick Alerts
ALLOW NOTIFICATIONS  
For Daily Alerts

ಹೋಟೆಲ್ ಗಳಲ್ಲಿ ಊಟ ಮಾಡೋರಿಗೆ ಗುಡ್ ನ್ಯೂಸ್! ಸರ್ಕಾರದಿಂದ ಹೊಸ ರೂಲ್ಸ್

ಬಾಳೆಹಣ್ಣು ಮತ್ತು ಮೊಟ್ಟೆಗಳಂತಹ ಆಹಾರ ಪದಾರ್ಥಗಳಿಗೆ ಅತಿಯಾದ ದರವನ್ನು ವಿಧಿಸುವ ಪಂಚತಾರಾ ಹೋಟೆಲ್‌ಗಳಿಗೆ ಅನ್ಯಾಯದ ತಪ್ಪು ವ್ಯಾಪಾರ ಅಭ್ಯಾಸವಾಗಿ ಬಿಟ್ಟಿದ್ದು, ಸರ್ಕಾರವು ಅವರಿಂದ ವಿವರಣೆಯನ್ನು ಪಡೆಯಲಿದೆ.

|

ಬಾಳೆಹಣ್ಣು ಮತ್ತು ಮೊಟ್ಟೆಗಳಂತಹ ಆಹಾರ ಪದಾರ್ಥಗಳಿಗೆ ಅತಿಯಾದ ದರವನ್ನು ವಿಧಿಸುವ ಪಂಚತಾರಾ ಹೋಟೆಲ್‌ಗಳಿಗೆ ಅನ್ಯಾಯದ ತಪ್ಪು ವ್ಯಾಪಾರ ಅಭ್ಯಾಸವಾಗಿ ಬಿಟ್ಟಿದ್ದು, ಸರ್ಕಾರವು ಅವರಿಂದ ವಿವರಣೆಯನ್ನು ಪಡೆಯಲಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಂಗಳವಾರ ಹೇಳಿದ್ದಾರೆ.
ಇನ್ಮುಂದೆ ಇಂಥಹ ಘಟನೆ ನಡೆದರೆ ಹೋಟೆಲ್ ಗಳು ಸರ್ಕಾರಕ್ಕೆ ಹೊಟೇಲ್ ಗಳು ಸ್ಪಷ್ಟೀಕರಣ ನೀಡಬೇಕಾಗುತ್ತದೆ ಎಂದಿದ್ದಾರೆ.

ಹೋಟೆಲ್ ಗಳಲ್ಲಿ ಊಟ ಮಾಡೋರಿಗೆ ಗುಡ್ ನ್ಯೂಸ್! ಸರ್ಕಾರದಿಂದ ಹೊಸ ರೂಲ್ಸ್

ಜನಸಾಮಾನ್ಯರು ದುಬಾರಿ, ಐಷಾರಾಮಿ ಹಾಗು ಪಂಚತಾರಾ ಹೋಟೆಲ್ ಗಳಲ್ಲಿ ಹೋಗುವ ಮುನ್ನ ಎರಡೆರಡು ಬಾರಿ ವಿಚಾರ ಮಾಡ್ತಾರೆ. ಉಳಿದ ಕಡೆಗಳಿಗಿಂತ ಅಲ್ಲಿ ಆಹಾರಕ್ಕೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
ಇತ್ತೀಚೆಗೆ ಎರಡು ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಎರಡು ಬಾಳೆ ಹಣ್ಣಿಗೆ ರೂ. 442 ಬಿಲ್ ಮಾಡಿರುವ ಬಗ್ಗೆ ನಟ ರಾಹುಲ್ ಬೋಸ್ ಚಂಡೀಗಡದ ಪಂಚತಾರಾ ಹೋಟೆಲ್ ಬಗ್ಗೆ ದೂರು ನೀಡಿದ್ದರು. ಇನ್ನೊಂದು ಪ್ರಕರಣದಲ್ಲಿ ಬೇಯಿಸಿದ ಎರಡು ಮೊಟ್ಟೆಗೆ 1700 ರೂಪಾಯಿ ಬಿಲ್ ಮಾಡಿರುವುದು ಕೂಡ ವರದಿಯಾಗಿತ್ತು.
ಅತ್ಯಂತ ಅಗ್ಗದ ದರದಲ್ಲಿ ಲಭ್ಯವಾಗುವ ಮೊಟ್ಟೆ ಮತ್ತು ಬಾಳೆಹಣ್ಣುಗಳಿಗೆ ಭಾರೀ ಶುಲ್ಕ ವಿಧಿಸಿರುವ ಘಟನೆಗಳನ್ನು ಪರಿಶೀಲಿಸಿರುವ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಪಂಚತಾರಾ ಹೊಟೇಲ್ ಗಳು ಬೇಕಾಬಿಟ್ಟಿ ಶುಲ್ಕ ವಿಧಿಸುವಂತಿಲ್ಲ.
ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಇಂತಹ ಪದ್ಧತಿಗಳನ್ನು ಪರಿಶೀಲಿಸಲು ಸರ್ಕಾರ ನಿಯಮಗಳನ್ನು ಮಾಡುತ್ತದೆ. ಗ್ರಾಹಕ ಸಂರಕ್ಷಣಾ ಕಾಯಿದೆಯಡಿ ಮಾಡಲಾಗುವ ಕಾನೂನಿನಲ್ಲಿ ಷರತ್ತು ವಿಧಿಸಲಾಗುವುದು ಎಂದಿದ್ದಾರೆ. ಬೇರೆ ಮಾರುಕಟ್ಟೆಯಲ್ಲಿ ಅಗ್ಗದಲ್ಲಿ ಸಿಗುವ ಆಹಾರ ಪದಾರ್ಥಗಳು ಪಂಚತಾರಾ ಹೊಟೇಲ್ ಗಳಲ್ಲಿ ಏಕೆ ದುಬಾರಿ? ಹೊಟೇಲ್ ಗಳು ಯಾಕೆ ಇಷ್ಟೊಂದು ಶುಲ್ಕ ವಿಧಿಸುತ್ತಿವೆ. ಇದನ್ನು ತಡೆಯಲು ಸರ್ಕಾರ ಕಾನೂನು ರಚಿಸಲಿದೆ ಎಂದಿದ್ದಾರೆ.

Read more about: hotel money finance news
English summary

Five-star hotels must give explanations for over price: Paswan

Five-star hotels charging exorbitant rate for food items like bananas and eggs is ‘unfair trade practice’ and the government will seek explanations from them.
Story first published: Wednesday, August 14, 2019, 15:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X