For Quick Alerts
ALLOW NOTIFICATIONS  
For Daily Alerts

1 ಕೆಜಿ ಅಣಬೆಗೆ ಒಂದೂವರೆ ಲಕ್ಷ ರುಪಾಯಿ, 1 ಕೆಜಿ ಕಾಫಿ ಪುಡಿಗೆ 85,000 ರುಪಾಯಿ

|

ದೇಶದಲ್ಲಿ ದಿನೇ ದಿನೇ ಆಹಾರ ಧಾನ್ಯಗಳ ಬೆಲೆ ಏರುತ್ತಲೇ ಹೋಗುತ್ತಿದೆ. ಇದು ನಮ್ಮ ಜೇಬಿಗೆ ಸ್ವಲ್ಪ ಹೆಚ್ಚು ಭಾರವಾಗತೊಡಗಿದೆ. ಮಾರುಕಟ್ಟೆಗೆ ಏನನ್ನೇ ಖರೀದಿಸಲು ಹೋದರು ಬೆಲೆ ಏರಿಕೆ ಬಿಸಿ ತಟ್ಟುತ್ತೆ. ಕಳೆದ ಕೆಲವು ವಾರಗಳ ಹಿಂದೆ ಈರುಳ್ಳಿ ಬೆಲೆಯು ಜನಸಾಮಾನ್ಯರನ್ನು ಕಂಗೆಡೆಸಿದ್ದು ಮರೆಯುವ ಹಾಗಿಲ್ಲ.

ಹೀಗೆ ನಾವು ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಳೇ ದುಬಾರಿಯಾದರೆ ಜೀವನ ಮಾಡುವುದು ತುಂಬಾನೆ ಕಷ್ಟ ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಈ ಲೇಖನದಲ್ಲಿ ನಿಮಗೆ ವಿಶ್ವದಲ್ಲಿ ಅತ್ಯಂತ ದುಬಾರಿ ಆಹಾರ ಪದಾರ್ಥಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆಹಾರ ಪದಾರ್ಥಗಳ ಬೆಲೆ ಎಷ್ಟು ದುಬಾರಿ ಅಂದರೆ ನೀವು ಊಹಿಸಲು ಕಷ್ಟಸಾಧ್ಯ. ವಿಶ್ವದ ಅತ್ಯಂತ ದುಬಾರಿ ಆಹಾರ ವಸ್ತುಗಳು ಈ ಕೆಳಕಂಡಂತಿದೆ.

ಇಟಲಿಯ ಬಿಳಿ ಅಣಬೆ (ವೈಟ್ ಟ್ರಫಲ್ಸ್)

ಇಟಲಿಯ ಬಿಳಿ ಅಣಬೆ (ವೈಟ್ ಟ್ರಫಲ್ಸ್)

ಉತ್ತರ ಇಟಲಿಯ ಲಂಘೆ ಪ್ರಾಂತ್ಯದ ಅಲ್ಬಾ ಪ್ರದೇಶದಲ್ಲಿ ಅಕ್ಟೋಬರ್ , ನವೆಂಬರ್‌ನಲ್ಲಿ ಮಾತ್ರ ಬೆಳೆಯುವ ವೈಟ್ ಟ್ರಫಲ್ಸ್ ನ್ನು ಬಿಳಿ ವಜ್ರ ಎಂದೇ ಕರೆಯುತ್ತಾರೆ. ಭಾರಿ ಬೇಡಿಕೆಯ ಕಾರಣ ಬೆಲೆಯೂ ದುಬಾರಿ. 

ಲೊಬೆಸ್ಟರ್ ರವಿಯೊಲಿ, ರಿಸೊಟ್ಟೊ, ಪೊರ್ಸಿನಿ, ಫೆಟ್ಟುಸಿನೆ , ಪಾಸ್ತಾ, ಸೂಪ್, ಐಸ್‌ಕ್ರೀಂಗಳಲ್ಲಿ ಈ ಅಣಬೆ ವಿಶೇಷ ರುಚಿ ಕೊಡುತ್ತದೆ. ಟ್ರಫಲ್ಸ್ ಸಹಿತ ಮತ್ತು ರಹಿತ ಆಹಾರದ ನಡುವಿನ ರುಚಿಯನ್ನು ತಕ್ಷಣ ಗುರುತಿಸಬಹುದಾಗಿದೆ. ಉಳಿದ ಅಣೆಬೆಗೆ ಹೋಲಿಸಿದರೆ ಇದರ ರುಚಿ ಬೇರೆಯೇ ಇದೆ.

