For Quick Alerts
ALLOW NOTIFICATIONS  
For Daily Alerts

7th Pay Commission : ಕೇಂದ್ರ ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?

7ನೇ ವೇತನ ಆಯೋಗದ ನಿಯಮಗಳನ್ನು ಬದಲಿಸಿ 8ನೇ ವೇತನ ಆಯೋಗವನ್ನು ಜಾರಿಗೆ ತರಬೇಕು ಎಂಬ ಬೇಡಿಕೆ ಇದೆ. ಈ ಸಂಬಂಧ ಫೆ.1ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ಘೋಷಣೆ ಬಗ್ಗೆ ಕಾತರರಾದ ಕೇಂದ್ರ ಸರ್ಕಾರಿ ನೌಕರರು.

|

ಬೆಂಗಳೂರು, ಜನವರಿ 29: 7ನೇ ವೇತನ ಆಯೋಗದ ನಿಯಮಗಳನ್ನು ಬದಲಿಸಿ 8ನೇ ವೇತನ ಆಯೋಗವನ್ನು ಜಾರಿಗೆ ತರಬೇಕು ಎಂಬ ಬೇಡಿಕೆ ಹಲವು ದಿನಗಳಿಂದಲೂ ಕೇಳಿ ಬರುತ್ತಲೇ ಇದೆ. ಈ ಬಗ್ಗೆ ವಿತ್ತ ಸಚಿವರು ಸಿಹಿ ಸುದ್ದಿ ನೀಡುತ್ತಾರೆ ಎಂದು ನೌಕರರು ಕಾಯುತ್ತಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೇ ಫೆಬ್ರವರಿ 1 ರಂದು ಪ್ರಸ್ತಕ 2023-24ನೇ ಸಾಲಿನಗೆ ಆಯವ್ಯಯ (Union Budget 2023) ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿದ್ದಾರೆ. ಎಂಟನೇ ಆಯೋಗ ಸಂಬಂಧ ದೊಡ್ಡ ಸುದ್ದಿ ಕೇಳುವ ನಿರೀಕ್ಷೆಯಲ್ಲಿದ್ದಾರೆ.

ಸರ್ಕಾರಿ ನೌಕರರು ಷೇರುಪೇಟೆ ವಹಿವಾಟು ನಡೆಸುವಂತಿಲ್ಲವಾ? ಸರ್ಕಾರಿ ನೌಕರರು ಷೇರುಪೇಟೆ ವಹಿವಾಟು ನಡೆಸುವಂತಿಲ್ಲವಾ?

ಈಗಿರುವ ಹಾಲಿ 7ನೇ ವೇತನ ಆಯೋಗದ ನಿಯಮಗಳನ್ನು ಬದಲಿಸಿ ನಂತರ 8ನೇ ವೇತನ ಆಯೋಗವನ್ನು ಜಾರಿಗೆ ತರಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಹಲವು ಮನವಿಗಳು ಕೇಂದ್ರಕ್ಕೆ ಸಲ್ಲಿಕೆಯಾಗಿವೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ನಲ್ಲಿ ಕೇಂದ್ರವು 8 ನೇ ವೇತನ ಆಯೋಗದ ಆಗಮನವನ್ನು ಘೋಷಿಸಬಹುದು ಎಂದು ನೌಕರರಲ್ಲಿ ಗುಸು ಗುಸು ಮಾತುಗಳು ಹೆಚ್ಚಾಗಿದೆ.

