For Quick Alerts
ALLOW NOTIFICATIONS  
For Daily Alerts

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ವೇತನ ಕೇಳಿ ಶಾಕ್ ಆಗ್ಬೇಡಿ!

ಜಗತ್ತಿನಲ್ಲಿ ಹೆಚ್ಚು ಹಣ ಗಳಿಸುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಆಟಗಾರರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಹಾಗಿದ್ದರೆ ಕ್ರಿಕೆಟ್ ಟೀಮ್ ಗಳ ಕೋಚ್ ಗಳಿಗೆ ಎಷ್ಟು ಸಂಭಾವನೆ ಇರುತ್ತದೆ?

|

ಜಗತ್ತಿನಲ್ಲಿ ಹೆಚ್ಚು ಹಣ ಗಳಿಸುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಆಟಗಾರರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಹಾಗಿದ್ದರೆ ಕ್ರಿಕೆಟ್ ಟೀಮ್ ಗಳ ಕೋಚ್ ಗಳಿಗೆ ಎಷ್ಟು ಸಂಭಾವನೆ ಇರುತ್ತದೆ? ಟೀಮ್ ಇಂಡಿಯಾ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ವೇತನ ಎಷ್ಟು? ಇಂತಹ ಪ್ರಶ್ನೆಗಳು ಕ್ರೀಡಾ ಪ್ರೇಮಿಗಳಲ್ಲಿ ಉದ್ಭವವಾಗುವುದು ಸಹಜ.
ಭಾರತ ಕ್ರಿಕೆಟ್ ಟೀಂ ಕೋಚ್ ಆಗಿ ಪುನರ್ ಆಯ್ಕೆಗೊಂಡಿರುವ ರವಿ ಶಾಸ್ತ್ರಿಯವರ ಸಂಭಾವನೆ ಎಷ್ಟಿದೆ ನೋಡೋಣ ಬನ್ನಿ.

 

ರವಿ ಶಾಸ್ತ್ರಿ ಪುನರ್ ಆಯ್ಕೆ ಚರ್ಚೆ

ರವಿ ಶಾಸ್ತ್ರಿ ಪುನರ್ ಆಯ್ಕೆ ಚರ್ಚೆ

ಟೀಂ ಇಂಡಿಯಾ ಕೋಚ್ ಆಗಿ ಎರಡನೇ ಅವಧಿಗೆ ಪುನರ್ ಆಯ್ಕೆಯಾಗಿರುವ ರವಿ ಶಾಸ್ತ್ರಿ ಅವರ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. 2ನೇ ಅವಧಿಗೆ ಟೀಂ ಇಂಡಿಯಾಗೆ ಮಾರ್ಗದರ್ಶನ ಮಾಡಲು ಸಜ್ಜಾಗಿರುವ ಶಾಸ್ತ್ರಿಗೆ ಸೌತ್ ಆಫ್ರಿಕಾ ವಿರುದ್ಧದ ಸರಣಿ ಗೆಲುವಿನಲ್ಲಿ ತಂಡವನ್ನು ಸಜ್ಜುಗೊಳಿಸಬೇಕಿದೆ. ರವಿಯವರ ಮೊದಲ ಅವಧಿಯ ಕೊನೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ.

10 ಕೋಟಿವರೆಗೆ ವೇತನ

10 ಕೋಟಿವರೆಗೆ ವೇತನ

ಭಾರತ ತಂಡದ ನೂತನ ಕೋಚ್ ಆಗಿ ಪುನರ್ ಆಯ್ಕೆಗೊಂಡಿರುವ ರವಿ ಶಾಸ್ತ್ರಿ ಅವರ ಸಂಬಳವನ್ನು ಶೇಕಡಾ 20ರಷ್ಟು ಏರಿಕೆ ಮಾಡಲಾಗಿದೆ. ಈ ಹೆಚ್ಚಳದೊಂದಿಗೆ ರವಿ ಶಾಸ್ತ್ರಿ ವಾರ್ಷಿಕವಾಗಿ ಸುಮಾರು ರೂ. 10 ಕೋಟಿವರೆಗೆ ವೇತನ ಪಡೆಯಲಿದ್ದಾರೆ.

