For Quick Alerts
ALLOW NOTIFICATIONS  
For Daily Alerts

ನೋಟು ನಿಷೇಧ ನಂತರ ಸಿಕ್ಕ ಖೋಟಾ ನೋಟಲ್ಲಿ 56% 2 ಸಾವಿರದ ನೋಟು

|

ಕಪ್ಪುಹಣ, ಭ್ರಷ್ಟಾಚಾರ ಮತ್ತು ಖೋಟಾ ನೋಟು ನಿರ್ಮೂಲನೆ ಉದ್ದೇಶದಿಂದ ಮಾಡಲಾದ ನೋಟು ನಿಷೇಧಕ್ಕೆ ಮೂರು ವರ್ಷ ಪೂರ್ತಿ ಆಗಿದೆ. ಆದರೆ ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ವಂಚಕರಿಗೆ ಎರಡು ಸಾವಿರ ರುಪಾಯಿಯ ನಕಲು ನೋಟು ಅಚ್ಚುಮೆಚ್ಚು ಎಂಬುದು ಗೊತ್ತಾಗುತ್ತದೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (ಎನ್ ಸಿಆರ್ ಬಿ) ದತ್ತಾಂಶದ ಪ್ರಕಾರ, ನೋಟು ನಿಷೇಧದ ನಂತರ ದೇಶದಾದ್ಯಂತ ವಶಪಡಿಸಿಕೊಂಡ ನಕಲಿ ನೋಟುಗಳಲ್ಲಿ ಶೇಕಡಾ ಐವತ್ತಾರಕ್ಕೂ ಹೆಚ್ಚು ಎರಡು ಸಾವಿರ ರುಪಾಯಿ ನೋಟುಗಳೇ. 2016 ನವೆಂಬರ್ ಮತ್ತು 2018ರ ಡಿಸೆಂಬರ್ ಮಧ್ಯೆ 46.06 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆ ಪೈಕಿ 1000 ರುಪಾಯಿ ನೋಟು ಪ್ರಮಾಣ 20.23 ಪರ್ಸೆಂಟ್, 15.02 ಪರ್ಸೆಂಟ್ ನಷ್ಟು ಹಳೇ 500 ರುಪಾಯಿ ನೋಟು, 3ರಿಂದ 7 ಪರ್ಸೆಂಟ್ ನಷ್ಟು ಹೊಸ 500 ರುಪಾಯಿ ನೋಟು ಇದ್ದವು. 2017ಕ್ಕಿಂತ 2018ರಲ್ಲಿ 2000 ರುಪಾಯಿಯ ನಕಲಿ ನೋಟು ಪ್ರಮಾಣ ಹೆಚ್ಚಾಗಿದೆ.

ನೋಟು ನಿಷೇಧ ನಂತರ ಸಿಕ್ಕ ಖೋಟಾ ನೋಟಲ್ಲಿ 56% 2 ಸಾವಿರದ ನೋಟು

2017ರಲ್ಲಿ ವಶಕ್ಕೆ ಪಡೆದ 28.10 ಕೋಟಿಯಲ್ಲಿ 53.3 ಪರ್ಸೆಂಟ್ ನಷ್ಟು 2000 ರುಪಾಯಿ ನೋಟುಗಳಿದ್ದರೆ, ಮರು ವರ್ಷ ಆ ಪ್ರಮಾಣ 61.01 ಪರ್ಸೆಂಟ್ ಗೆ ಹೆಚ್ಚಳವಾಗಿದೆ. ಇನ್ನು ಅತಿ ಹೆಚ್ಚು 2 ಸಾವಿರ ರುಪಾಯಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು ಗುಜರಾತ್ ನಲ್ಲಿ. ಅದರ ಒಟ್ಟು ಮೌಲ್ಯ 6.93 ಕೋಟಿ.

ಆ ನಂತರದ ಸ್ಥಾನ ಪಶ್ಚಿಮ ಬಂಗಾಲಕ್ಕೆ. ಅಲ್ಲಿ 3.5 ಕೋಟಿ, ತಮಿಳುನಾಡಿನಲ್ಲಿ 2.88 ಕೋಟಿ, ಉತ್ತರಪ್ರದೇಶದಲ್ಲಿ 2.68 ಕೋಟಿ ಮತ್ತು ದೆಹಲಿಯಲ್ಲಿ 1.96 ಕೋಟಿ ರುಪಾಯಿ 2 ಸಾವಿರದ ನಕಲಿ ನೋಟನ್ನು ವಶಕ್ಕೆ ಪಡೆಯಲಾಗಿದೆ. ಜಾರ್ಖಂಡ್, ಮೇಘಾಲಯ ಮತ್ತು ಸಿಕ್ಕಿಂನಲ್ಲಿ ಎರಡು ಸಾವಿರದ ಯಾವುದೇ ನಕಲಿ ನೋಟು ವಶಪಡಿಸಿಕೊಂಡಿಲ್ಲ.

English summary

56 Percent Of The Total Fake Currency Seized After Demonetisation Were 2 Thousand Notes

Data from the NCRB released this week showed that, notes of Rs 2,000 comprised of 56.31 percent of all the denominations of fake currency seized across India after demonetisation.
Story first published: Sunday, January 19, 2020, 10:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X