ಅದ್ಭುತ ರುಚಿ ಮತ್ತು ಸುವಾಸನೆಗೆ ಹೆಸರುವಾಸಿಯಾದ ಈ ಬಿಳಿ ಟ್ರಫಲ್‌ಗಳಿಗೆ ಯುರೋಪಿನಲ್ಲಿ ಸುಮಾರು ಒಂದು ಗ್ರಾಂಗೆ 14,000 ರುಪಾಯಿ ಬೆಲೆ ಇದೆ. ಒಂದು ಕಿಲೋಗೆ ಫೆಬ್ರವರಿ 14ರ ಬೆಲೆಯ ಅನ್ವಯ 1980.07 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 1 ಲಕ್ಷದ 41 ಸಾವಿರದ 280 ರುಪಾಯಿ) ಬೆಲೆಯಿದೆ.

 

ವೈಟ್ ಪರ್ಲ್ ಅಲ್ಬಿನೋ ಕ್ಯಾವಿಯರ್ (ಅಲ್ಬಿನೋ ಮೀನಿನ ಮೊಟ್ಟೆಗಳು)

ವೈಟ್ ಪರ್ಲ್ ಅಲ್ಬಿನೋ ಕ್ಯಾವಿಯರ್ (ಅಲ್ಬಿನೋ ಮೀನಿನ ಮೊಟ್ಟೆಗಳು)

ವೈಟ್ ಪರ್ಲ್ ಅಲ್ಬಿನೋ ಕ್ಯಾವಿಯರ್ ಬಹುಶಃ ವಿಶ್ವದ ಅತ್ಯಂತ ದುಬಾರಿ ಆಹಾರ ಪದಾರ್ಥವಾಗಿದೆ. ಅಪರೂಪದ ಅಲ್ಬಿನೋ ಮೀನಿನ ಮೊಟ್ಟೆಗಳಿಂದ ತಯಾರಿಸಲ್ಪಟ್ಟ ಈ ಕ್ಯಾವಿಯರ್ ಪ್ರತಿ ಕೆಜಿಗೆ 3,00,000 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 2 ಕೋಟಿ 14 ಲಕ್ಷದ 7,865) ವೆಚ್ಚವಾಗುತ್ತದೆ. ಈ ಅಪರೂಪದ ಕ್ಯಾವಿಯರ್ ಅನ್ನು ಉತ್ಪಾದಿಸುವ ಅಲ್ಬಿನೋ ಬೆಲುಗಾ ಎಂಬ ಮೀನು ಮೂಲತಃ ಕ್ಯಾಸ್ಪಿಯನ್ ಸಮುದ್ರದಲ್ಲಿ ವಾಸಿಸುತ್ತಿತ್ತು, ಆದರೆ ಅವು ಈಗ ತಮ್ಮ ಸ್ಥಳೀಯ ಪರಿಸರದಲ್ಲಿ ಬಹುತೇಕ ಅಳಿದುಹೋಗಿವೆ.

ಸ್ವಾಲೋಸ್ ನೆಸ್ಟ್ ಸೂಪ್
 

ಸ್ವಾಲೋಸ್ ನೆಸ್ಟ್ ಸೂಪ್

ನೀವು ಯಾವತ್ತಾದ್ರೂ ಸೂಪ್‌ನಲ್ಲಿ ಪಕ್ಷಿಗಳ ಗೂಡನ್ನು ತಿಂದಿರುವ ಬಗ್ಗೆ ಕೇಳಿದ್ದೀರಾ? ಆದ್ರೆ ಚೀನಿಯರಿಗೆ ಬಹಳ ಇಷ್ಟವಾದದ್ದು ಇದಾಗಿದೆ. ಸ್ವಾಲೋ ನೆಸ್ಟ್ ಸೂಪ್ ಚೀನಿಯರಿಗೆ ಸವಿಯಾದ ಪದಾರ್ಥವಾಗಿದೆ. ಸ್ವಾಲೋಸ್‌ ಪಕ್ಷಿಗಳ ಗೂಡಿನಿಂದ ತಯಾರಿಸಿದ ಸೂಪ್ ಇದಾಗಿದೆ.

ಸ್ವಾಲೋಸ್ ಪಕ್ಷಿಗಳ ಗೂಡುಗಳನ್ನು ಸಂಪೂರ್ಣವಾಗಿ ಲಾಲಾರಸದಿಂದ ಮಾಡಲ್ಪಟ್ಟಿರುತ್ತದೆ. ಮತ್ತು ಬೇರೆ ಯಾವುದೇ ಗೂಡುಗಳಿಗಿಂತ ಭಿನ್ನವಾಗಿರುತ್ತದೆ. ಪಕ್ಷಿಗಳು ಗೂಡುಗಳನ್ನು ಸಂಗ್ರಹಿಸುವುದು ಬಹಳಷ್ಟು ರಿಸ್ಕ್‌ ಆಗಿರುವುದರಿಂದ ಇದರ ಬೆಲೆಯು ಹೆಚ್ಚಳವಾಗಿದೆ.