ಹಿಂದಿನ ಅವಧಿ ವೇತನ
 

ಹಿಂದಿನ ಅವಧಿ ವೇತನ

ಹಿಂದಿನ ಅವಧಿಯಲ್ಲಿ ರವಿ ಶಾಸ್ತ್ರಿ ರೂ. 8 ಕೋಟಿ ವಾರ್ಷಿಕ ಸಂಭಾವನೆ ಪಡೆಯುತ್ತಿದ್ದರು. ಇದೀಗ ಶೇಕಡಾ ೨೦ರಷ್ಟು ಹೆಚ್ಚಳದೊಂದಿಗೆ ಸರಿಸುಮಾರು ರೂ. 9.5 ಕೋಟಿಯಿಂದ 10 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಸಪೋರ್ಟ್ ಸ್ಟಾಫ್ ವೇತನ ಕೂಡ ಹೆಚ್ಚಿಸಲಾಗಿದೆ.

ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಕೋಚ್ ವೇತನ

ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಕೋಚ್ ವೇತನ

ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿರುವ ಭರತ್ ಅರುಣ್ ಸುಮಾರು ರೂ. 3.5 ಕೋಟಿ ವಾರ್ಷಿಕ ವೇತನ ಗಳಿಸಲಿದ್ದಾರೆ. ಜೊತೆಗೆ ಫೀಲ್ಡಿಂಗ್ ಕೋಚ್ ಆಗಿರುವ ಶ್ರೀಧರ್ ರೂ. 3.5 ಕೋಟಿ ವಾರ್ಷಿಕ ವೇತನ ಗಳಿಸಲಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಸುಮಾರು ರೂ. 2.5-3 ಕೋಟಿ ವಾರ್ಷಿಕ ಸಂಭಾವನೆ ಪಡೆಯಲಿದ್ದಾರೆ.

ರವಿ ಶಾಸ್ತ್ರಿ ವೇತನ ಅಂದು ಇಂದು?

ರವಿ ಶಾಸ್ತ್ರಿ ವೇತನ ಅಂದು ಇಂದು?

ಕಪಿಲ್ ದೇವ್ ನಾಯಕತ್ದಲ್ಲಿ 1983ರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ರವಿ ಶಾಸ್ತ್ರಿ ಇದ್ದರು. ಆ ಸಂದರ್ಭದಲ್ಲಿ ರವಿಯವರು ಪ್ರತಿ ಪಂದ್ಯಕ್ಕೆ ಒಂದೂವರೆ ಸಾವಿರ ವೇತನ ಹಾಗು ಆರು ನೂರು ರೂಪಾಯಿ ಭತ್ಯೆ ಪಡೆದಿದ್ದರು. ಅಂದರೆ ಒಟ್ಟು ರೂ. 2,100 ವೇತನ ಗಳಿಸಿದ್ದರು. ಆದರೆ ಈಗ ರವಿ ಶಾಸ್ತ್ರಿಯವರು ಕೋಚ್ ಆಗಿ ಬರೋಬ್ಬರಿ ರೂ. 10 ಕೋಟಿ ವೇತನ ಪಡೆಯುತ್ತಿದ್ದಾರೆಂದರೆ ಆಶ್ಚರ್ಯವಾಗದೇ ಇರದು ಅಲ್ಲವೆ?

Read more about: money finance news salary
English summary

Ravi Shastri Set to Get a Massive Salary Hike in New Contract

Team India head coach Ravi Shastri is set to get a massive salary hike of 20% which will take his annual salary close to Rs. 9.5-10 crore, according to a report in Mumbai Mirror.
Story first published: Tuesday, September 10, 2019, 10:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X