For Quick Alerts
ALLOW NOTIFICATIONS  
For Daily Alerts

15 ವರ್ಷಕ್ಕಿಂತ ಕಡಿಮೆ ಅವಧಿಯ ಗೃಹ ಸಾಲಕ್ಕೆ ಗ್ರಾಹಕರ ಹೆಚ್ಚಿನ ಆದ್ಯತೆ: ಮ್ಯಾಜಿಕ್‌ಬ್ರಿಕ್ಸ್‌ ಸಮೀಕ್ಷೆ

|

ಕೋವಿಡ್-19 ಸಾಂಕ್ರಾಮಿಕದ ಬಳಿಕ ಅನೇಕ ಬ್ಯಾಂಕ್‌ಗಳು ಗೃಹಸಾಲದ ಮೇಲಿನ ಬಡ್ಡಿದರವನ್ನು ಇಳಿಸಿವೆ. ಇದರ ನಡುವೆ ಶೇಕಡಾ 51ಕ್ಕಿಂತಲೂ ಹೆಚ್ಚಿನ ಗೃಹ ಖರೀದಿದಾರರು 15 ವರ್ಷಕ್ಕಿಂತ ಕಡಿಮೆ ಅವಧಿಯ ಗೃಹಸಾಲಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಮ್ಯಾಜಿಕ್‌ಬ್ರಿಕ್ಸ್‌ ನಡೆಸಿದ ಗೃಹಸಾಲ ಗ್ರಾಹಕರ ಸಮೀಕ್ಷೆಯಿಂದ ತಿಳಿದುಬಂದಿದೆ.

 

ಸಮೀಕ್ಷೆಯಲ್ಲಿ ಭಾಗವಹಿಸಿದ 500 ಮಂದಿಯ ಅಂಕಿ-ಅಂಶಗಳನ್ನು ಆಧರಿಸಿ ಗೃಹ ಖರೀದಿದಾರರು ಅಥವಾ ಗೃಹ ಸಾಲ ಪಡೆಯುವವರು ಅತ್ಯಂತ ಆದ್ಯತೆ ನೀಡುವ ಸಾಲದ ಅವಧಿಯೆಂದರೆ 15 ವರ್ಷಕ್ಕಿಮತ ಕಡಿಮೆ ಎನ್ನುವುದು ತಿಳಿದುಬಂದಿದೆ.

 
15 ವರ್ಷಕ್ಕಿಂತ ಕಡಿಮೆ ಅವಧಿಯ ಗೃಹ ಸಾಲಕ್ಕೆ ಗ್ರಾಹಕರ ಹೆಚ್ಚಿನ ಆದ್ಯತೆ

ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 26ರಷ್ಟು ಜನರು ಈ ಅವಧಿಯ ಸಾಲಕ್ಕೆ ಹೆಚ್ಚಿನ ಒಲವು ತೋರಿದ್ದಾರೆ. ಉಳಿದಂತೆ 10 ರಿಂದ 15 ವರ್ಷಗಳ ಅವಧಿಯ ಸಾಲಕ್ಕೆ ಶೇಕಡಾ 25ರಷ್ಟು ಗೃಹ ಖರೀದಿದಾರರು ಹೆಚ್ಚಿನ ಆಸಕ್ತಿ ತೋರಿದರೆ, 15 ರಿಂದ 20 ವರ್ಷಗಳ ಅವಧಿಯ ಸಾಲಕ್ಕೆ ಶೇಕಡಾ 23ರಷ್ಟು ಜನರು ಒಲವು ತೋರಿದ್ದಾರೆ.

ಇನ್ನು ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇಕಡಾ 16ರಷ್ಟು ಮಂದಿ 25 ವರ್ಷಕ್ಕಿಂತ ಹೆಚ್ಚಿನ ಅವಧಿಯ ಸಾಲ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ 20-25 ವರ್ಷ ಅವಧಿಯ ಸಾಲವನ್ನು ಪಡೆಯಲು ಬಯಸಿರುವವರು ಶೇಕಡಾ 10ರಷ್ಟು ಮಾತ್ರ.

ಮ್ಯಾಜಿಕ್‌ಬ್ರಿಕ್ಸ್‌ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಂತೆ ಬೆಂಗಳೂರು, ಹೈದ್ರಾಬಾದ್, ದೆಹಲಿ, ಮುಂಬೈ ಮತ್ತು ಪುಣೆ ನಗರಗಳಲ್ಲಿ ಗೃಹಸಾಲಕ್ಕೆ ಅತ್ಯಧಿಕ ಬೇಡಿಕೆ ಸೃಷ್ಟಿಯಾಗಿದೆ.

ತಜ್ಞರ ಪ್ರಕಾರ ಹಲವು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಗೃಹಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿರುವುದು, ಗೃಹ ಖರೀದಿ ವಲಯದಲ್ಲಿ ಗ್ರಾಹಕರ ಆಸ್ತಿಯನ್ನು ಹೆಚ್ಚಿಸಿದೆ. ಆರ್‌ಬಿಐ ರೆಪೋದರವನ್ನು ಶೇಕಡಾ 4ರ ಮಟ್ಟದಲ್ಲಿ ಯಥಾಸ್ಥಿತಿ ಉಳಿಸಿಕೊಂಡಿದ್ದು, ಪರಿಣಾಮ ಹಲವು ಬ್ಯಾಂಕುಗು ಶೇಕಡಾ 7ಕ್ಕಿಂತ ಕಡಿಮೆ ಬಡ್ಡಿದರಲ್ಲಿ ಸಾಲವನ್ನು ನೀಡುತ್ತಿವೆ. ಇದು ಗೃಹಸಾಲ ಪಡೆಯುವ ಬೇಡಿಕೆಯನ್ನು ಹೆಚ್ಚಿಸಿದೆ.

English summary

51% of home buyers now prefer a loan period of less than 15 years: Magicbricks Consumer Poll

Around 51% of the home buyers are now preferring to have a borrowing period of less than 15 years, revealed the latest Magicbricks Home Loans Consumer Poll.
Story first published: Thursday, May 27, 2021, 13:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X