7th Pay Commission: 8ನೇ ವೇತನ ಆಯೋಗ ಘೋಷಣೆ ಕೇಳ್ತಾರಾ ನೌಕರರು

ದಶಕಕ್ಕೊಮ್ಮೆ ಆಯೋಗದ ನಿಮಯ ಅಪ್‌ಗ್ರೇಡ್

ಬಜೆಟ್ ಮಂಡನೆ ವೇಳೆ ವಿತ್ತ ಸಚಿವರಿಂದ ಇಂಥದ್ದೊಂದು ಬೃಹತ್ ಘೋಷಣೆಯ ನಿರೀಕ್ಷೆಯಲ್ಲಿ ಕೇಂದ್ರ ನೌಕರರು ಇದ್ದಾರೆ. ಇದಕ್ಕೆ ಕಾರಣ ಏನೆಂದರೆ ಪ್ರತಿ 10 ವರ್ಷಕ್ಕೊಮ್ಮೆ ವೇತನ ಆಯೋಗದ ನಿಯಮಗಳನ್ನು ಅಪ್‌ಗ್ರೇಡ್ ಮಾಡಲಾಗುತ್ತದೆ. ಹಾಲಿ ವೇತನ ಆಯೋಗ 2014ರಲ್ಲಿ ಫೆಬ್ರುವರಿ 04 ರಲ್ಲಿ ಘೋಷಣೆ ಆಗಿತ್ತು. ಹೀಗಾಗಿ ಈಗ ನೌಕರರು ನಿಯಮ ಬದಲಾವಣೆಯ ಘೋಷಣೆಯಲ್ಲಿದ್ದಾರೆ ಎನ್ನಲಾಗಿದೆ.

ಎಂಟನೇ ವೇತನ ಆಯೋಗ ಘೋಷಣೆಯಾದರೆ ಕೇಂದ್ರೀಯ ನೌಕರರ ವೇತನದಲ್ಲಿ ಗಣನೀಯ ಹೆಚ್ಚಳವನ್ನು ತರುತ್ತದೆ, ಕಡಿಮೆ ಮಟ್ಟದ ವೇತನ ಶ್ರೇಣಿಯಿಂದ ಅತ್ಯುನ್ನತ ಮಟ್ಟಕ್ಕೆ ಏರುತ್ತದೆ. ಹೊಸ ವೇತನ ಆಯೋಗಕ್ಕೆ ತೆರಳುವುದರಿಂದ ನೌಕರರ ಮೂಲ ವೇತನ, ವೇತನ ಶ್ರೇಣಿ ಮತ್ತು ತುಟ್ಟಿ ಭತ್ಯೆ ಇನ್ನಿತರ ಅಂಶಗಳು ಹೆಚ್ಚಳವಾಗುತ್ತವೆ. ನೌಕರರು ಭವಿಷ್ಯದಲ್ಲಿ ಹೆಚ್ಚಿದ ಫಿಟ್‌ಮೆಂಟ್ ಅಂಶ ಹೆಚ್ಚಾಗುತ್ತದೆ.

7th Pay Commission: 8ನೇ ವೇತನ ಆಯೋಗ ಘೋಷಣೆ ಕೇಳ್ತಾರಾ ನೌಕರರು

ಈಗಾಗಲೇ ಕೇಂದ್ರ ಘೋಷಿಸಿದ್ದ 5, 6 ಮತ್ತು 7 ನೇ ವೇತನ ಪ್ರಕಟಣೆಗಳನ್ನು ಗಮನಿಸಿದರೆ, ಹತ್ತು ವರ್ಷಕ್ಕೆ ನಿಯಮ ಅಪ್ಡೇಟ್ ಮಾಡಲಾಗುತ್ತದೆ. ಅದರಂತೆ 2023 ರಲ್ಲಿ 8ನೇ ವೇತನ ಆಯೋಗ ಘೋಷಣೆ ಮಾಡಿ 2026ರ ಹೊತ್ತಿಗೆ ಅದರ ಶಿಫಾರಸುಗಳನ್ನು ಜಾರಿಗೆ ತರುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ದೇಶಕ್ಕೆ ಉತ್ತರ ಸಿಗಲಿದೆ.

English summary

7th Pay Commission: Central Maybe Announce 8th Pay commission in Budget 2023, details inside

7th Pay Commission: Employees will expect Central Maybe Announce 8th Pay commission in Budget 2023 on February 1st, details inside.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X