For Quick Alerts
ALLOW NOTIFICATIONS  
For Daily Alerts

GST ಅಡಿಯಲ್ಲಿ ಬಂದಿತೇ ಪೆಟ್ರೋಲ್ ಮತ್ತು ಡೀಸೆಲ್ ?

By ರಂಗಸ್ವಾಮಿ ಮೂಕನಹಳ್ಳಿ
|

ಕೋವಿಡ್ ಜಗತ್ತಿಗೆ ಅಪ್ಪಳಿಸಿದ ನಂತರ ಬಹಳಷ್ಟು ಬದಲಾವಣೆಗಳು ಆಗಿವೆ. ಅವುಗಳಲ್ಲಿ ಪ್ರಮುಖವಾಗಿ ಮೀಟಿಂಗ್ ನಿಂದ , ಶಿಕ್ಷಣ ಎಲ್ಲವೂ ಆನ್ಲೈನ್ ಆಗಿರುವುದು. ಇವತ್ತಿನ ವಿಶೇಷ ಸುದ್ದಿ ಏನು ಗೊತ್ತ ? ಹೆಚ್ಚು ಕಡಿಮೆ ಎರಡು ವರ್ಷದ ನಂತರ ಜಿಎಸ್‌ಟಿ ಕೌನ್ಸಿಲ್ ಸದಸ್ಯರು ಇಂದು ಮತ್ತೆ ಮುಖಾಮುಖಿ ಭೇಟಿಯಾಗಿ ಸಭೆಯನ್ನ ಸೇರಲಿದ್ದಾರೆ. ಇವತ್ತಿನ ಸಭೆಯಲ್ಲಿ ಪ್ರಮುಖವಾಗಿ ತೈಲವನ್ನ ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನ ಜಿಎಸ್‌ಟಿ ತೆರಿಗೆಯ ಅಡಿಯಲ್ಲಿ ತರುವುದರ ಬಗ್ಗೆ ಚರ್ಚೆಯಾಗಲಿದೆ.

 

ಸತತ 12ನೇ ದಿನ ಪೆಟ್ರೋಲ್, ಡೀಸೆಲ್ ದರ ಬದಲಾಗಿಲ್ಲ: ಸೆ. 17ರ ರೇಟ್ ಇಲ್ಲಿದೆಸತತ 12ನೇ ದಿನ ಪೆಟ್ರೋಲ್, ಡೀಸೆಲ್ ದರ ಬದಲಾಗಿಲ್ಲ: ಸೆ. 17ರ ರೇಟ್ ಇಲ್ಲಿದೆ

ಹಲವಾರು ಸಮೀಕ್ಷೆಗಳು ಹೇಳುವ ಪ್ರಕಾರ 77 ಪ್ರತಿಶತ ಭಾರತೀಯರು ತೈಲವನ್ನ ಜಿಎಸ್‌ಟಿ ಅಡಿಯಲ್ಲಿ ತರುವುದು ಒಳ್ಳೆಯದು ಎಂದಿದ್ದಾರೆ. ತೈಲದ ಬೆಲೆ ಕಳೆದ ಒಂದು ವರ್ಷದಿಂದ ಏರುಗತಿಯಲ್ಲಿದೆ. ಜನ ಸಾಮಾನ್ಯ ತೈಲ ಬೆಲೆಯಿಂದ ಕೆಂಗೆಟ್ಟಿರುವುದು ಕೂಡ ಎಲ್ಲರಿಗೂ ತಿಳಿದ ವಿಷಯ. ತೈಲ ಬೆಲೆಯ ಹೆಚ್ಚಳದಿಂದ ಬೇರೆ ಎಲ್ಲಾ ಸೇವೆ ಮತ್ತು ಸರಕುಗಳ ಬೆಲೆ ಕೂಡ ಹೆಚ್ಚಾಗಿದೆ. ಕೇಂದ್ರ ಸರಕಾರ ಮಾತ್ರ ಏನೇ ಆಗಲಿ ತೈಲದ ಮೇಲೆ ಯಾವುದೇ ರೀತಿಯ ಸಬ್ಸಿಡಿಯನ್ನ ನೀಡುವುದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈಗ ತೈಲದ ಬೆಲೆ ಇಳಿಕೆಯಾಗ ಬೇಕಾದರೆ ಉಳಿದಿರುವ ಒಂದೇ ಪರಿಹಾರ ಅದನ್ನ ಜಿಎಸ್‌ಟಿ ಅಡಿಯಲ್ಲಿ ತರುವುದು.

 
GST ಅಡಿಯಲ್ಲಿ ಬಂದಿತೇ ಪೆಟ್ರೋಲ್ ಮತ್ತು ಡೀಸೆಲ್ ?

ಹೀಗೆ ತೈಲವನ್ನ ಕೂಡ ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ವ್ಯಾಟ್ , ಅಬಕಾರಿ ಸುಂಕ ನಿಗದಿತ ಜಿಎಸ್‌ಟಿ ಸುಂಕ ಮಾತ್ರ ಉಳಿದುಕೊಳ್ಳುತ್ತದೆ . ಈ ರೀತಿ ಮಾಡುವುದರಿಂದ ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ 25 ರಿಂದ 30 ರೂಪಾಯಿ ಕುಸಿತವಾಗುತ್ತದೆ . ಇದು ಜನ ಸಾಮಾನ್ಯರಿಗೆ ಬಹಳ ಅನುಕೂಲವಾಗುತ್ತದೆ. ಆದರೆ ರಾಜ್ಯ ಸರಕಾರಗಳಿಗೆ ಸಿಗುತ್ತಿದ್ದ ತೆರಿಗೆ ಹಣ ನಿಂತು ಹೋಗುತ್ತದೆ . ಇದರಿಂದ ರಾಜ್ಯ ಸರಕಾರಗಳು ಕೇಂದ್ರದ ಈ ನಿಲುವನ್ನ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ . ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಮಾತುಕತೆಯಿಂದ ಮಾತ್ರ ಈ ಒಂದು ನಿರ್ಧಾರಕ್ಕೆ ಬರಬಹುದು. ಇವತ್ತಿನ ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್ ಫಲಿತಾಂಶ ಏನಾಗುತ್ತದೆ ಎನ್ನುವುದನ್ನ ಸ್ವಲ್ಪ ಕಾದು ತಿಳಿದುಕೊಳ್ಳೋಣ.

English summary

77% of Indians want petrol and diesel under GST: reveals survey

77% Indians want the government to bring petrol and diesel under the GST system, a survey conducted by LocalCircles revealed on Friday. Know more.
Story first published: Friday, September 17, 2021, 16:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X