For Quick Alerts
ALLOW NOTIFICATIONS  
For Daily Alerts

5G in India: ಮೈಸೂರು ಸೇರಿ 11 ನಗರಗಳಲ್ಲಿ ಜಿಯೋ ಟ್ರೂ 5ಜಿ ಆರಂಭ

|

ದೇಶದಲ್ಲಿ ಈಗಾಗಲೇ 5ಜಿ ಸೇವೆಯನ್ನು ಆರಂಭ ಮಾಡಲಾಗಿದೆ. ಈಗಾಗಲೇ ಏರ್‌ಟೆಲ್ ಹಾಗೂ ರಿಲಯನ್ಸ್ ಜಿಯೋದಂತಹ ಪ್ರಮುಖ ಟೆಲಿಕಾಂ ಸಂಸ್ಥೆಗಳು 5ಜಿ ಸೇವೆ ಪ್ರಾಯೋಗಿಕ ಪ್ರಯೋಗವನ್ನು ಆರಂಭಿಸಿದೆ. ಈಗ ಮೈಸೂರು ಸೇರಿ ದೇಶದ 11 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಪ್ರಾರಂಭವಾಗಿದೆ.

ಹೌದು, ಬುಧವಾರ ಮೈಸೂರು ಸೇರಿದಂತೆ ದೇಶದ 11 ನಗರಗಳಲ್ಲಿ ರಿಲಯನ್ಸ್ ಸಂಸ್ಥೆಯು ತಮ್ಮ ಜಿಯೋ ಟ್ರೂ 5ಜಿ ಸೇವೆಯನ್ನು ಆರಂಭಿಸಿದೆ. ಲಕ್ನೋ, ತಿರುವನಂತಪುರ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಟ್ರೂ 5ಜಿ ಸೇವೆಯನ್ನು ಪಡೆಯುವ ಪ್ರಮುಖ 11 ನಗರಗಳಾಗಿದೆ.

5G on iPhones: ಐಫೋನ್‌ ಬಳಕೆದಾರರಿಗೆ 5ಜಿ ಸೇವೆ ಲಭ್ಯ, ದರ, ಇಂಟರ್‌ನೆಟ್ ವೇಗ ಇತರೆ ಮಾಹಿತಿ5G on iPhones: ಐಫೋನ್‌ ಬಳಕೆದಾರರಿಗೆ 5ಜಿ ಸೇವೆ ಲಭ್ಯ, ದರ, ಇಂಟರ್‌ನೆಟ್ ವೇಗ ಇತರೆ ಮಾಹಿತಿ

ಹಾಗೆಯೇ ರಿಲಯನ್ಸ್ ಜಿಯೋ ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿ ಪ್ರದೇಶಗಳನ್ನು ಒಳಗೊಂಡಂತೆ ತಿರುವನಂತಪುರ, ಮೈಸೂರು, ನಾಸಿಕ್, ಔರಂಗಾಬಾದ್, ಚಂಡೀಗಢ ಟ್ರೈಸಿಟಿಯಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ.

 ಎಷ್ಟು ವೆಚ್ಚ ಬೀಳಲಿದೆ?

ಎಷ್ಟು ವೆಚ್ಚ ಬೀಳಲಿದೆ?

ಬುಧವಾರದಿಂದ ಪ್ರಾರಂಭವಾಗುವ ಈ ಸೇವೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲ. 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಂ ಆಫರ್‌ ಪಡೆಯಬಹುದು. ಇನ್ನು ಈವರೆಗೆ ಯಾವುದೇ ಟೆಲಿಕಾಂ ಸಂಸ್ಥೆಗಳು 5 ಜಿ ಸೇವೆಯ ವೆಚ್ಚದ ಬಗ್ಗೆ ಇನ್ನು ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

 ಮೈಸೂರಿನಲ್ಲಿ 5ಜಿ ಸೇವೆ ಆರಂಭ

ಮೈಸೂರಿನಲ್ಲಿ 5ಜಿ ಸೇವೆ ಆರಂಭ

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, "ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದಾಗಿನಿಂದ ನಮ್ಮ ಅತಿದೊಡ್ಡ ಆರಂಭದಲ್ಲಿ ಇದು ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್‌ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ," ಎಂದು ತಿಳಿಸಿದ್ದಾರೆ.

