For Quick Alerts
ALLOW NOTIFICATIONS  
For Daily Alerts

ಕ್ಯಾಪಿಟಾಲ್ ಹಿಂಸಾಚಾರ ಮುನ್ನ 5 ಲಕ್ಷ USD ಗೂ ಹೆಚ್ಚು ಮೊತ್ತದ ಬಿಟ್ ಕಾಯಿನ್ ವರ್ಗಾವಣೆ

|

ಯು.ಎಸ್. ಕ್ಯಾಪಿಟಾಲ್ ನಲ್ಲಿ ಹಿಂಸಾಚಾರ ನಡೆಯುವುದಕ್ಕೂ ಮುನ್ನ 5,00,000 ಯುಎಸ್ ಡಿಗೂ ಹೆಚ್ಚಿನ ಮೌಲ್ಯದ ಬಿಟ್ ಕಾಯಿನ್ ಅನ್ನು ಇಪ್ಪತ್ತೆರಡು ವಿವಿಧ ವರ್ಚುವಲ್ ವ್ಯಾಲೆಟ್ ಗಳಿಗೆ ಪಾವತಿ ಮಾಡಲಾಗಿದೆ. ಆ ಪೈಕಿ ಬಹುತೇಕ ಕಟ್ಟರ್ ಬಲಪಂಥೀಯ ಕಾರ್ಯಕರ್ತರು ಹಾಗೂ ಇಂಟರ್ ನೆಟ್ ಪರ್ಸನಾಲಿಟಿಗೆ ಸೇರಿದಂಥವು ಎಂದು ಕ್ರಿಪ್ಟೋಕರೆನ್ಸಿಯನ್ನು ಅನುಸರಿಸುವ ಸ್ಟಾರ್ಟ್ ಅಪ್ ಚೈನಾಲಿಸಿಸ್ ಶುಕ್ರವಾರ ಹೇಳಿದೆ.

ಫ್ರೆಂಚ್ ದಾನಿಯೊಬ್ಬರು 28.15 ಬಿಟ್ ಕಾಯಿನ್ ಗಳನ್ನು ಡಿಸೆಂಬರ್ 8ನೇ ತಾರೀಕು ಪಾವತಿಸಿದ್ದಾರೆ ಎಂದು ಬ್ಲಾಗ್ ಪೋಸ್ಟ್ ನಲ್ಲಿ ಹೇಳಲಾಗಿದೆ. ಡಿಜಿಟಲ್ ಕರೆನ್ಸಿ ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಮಾಡುವುದನ್ನು ತಡೆಗಟ್ಟುವಲ್ಲಿ ನ್ಯೂಯಾರ್ಕ್ ಮೂಲದ ಚೈನಾಲಿಸಿಸ್ ವಿಶೇಷ ಪರಿಣತಿ ಪಡೆದುಕೊಂಡಿದೆ.

 

ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ..

ಈ ವಹಿವಾಟಿನ ಬಗ್ಗೆ ಮೊದಲಿಗೆ ಯಾಹೂ ನ್ಯೂಸ್ ವರದಿ ಮಾಡಿತ್ತು. ಹೆಚ್ಚಿನ ತನಿಖೆಗಾಗಿ ಡೇಟಾ ಅಂಶಗಳನ್ನು ಚೈನಾಲಿಸಿಸ್ ಜತೆ ಹಂಚಿಕೊಂಡಿತ್ತು. ಒಂದೇ ವ್ಯವಹಾರದಲ್ಲಿ ಹಲವು ಬಲಪಂಥೀಯ ಗುಂಪುಗಳಿಗೆ ದೊಡ್ಡ ಮೊತ್ತದ ಬಿಟ್ ಕಾಯಿನ್ ದೇಣಿಗೆ ಬಂದಿರುವುದಕ್ಕೆ ತನ್ನ ಬಳಿ ಸಾಕ್ಷ್ಯಗಳಿರುವುದಾಗಿ ಚೈನಾಲಿಸಿಸ್ ಹೇಳಿದೆ.

ಕ್ಯಾಪಿಟಾಲ್ ಹಿಂಸಾಚಾರ ಮುನ್ನ 5 ಲಕ್ಷ USD ಬಿಟ್ ಕಾಯಿನ್ ವರ್ಗಾವಣೆ

ತನ್ನ ದ್ವೇಷ ಭಾಷಣಗಳ ಕಾರಣಗಳಿಗಾಗಿ ಕಳೆದ ವರ್ಷ ಯೂಟ್ಯೂಬ್ ನಿಂದ ಶಾಶ್ವತವಾಗಿ ಅಮಾನತಿಗೆ ಒಳಗಾದ ನಿಕ್ ಫ್ಯುಯೆಂಟೆಸ್ 13.5 ಬಿಟ್ ಕಾಯಿನ್ ಪಡೆದಿದ್ದಾರೆ. ಅದರ ಮೌಲ್ಯ $ 2,50,000 ಆಗುತ್ತದೆ. ಬ್ಲಾಗ್ ಪೋಸ್ಟ್ ಪ್ರಕಾರ, ಅತಿ ದೊಡ್ಡ ಫಲಾನುಭವಿ ಆಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಫ್ಯುಯೆಂಟೆಸ್ ಸಂಪರ್ಕಕ್ಕೆ ಯತ್ನಿಸಿದಾಗ ಸಫಲ ಆಗಲಿಲ್ಲ ಎಂದು ತಿಳಿಸಲಾಗಿದೆ.

English summary

5 Lakh USD Worth Of Bitcoin Received By Far Right Activists Ahead Of Capitol Riot: Report

5 lakh USD worth of payment in the form of bitcoin received by some far right activists ahead of Capitaol riot, according to report.
Story first published: Friday, January 15, 2021, 17:13 [IST]
Company Search
COVID-19