For Quick Alerts
ALLOW NOTIFICATIONS  
For Daily Alerts

4ಜಿ ಸ್ಪೆಕ್ಟ್ರಂ ಹರಾಜು: 18,699 ಕೋಟಿ ರೂಪಾಯಿಗೆ 355.45 ಮೆಗಾಹರ್ಟ್ಸ್‌ ಸ್ವಾಧೀನಪಡಿಸಿಕೊಂಡ ಭಾರ್ತಿ ಏರ್‌ಟೆಲ್

|

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್‌ ಮಾರ್ಚ್‌ 1ರಿಂದ ಆರಂಭಗೊಂಡಿರುವ ಸ್ಪೆಕ್ಟ್ರಂ ಹರಾಜಿನಲ್ಲಿ 4 ಜಿ ವೈರ್‌ಲೆಸ್ ಸೇವೆಗಾಗಿ 18,699 ಕೋಟಿ ಮೌಲ್ಯದ 355.45 ಮೆಗಾಹರ್ಟ್ಸ್‌ ಸ್ವಾಧೀನಪಡಿಸಿಕೊಂಡಿದೆ ಎಂದು ಕಂಪನಿಯು ಮಂಗಳವಾರ ಸ್ಟಾಕ್‌ ಎಕ್ಸ್‌ಚೇಂಕ್‌ ಫೈಲಿಂಗ್‌ನಲ್ಲಿ ತಿಳಿಸಿದೆ.

ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ಟೆಲ್ ಗ್ರಾಮೀಣ ಪ್ರದೇಶಗಳಲ್ಲಿ ತನ್ನ 4 ಜಿ ವ್ಯಾಪ್ತಿಯನ್ನು ಸುಧಾರಿಸಲು ಭಾರತದಾದ್ಯಂತ ಸಬ್-ಗಿಗಾಹರ್ಟ್ಸ್‌ ಸ್ಪೆಕ್ಟ್ರಮ್‌ಗಾಗಿ ಬಿಡ್‌ ಮೂಲಕ ಪಡೆದಿದೆ. ಇದರಿಂದ 90 ದಶಲಕ್ಷ ಗ್ರಾಹಕರನ್ನು ಸೇರಿಸಲು ಟೆಲಿಕಾಂ ಕಂಪನಿಗೆ ಅನುವು ಮಾಡಿಕೊಡುತ್ತದೆ ಎಂದು ಏರ್‌ಟೆಲ್‌ ತಿಳಿಸಿದೆ.

355.45 ಮೆಗಾಹರ್ಟ್ಸ್‌ ಸ್ವಾಧೀನಪಡಿಸಿಕೊಂಡ ಏರ್‌ಟೆಲ್: 18,699 ಕೋಟಿ

ಇದಲ್ಲದೆ ಕಂಪನಿಯು 1GHz ನಿಂದ ಪ್ರಾರಂಭವಾಗುವ ಮಧ್ಯ ಶ್ರೇಣಿಯಲ್ಲಿ ರೇಡಿಯೊ ಏರ್ ವೇವ್ಸ್ ಮತ್ತು 2,300MHz ಬ್ಯಾಂಡ್ ಅನ್ನು ಸಹ ಪಡೆದುಕೊಂಡಿದೆ.

ಸ್ಪೆಕ್ಟ್ರಂ ಹರಾಜು: ಇಂದಿನಿಂದ ಆರನೇ ಸುತ್ತಿನ ಬಿಡ್ಡಿಂಗ್ಸ್ಪೆಕ್ಟ್ರಂ ಹರಾಜು: ಇಂದಿನಿಂದ ಆರನೇ ಸುತ್ತಿನ ಬಿಡ್ಡಿಂಗ್

ಜೊತೆಗೆ ಈ ಹರಾಜಿನ ಮೂಲಕ, ಏರ್‌ಟೆಲ್ ತನ್ನ ಮಿಡ್-ಬ್ಯಾಂಡ್ ಸಾಮರ್ಥ್ಯದ ಸ್ಪೆಕ್ಟ್ರಮ್ ಹೋಲ್ಡಿಂಗ್‌ಗಳನ್ನು ಬಲಪಡಿಸಿದೆ. ಅಲ್ಲದೆ ಅದು ಸೇವೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ.

English summary

4G Auction: Airtel Acquires Spectrum Worth Rs 18,699 Crore

Bharti Airtel Ltd has acquired 355.45MHz of spectrum worth Rs 18,699 crore in the auction for 4G wireless service
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X