 ರಾಜ್ಯ ಸರ್ಕಾರಗಳಲ್ಲಿ ಸಂಸ್ಥೆಯಿಂದ ಧನ್ಯವಾದ

ರಾಜ್ಯ ಸರ್ಕಾರಗಳಲ್ಲಿ ಸಂಸ್ಥೆಯಿಂದ ಧನ್ಯವಾದ

"ಈ ನಗರಗಳು ಪ್ರಮುಖ ಪ್ರವಾಸೋದ್ಯಮ ತಾಣಗಳು ಮತ್ತು ನಮ್ಮ ದೇಶದ ಪ್ರಮುಖ ಶಿಕ್ಷಣ ಕೇಂದ್ರಗಳಾಗಿವೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರೆ ಮಾತ್ರ ಅಲ್ಲ, ಆದರೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ಅಮೋಘ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತಾರೆ. ಚಂಡೀಗಢ ಆಡಳಿತ, ಪಂಜಾಬ್, ಹರ್ಯಾಣ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವುದಕ್ಕೆ ನಾವು ಕೃತಜ್ಞರಾಗಿರುತ್ತೇವೆ," ಎಂದು ವಿವರಿಸಿದ್ದಾರೆ.

 ಏನಿದು 5ಜಿ ಸೇವೆ?

ಏನಿದು 5ಜಿ ಸೇವೆ?

ದೇಶದಲ್ಲಿ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿದ್ದು, ಜಿಯೋ ಅತಿ ಹೆಚ್ಚು ಬಿಡ್‌ ಮಾಡಿದೆ. ಏರ್‌ಟೆಲ್ ಮತ್ತು ವೊಡಾಫೋನ್ ನಂತರದ ಸ್ಥಾನದಲ್ಲಿವೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ 5ಜಿ ಸ್ಪೆಕ್ಟ್ರಮ್‌ನ ಹರಾಜಿನಲ್ಲಿ ಭಾಗಿಯಾಗಿದೆ. ಅದಾದ ಬಳಿಕ 5ಜಿ ಸೇವೆಯನ್ನು ಭಾರತದಲ್ಲಿ ಅಕ್ಟೋಬರ್ 1ರಂದು ಜಾರಿಯೂ ಮಾಡಲಾಗಿದೆ. 5ಜಿಯಲ್ಲಿ 100MHz ಅತೀ ಕಡಿಮೆ ಬ್ಯಾಂಡ್ ಆಗಿದ್ದು, 2.3GHz ಮಧ್ಯಮ ಬ್ಯಾಂಡ್ ಆಗಿದೆ. ಅದಕ್ಕಿಂತ ಅಧಿಕ ಬ್ಯಾಂಡ್‌ಗಳು ಕೂಡಾ ಇದೆ. ಮಧ್ಯಮ ಬ್ಯಾಂಡ್‌ನಲ್ಲಿಯೇ ಉತ್ತಮ ನೆಟ್‌ವರ್ಕ್ ಲಭ್ಯವಾಗಲಿದೆ. 5ಜಿ ನೆಟ್‌ವರ್ಕ್ 4ಜಿ ನೆಟ್‌ವರ್ಕ್‌ಗಿಂತಲೂ ಸ್ಪೀಡ್ ಆಗಿರುತ್ತದೆ. ನೀವು ಯಾವುದೇ ಸಿನಿಮಾ, ವಿಡಿಯೋ, ಆಪ್ ಡೌನ್‌ಲೋಡ್ ಅನ್ನು ಶೀಘ್ರವಾಗಿ ಮಾಡಲು ಸಾಧ್ಯವಾಗಲಿದೆ. ಇದು ಪ್ರತಿ ಸೆಕೆಂಡಿಗೆ 10 ಜಿಬಿ (gigabyte) ವೇಗದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಭಾರತದಲ್ಲಿ ಪ್ರಸ್ತುತವಿರುವ 4ಜಿ ಡೌನ್‌ಲೋಡ್‌ ಸ್ಪೀಡ್‌ಗಿಂತ ನೂರು ಪಟ್ಟು ಅಧಿಕ ವೇಗವನ್ನು 5ಜಿ ನೆಟ್‌ವರ್ಕ್ ಹೊಂದಿರಲಿದೆ. ಪ್ರಸ್ತುತ 4ಜಿಯಲ್ಲಿ 21 Mbps (megabits per second) ವೇಗವಿದೆ ಎಂದು ಭಾರತದ ಟೆಲಿಕಾಂ ರೆಗ್ಯೂಲೇಟರ್ ಅಥಾರಿಟಿ ಹೇಳಿದೆ.

English summary

5G in India: Reliance Jio launches True 5G Services in 11 Cities Including Mysuru

5G in India: Marking the largest multi-state rollout of the services till date, Reliance Jio on Wednesday launched its True 5G services in 11 more cities, including Chandigarh, Nashik, Trivandrum, Lucknow, Mysuru and Aurangabad.
Story first published: Thursday, December 29, 2022, 9:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X