For Quick Alerts
ALLOW NOTIFICATIONS  
For Daily Alerts

ಡೀಸೆಲ್ ಪಂಪ್ ಬಳಕೆದಾರ ರೈತರಿಗೆ ಸೋಲಾರ್ ಪಂಪ್ ಗೆ ಶೇ 75ರಷ್ಟು ಸಬ್ಸಿಡಿ

|

ಡೀಸೆಲ್ ಪಂಪ್ ಗಳನ್ನು ಬಳಸುತ್ತಿರುವ ರೈತರು ಸೋಲಾರ್ ಗೆ ಬದಲಾಯಿಸಿಕೊಳ್ಳಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ. ರೈತರು ಕೆಲ ನಿಯಮಗಳನ್ನು ಅನುಸರಿಸಿ, ಕೃಷಿ ಮಾಡುತ್ತಿದ್ದಲ್ಲಿ ಶೇಕಡಾ 75ರಷ್ಟು ಸಬ್ಸಿಡಿ ಪಡೆಬಹುದು. ನ್ಯೂ ಆಂಡ್ ರಿನೀವಬಲ್ ಎನರ್ಜಿಯಿಂದ ಈ ಕೊಡುಗೆ ನೀಡಲು ನಿರ್ಧರಿಸಲಾಗಿದ್ದು, 3 ಎಚ್ ಪಿಯಿಂದ 10 ಎಚ್ ಪಿವರೆಗಿನ ಸೋಲಾರ್ ಪಂಪ್ ಗಳಿಗೆ ಈ ಯೋಜನೆ ಅನ್ವಯಿಸುತ್ತದೆ.

ಡೀಸೆಲ್ ಪಂಪ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಜತೆಗೆ ಗಾಳಿಯ ಗುಣಮಟ್ಟಕ್ಕೂ ತೊಂದರೆ ಆಗುತ್ತಿದೆ. ಇನ್ನೂ ಹೇಳಬೇಕೆಂದರೆ, ನಿರ್ವಹಣಾ ವೆಚ್ಚವೂ ಅಧಿಕ. ಈಗಾಗಲೇ ಕೃಷಿಯಲ್ಲಿ ಲಾಭದ ಪ್ರಮಾಣ ಕಡಿಮೆ ಎಂದು ಚಿಂತಿಸುತ್ತಿರುವ ರೈತರಿಗೆ ಡೀಸೆಲ್ ಪಂಪ್ ಗಳಿಂದ ಮತ್ತೂ ಒತ್ತಡ ಆಗುತ್ತದೆ ಎಂಬ ಅಂಶ ಆಡಳಿತದ ಗಮನಕ್ಕೆ ಬಂದಿದೆ.

ಕೇಂದ್ರ ಬಜೆಟ್ 2019: ಷೇರುದಾರರಿಗೆ ಖುಷಿ ನೀಡಿದ ರೈತ ಪರ ಘೋಷಣೆಕೇಂದ್ರ ಬಜೆಟ್ 2019: ಷೇರುದಾರರಿಗೆ ಖುಷಿ ನೀಡಿದ ರೈತ ಪರ ಘೋಷಣೆ

ಪರಿಸರಕ್ಕೆ ಪೂರಕವಾದ ವಿಧಾನ ಅನಸರಿಸುವುದನ್ನು ಪ್ರೋತ್ಸಾಹಿಸುವ ಸಲುವಾಗಿ 3 ಎಚ್ ಪಿ, 5 ಎಚ್ ಪಿ, 7.5 ಎಚ್ ಪಿ ಹಾಗೂ 10 ಎಚ್ ಪಿ ಸಾಮರ್ಥ್ಯದ ಸೋಲಾರ್ ಪಂಪ್ ಗಳನ್ನು ಶೇಕಡಾ 75ರಷ್ಟು ಸಬ್ಸಿಡಿ ಸಹಿತ ನೀಡಲಾಗುತ್ತದೆ.

ಡೀಸೆಲ್ ಪಂಪ್ ಬಳಕೆದಾರ ರೈತರಿಗೆ ಸೋಲಾರ್ ಪಂಪ್ ಗೆ ಶೇ 75 ಸಬ್ಸಿಡಿ

ರೈತರು ಕಡ್ಡಾಯವಾಗಿ ಕೃಷಿ ಹೊಂಡ ಹೊಂದಿರಬೇಕು. ಜತೆಗೆ ಸಣ್ಣ ಅಥವಾ ಹನಿ ನೀರಾವರಿ ಪದ್ಧತಿ ಅನುಸರಿಸುತ್ತಿರಬೇಕು. ಅಂಥವರಿಗೆ ಈ ಸಬ್ಸಿಡಿ ದೊರೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಲ್ಲಿ ಸೋಲಾರ್ ಪಂಪ್ ಗಳನ್ನು ಡ್ರಾ ಮೂಲಕ ವಿತರಿಸಲಾಗುತ್ತದೆ. ರೈತರು ಈ ಸಬ್ಸಿಡಿಗಾಗಿ ಅರ್ಜಿಯನ್ನು ಯಾವುದಾದರೂ ಸರಳ್ ಕೇಂದ್ರ ಅಥವಾ ಅಟಲ್ ಸೇವಾ ಕೇಂದ್ರದಲ್ಲಿ ಸಲ್ಲಿಸಬಹುದು.

Read more about: agriculture subsidy ಕೃಷಿ
English summary

75 Percent Subsidy By Government To Solar Farm Pumps

Government will provide 75 percent subsidy for solar farm pump for farmers who are using diesel pumps. Here is the details.
Story first published: Monday, November 4, 2019, 14:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X