For Quick Alerts
ALLOW NOTIFICATIONS  
For Daily Alerts

ಎರಡೇ ದಿನದಲ್ಲಿ 29,000 ಕೋಟಿಯಷ್ಟು ಶ್ರೀಮಂತನಾದ ಅಂಬಾನಿ

|

ನವದೆಹಲಿ, ಆಗಸ್ಟ್ 16: ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಉದ್ಯಮಿ ಮುಕೇಶ್ ಅಂಬಾನಿ ಅವರ ಗ್ರಹಗತಿ ಮತ್ತೆ ಬದಲಾಗಿದೆ. ಸದ್ಯಕ್ಕೀಗ ಅವರು ಶುಕ್ರದೆಸೆಯಲ್ಲಿದ್ದಾರೆ. ಎರಡೇ ದಿನದಲ್ಲಿ 29 ಸಾವಿರ ಕೋಟಿ ರೂಪಾಯಿಯಷ್ಟು ಹೆಚ್ಚು ಶ್ರೀಮಂತರಾಗಿದ್ದಾರೆ.

ಸೋಮವಾರ ರಿಲಯನ್ಸ್ ಇಂಡಸ್ಟ್ರೀಸ್‌ನ 42ನೇ ವಾರ್ಷಿಕ ಸಾಮಾನ್ಯ ಸಭೆ ನಡೆದಿತ್ತು. ಆ ಸಭೆಯ ಬಳಿಕ ಮುಕೇಶ್ ಅಂಬಾನಿ ಭರ್ಜರಿ ಲಾಭದ ಒಪ್ಪಂದಗಳ ಮೂಲಕ ತಮ್ಮ ಆದಾಯವನ್ನು ಮತ್ತಷ್ಟು ಹಿಗ್ಗಿಸಿಕೊಂಡಿದ್ದಾರೆ.

"ಮೈಕ್ರೋಸಾಫ್ಟ್, ಸೌದಿ ಕಂಪನಿ ಜತೆ ರಿಲಯನ್ಸ್, 10 ಟ್ರಿಲಿಯನ್ ಗುರಿ"

ಸೌದಿ ಅರೇಬಿಯಾ ಮೂಲದ ಅರಾಮ್ಕೋ ಕಂಪೆನಿಯು ತೈಲ ಮತ್ತು ರಾಸಾಯನಿಕಗಳಿಗೆ ಸಂಬಂಧಿಸಿದಂತೆ ರಿಲಯನ್ಸ್‌ನಿಂದ ಶೇ 20ರಷ್ಟು ಷೇರುಗಳನ್ನು ಖರೀದಿಸಿದೆ. ಮುಂದಿನ 18 ತಿಂಗಳಲ್ಲಿ ರಿಲಯನ್ಸ್ ಸಂಸ್ಥೆಯನ್ನು ಸಂಪೂರ್ಣವಾಗಿ ಸಾಲದಿಂದ ಮುಕ್ತಗೊಳಿಸಲು ಅಂಬಾನಿ ಉದ್ದೇಶಿಸಿದ್ದಾರೆ.

ಶೇ 11ರಷ್ಟು ಷೇರು ಮೌಲ್ಯ ಹೆಚ್ಚಳ

ಶೇ 11ರಷ್ಟು ಷೇರು ಮೌಲ್ಯ ಹೆಚ್ಚಳ

ಮುಂದಿನ ತಿಂಗಳಲ್ಲಿ ಜಿಯೋ ಫೈಬರ್ ಪರಿಚಯಿಸುವುದಾಗಿ ಮುಕೇಶ್ ಅಂಬಾನಿ ಪ್ರಕಟಿಸಿದ್ದಾರೆ. ಇದನ್ನು ಷೇರುಪೇಟೆ ಸಂಭ್ರಮದಿಂದ ಸ್ವೀಕರಿಸಿದೆ. ಕಳೆದ ಎರಡು ದಿನಗಳಲ್ಲಿ ಷೇರು ಮೌಲ್ಯ ಶೇ 11ರಷ್ಟು ಹೆಚ್ಚಳ ಕಂಡಿದೆ. ಸೌದಿ ಅರಾಮ್ಕೋದೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಅತಿ ದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆಯ ಒಪ್ಪಂದ ಮಾಡಿಕೊಂಡಿದೆ. ಇದರಿಂದ ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಚ್ 2021ರ ವೇಳೆಗೆ ನಿವ್ವಳ ಶೂನ್ಯ ಸಾಲದ ಕಂಪೆನಿಯಾಗಲಿದೆ.

