For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ತೆರಿಗೆ ಬದಲಾವಣೆಗೆ ಕೇಂದ್ರ ನಿರ್ಧಾರ

ಜಿಎಸ್ಟಿ ಆರಂಭವಾದ ಎರಡು ವರ್ಷಗಳ ನಂತರ ಕೇಂದ್ರ ಸರ್ಕಾರವು ಜಿಎಸ್ಟಿ ಬಗ್ಗೆ ಹೆಚ್ಚಿನ ಅವಲೋಕನ ನಡೆಸಿದ್ದು, ಜಿಎಸ್ಟಿ ತೆರಿಗೆಯಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.

|

ಜಿಎಸ್ಟಿ ಆರಂಭವಾದ ಎರಡು ವರ್ಷಗಳ ನಂತರ ಕೇಂದ್ರ ಸರ್ಕಾರವು ಜಿಎಸ್ಟಿ ಬಗ್ಗೆ ಹೆಚ್ಚಿನ ಅವಲೋಕನ ನಡೆಸಿದ್ದು, ಜಿಎಸ್ಟಿ ತೆರಿಗೆಯಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.

ಜಿಎಸ್ಟಿ ತೆರಿಗೆ ಬದಲಾವಣೆಗೆ ಕೇಂದ್ರ ನಿರ್ಧಾರ

ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ 12 ಜನರ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿಯ ಮುಖ್ಯ ಉದ್ದೇಶವೆಂದರೆ, ಜಿಎಸ್ಟಿ ಸೋರಿಕೆಯನ್ನು ಪರಿಶೀಲಿಸಿ ತಡೆಯುವುದಾಗಿದೆ. ಜೊತೆಗೆ ಜಿಎಸ್ಟಿ ತೆರಿಗೆ ಶ್ರೇಣಿಯ ಬಗ್ಗೆ ಚರ್ಚೆ ನಡೆಸಲಿದೆ.
ಪ್ರಸ್ತುತ ಜಿಎಸ್ಟಿ ತೆರಿಗೆಯನ್ನು 4 ಶ್ರೇಣಿಯಾಗಿ ವಿಂಗಡಿಸಲಾಗಿದ್ದು, ಶೇಕಡಾ 5, ಶೇಕಡಾ 12, ಶೇಕಡಾ 18 ಹಾಗೂ ಶೇಕಡಾ 28 ಆಗಿದೆ. ಜಿಎಸ್ಟಿ ತೆರಿಗೆಯ ಈ ನಾಲ್ಕು ಶ್ರೇಣಿಗಳ ಬದಲಾವಣೆ ಬಗ್ಗೆ ಸಮಿತಿಯು ಚರ್ಚಿಸಲಿದೆ. ಭಾರತದಲ್ಲಿ ಆರ್ಥಿಕ ಪ್ರಗತಿ ಕುಂಠಿತವಾಗಿದ್ದು, ಭಾರತದ ಜಿಡಿಪಿ ಬೆಳವಣಿಜಿಗೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರವು ಜಿ.ಎಸ್.ಟಿ. ಯಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಸಮಸ್ಯೆಗಳಿರುವುದರಿಂದ ಜಿಎಸ್ಟಿ ಪರಿಶೀಲನಾ ಸಮಿತಿಯು ಇತರ ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಸಹಕಾರದೊಂದಿಗೆ ಕೆಲವು ಉತ್ಪನ್ನಗಳನ್ನು ಇತರ ಶ್ರೇಣಿಗಳಲ್ಲಿ ವರ್ಗಿಕರಿಸಲು ನೋಡಬಹುದು.

Read more about: gst tax income tax taxes money
English summary

Govt orders biggest review of GST since its launch

The government has begun the biggest review of GST-including a possible of resetting of rates along with a scrutiny of the slabs-to tone up collections and plug leakages.
Story first published: Friday, October 11, 2019, 9:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X