ಸ್ವಾಲೋಗಳು ಬಂಡೆಗಳ ಮೇಲೆ ತಮ್ಮ ಗೂಡುಗಳನ್ನು ನಿರ್ಮಿಸುತ್ತವೆ ಮತ್ತು ಅವುಗಳನ್ನು ಸಂಗ್ರಹಿಸುವುದು ಸಾಕಷ್ಟು ಅಪಾಯಕಾರಿ ಕೆಲಸವಾಗಿದ್ದು, ಬಂಡೆಯಿಂದ ಬೀಳುವ ಅಪಾಯವಿದೆ. ಹೀಗಾಗಿ ಇದಕ್ಕೆ ತುಂಬಾ ಬೆಲೆಯಿದೆ. ಈ ಆಸಕ್ತಿದಾಯಕ ಖಾದ್ಯವು ಪ್ರತಿ ಕಿಲೋಗ್ರಾಂಗೆ 3,000 ಅಮೆರಿಕನ್ ಡಾಲರ್‌(ಭಾರತದ ರುಪಾಯಿಗಳಲ್ಲಿ 2 ಲಕ್ಷದ 14 ಸಾವಿರ) ನಷ್ಟಿದೆ.

 

ಕೇಸರಿ

ಕೇಸರಿ

ವಿಶ್ವದಲ್ಲಿ ಅತ್ಯಂತ ದುಬಾರಿ ಬೆಲೆಯ ಆಹಾರ ಪದಾರ್ಥಗಳಲ್ಲಿ ಕೇಸರಿ ಕೂಡ ಒಂದು. ಏಕೆಂದರೆ ಅದು ಅತ್ಯಂತ ಶ್ರಮದಾಯ ಬೆಳೆಯಾಗಿದೆ. ಕೇಸರಿ ಕ್ರೋಕಸ್ ಅಥವಾ ಕ್ರೋಕಸ್ ಸಟಿವಾ ಹೂವುಗಳನ್ನು ಶರತ್ಕಾಲದಲ್ಲಿ ವರ್ಷದಲ್ಲಿ ಏಳು ಬಾರಿ ಬೆಳೆಯಲಾಗುತ್ತದೆ.

ಬೆಳೆದ ಹೂವುಗಳನ್ನು ಕೈಯಿಂದ ಸಂಗ್ರಹಿಸಿ ಎಚ್ಚರಿಕೆಯಿಂದ ಒಣಗಿಸಿ ಹುರಿಯಲಾಗುತ್ತದೆ. ಇದನ್ನು ಮೆಡಿಟರೇನಿಯನ್ ಮತ್ತು ಏಷ್ಯಾದಲ್ಲಿ ದೀರ್ಘಕಾಲ ಬೆಳೆಯಲಾಗುತ್ತಿದೆ. ಈ ರುಚಿಯಾದ ಮಸಾಲೆ ಪ್ರತಿ 28 ಗ್ರಾಂಗೆ ಸುಮಾರು 500 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 35,695)ನಷ್ಟಿದೆ.

 

ಮೂಸ್ ಚೀಸ್

ಮೂಸ್ ಚೀಸ್

ಇದು ನಿಜವಾಗಿಯೂ ಅಪರೂಪದ ಚೀಸ್ ಆಗಿದ್ದು ,ವಿಶ್ವದಲ್ಲಿ ಅತ್ಯಂತ ದುಬಾರಿಯಾಗಿದೆ ಮತ್ತು ಇದನ್ನು ಸ್ವೀಡನ್‌ನ ಮೂಸ್ ಹೌಸ್ ಫಾರ್ಮ್‌ನಲ್ಲಿ ಮಾತ್ರ ಉತ್ಪಾದಿಸಲಾಗುತ್ತದೆ. ಇದನ್ನು ಗುಲ್ಲನ್, ಹೆಲ್ಗಾ ಮತ್ತು ಜುನೋ ಹಾಲಿನೊಂದಿಗೆ ಮಾತ್ರ ತಯಾರಿಸಲಾಗುತ್ತದೆ.