$4 ಬಿಲಿಯನ್ ಡಾಲರ್‌ ಏರಿಕೆ

$4 ಬಿಲಿಯನ್ ಡಾಲರ್‌ ಏರಿಕೆ

ಬುಧವಾರ ಸಂಜೆ 1,162 ರೂಪಾಯಿಗೆ ಕೊನೆಗೊಂಡಿದ್ದ ಕಂಪೆನಿಯ ಷೇರು ವಹಿವಾಟು ಶುಕ್ರವಾರದ ಮಾರುಕಟ್ಟೆ ಅಂತ್ಯಗೊಳ್ಳುವ ವೇಳೆಗೆ 1,288.30ಕ್ಕೆ ಏರಿತ್ತು. ಆಗಸ್ಟ್ 12ರಂದು ನಡೆದ ವಾರ್ಷಿಕ ಸಾಮಾನ್ಯಸಭೆಯ ಬಳಿಕ ಅಂಬಾನಿ ಅವರ ಆಸ್ತಿ ಮೌಲ್ಯ $4 ಬಿಲಿಯನ್ ಡಾಲರ್‌ನಷ್ಟು (28,684 ಕೋಟಿ ರೂ) ಏರಿಕೆಯಾಗಿದೆ.

ಸೆ.5; ಮುಖೇಶ್ ಅಂಬಾನಿ 'ಗಿಗಾ ಸುನಾಮಿ'ಗೆ ಮುಹೂರ್ತ ಫಿಕ್ಸ್!

ಆಸ್ತಿ ಮೌಲ್ಯ $49.9 ಬಿಲಿಯನ್

ಆಸ್ತಿ ಮೌಲ್ಯ $49.9 ಬಿಲಿಯನ್

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಅವರು 13ನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ $49.9 ಬಿಲಿಯನ್. ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್, ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರುಗಳು ಶೇ 15ರಷ್ಟು ಹೆಚ್ಚಳವಾಗಿದ್ದರಿಂದ ಇಯರ್ ಟು ಡೇಟ್ (ವೈಟಿಡಿ) ಆಧಾರದಲ್ಲಿ ಅವರು $5.57 ಬಿಲಿಯನ್ ಸಂಪಾದಿಸಿದ್ದಾರೆ.

ಉದ್ಯಮ ವಲಯದಲ್ಲಿ ಸಂಚಲನ

ಉದ್ಯಮ ವಲಯದಲ್ಲಿ ಸಂಚಲನ

ಅರಾಮ್ಕೋಗೆ ತನ್ನ ತೈಲ ಮತ್ತು ರಾಸಾಯನಿಕ ವ್ಯವಹಾರದ ಷೇರುಗಳನ್ನು ಮಾರಾಟ ಮಾಡುವ ರಿಲಯನ್ಸ್‌ನ ಘೋಷಣೆ ಸಾಕಷ್ಟು ಸಕಾರಾತ್ಮಕ ಸಂಚಲನ ಮೂಡಿಸಿದೆ ಎಂದು 'ಮೂಡಿ ಇನ್ವೆಸ್ಟರ್ಸ್ ಸರ್ವೀಸ್' ಹೇಳಿದೆ. ಮ್ಯಾಕ್ವೆರೀ ಸಂಸ್ಥೆಯು ರಿಲಯನ್ಸ್ ಇಂಡಸ್ಟ್ರೀಸ್ಅನ್ನು 'ಔಟ್‌ಪರ್ಫಾರ್ಮ್'ಗೆ ಉನ್ನತೀಕರಿಸಿದೆ. ಷೇರು ಮತ್ತು ಬಂಡವಾಳ ಹೂಡಿಕೆಯ ವಿವಿಧ ಸಂಸ್ಥೆಗಳು ರಿಲಯನ್ಸ್‌ನ ವಹಿವಾಟಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ.

ಅಂಬಾನಿ ಒಪ್ಪಂದದ ಪರಿಣಾಮ: ಭಾರತದ ತೈಲ ಪೂರೈಕೆಯಲ್ಲಿ ಮೊದಲ ಸ್ಥಾನಕ್ಕೆ ಮರಳಿದ ಸೌದಿ

English summary

Reliance Industries Mukesh Ambani Riicher By Rs 28,684 Crore In 2 Days

Asia's richest person, Reliance Industries promoter Mukesh Ambani gor richer by Rs 28,684 Crore in 2 days since the company's 42nd annual meeting on Monday.
Story first published: Friday, August 16, 2019, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X