ನಾರ್ತ್‌ ಅಮೆರಿಕಾದಲ್ಲಿ ಹೆಚ್ಚಾಗಿ ಕಂಡು ಬರುವ ಜಿಂಕೆ ಉಪಪ್ರಭೇದವಾದ ಮೂಸ್ ಜಿಂಕೆ ಕುಟುಂಬದಲ್ಲಿ ಅತಿದೊಡ್ಡ ಮತ್ತು ಭಾರವಾದ ಜಾತಿಯಾಗಿದೆ. ಪ್ರತಿ ಮೂಸ್‌ನಿಂದ ಪ್ರತಿದಿನ 5 ಲೀಟರ್ ಹಾಲು ಉತ್ಪಾದನೆಯಾಗುವುದರಿಂದ ಅದು ಮೇ ನಿಂದ - ಸೆಪ್ಟೆಂಬರ್ ವರೆಗೆ ಮಾತ್ರ, ಈ ಫಾರ್ಮ್ ಒಂದು ವರ್ಷದಲ್ಲಿ 300 ಕಿಲೋಗ್ರಾಂಗಳಷ್ಟು ಚೀಸ್ ಅನ್ನು ಮಾತ್ರ ಮಾರಾಟ ಮಾಡುತ್ತದೆ. ಮೂಸ್ ಚೀಸ್ ಪ್ರತಿ ಕಿಲೋಗ್ರಾಂಗೆ 1,074 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 76,684)ರಷ್ಟಿದೆ.

 

ಮಾಟ್ಸುಟೇಕ್ ಅಣಬೆಗಳು

ಮಾಟ್ಸುಟೇಕ್ ಅಣಬೆಗಳು

ಜಪಾನ್‌ನಲ್ಲಿ ಸಿಗುವ ಅತ್ಯಂತ ವಿಶೇಷ ಅಣಬೆಗಳಲ್ಲಿ ಮಾಟ್ಸುಟೇಕ್ ಅಪರೂಪದ ವಿಧಗಳಾಗಿವೆ. ಈ ಅಣಬೆಗಳು ಬೆಳೆಯುವ ಮಬ್ಬಾದ ಪ್ರದೇಶಗಳಲ್ಲಿ ಮರಗಳು ಮತ್ತು ಕೀಟಗಳ ಹೆಚ್ಚಳದಿಂದಾಗಿ ಅವುಗಳ ಸಂಖ್ಯೆ ಹಿಂದೆ ಕಡಿಮೆಯಾಗಿದೆ. ಈ ಅಣಬೆಗಳನ್ನು ಬೆಳೆಸಲು ಬೇರೆ ದಾರಿ ಇಲ್ಲ ಮುಂದೊಂದು ದಿನ ಇವು ಸಂಪೂರ್ಣವಾಗಿ ಕಣ್ಮರೆಯಾಗಬಹುದು.

ಈ ಅಣಬೆಗಳ ಬೆಲೆ ಪ್ರತಿ ಕಿಲೋಗ್ರಾಂಗೆ 600 ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 42,841) ರವರೆಗೆ ಇದೆ.

 

ಕೋಪಿ ಲುವಾಕ್ ಕಾಫಿ

ಕೋಪಿ ಲುವಾಕ್ ಕಾಫಿ

ವಿಶ್ವದ ಅತ್ಯಂತ ದುಬಾರಿ ಕಾಫಿ ಎಂದು ಹೆಸರುವಾಸಿಯಾದ ಕೋಪಿ ಲುವಾಕ್ ಅಥವಾ ಸಿವೆಟ್ ಕಾಫಿ ಅಸಾಮಾನ್ಯ ಉತ್ಪಾದನಾ ಪ್ರಕ್ರಿಯೆಯನ್ನು ಹೊಂದಿದೆ. ಇದನ್ನು ಕಾಫಿ ಬೀಜಗಳಿಂದ ಉತ್ಪಾದಿಸಲಾಗುತ್ತದೆ.

ಕಾಫಿ ಬೀಜಗಳನ್ನು ಪಾಮ್ ಸಿವೆಟ್ ಅಥವಾ ಸಿವೆಟ್ ಬೆಕ್ಕು ತಿನ್ನುತ್ತದೆ. ಅದರ ವಿಸರ್ಜನೆಯನ್ನು(ಮಲವನ್ನು) ಸಂಗ್ರಹಿಸಿ ಅದನ್ನು ಶುಚಿಗೊಳಿಸಿ ಕಾಫಿ ಪುಡಿ ಮಾಡಿ ಮಾರಾಟ ಮಾಡಲಾಗುತ್ತದೆ. ಈ ಅಪರೂಪದ ಕಾಫಿಗೆ ಭಾರೀ ಬೇಡಿಕೆ ಇದೆ. ಕಡಿಮೆ ಪೂರೈಕೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ, ಕೋಪಿ ಲುವಾಕ್ ಕಾಫಿಗೆ ಪ್ರತಿ ಕೆಜಿಗೆ 250 ರಿಂದ 1200 ಅಮೆರಿಕನ್ ಡಾಲರ್ ( ಭಾರತದ ರುಪಾಯಿಗಳಲ್ಲಿ 17,853 ರಿಂದ 85,698) ವರೆಗೆ ಬೆಲೆಯಿದೆ.

 

English summary

7 Most Expensive Food Items In The World

In this explained 7 most expensive food itmes in the world
Story first published: Friday, February 14, 2020, 16:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X