For Quick Alerts
ALLOW NOTIFICATIONS  
For Daily Alerts

ಈ ವೃದ್ದೆಗೆ ತಿಂಗಳಿಗೆ 14 ಸಾವಿರ ಆದಾಯ; ಸ್ವಿಸ್ ಬ್ಯಾಂಕ್‌ಲಿ 196 ಕೋಟಿ ರು ಉಳಿತಾಯ!

|

ಈ ವೃದ್ದೆ ತಿಂಗಳಿಗೆ ಕೇವಲ 14 ಸಾವಿರ ರುಪಾಯಿ ಆದಾಯ ಗಳಿಸುತ್ತಾಳೆ. ಇದನ್ನು ಸ್ವತಃ ಅವಳೇ ಆದಾಯ ತೆರಿಗೆ ಇಲಾಖೆ ಬಳಿ ಘೋಷಿಸಿಕೊಂಡಿದ್ದಾಳೆ. ಆದರೆ ಈ ವೃದ್ದೆಯ ಬಳಿ ಹಣ ಇರುವುದನ್ನು ನೋಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ತಲೆ ತಿರುಗಿ ಬಿದ್ದಿದ್ದಾರೆ.

ಹೌದು ಇದೊಂದು ವಿಶೇಷ ಪ್ರಕರಣ. ವೃದ್ದೆಯೊಬ್ಬಳು ತೆರಿಗೆ ವಂಚಿಸಲು ಮಾಡಿದ ನಾಟಕ ಈಗ ಬಟಾಬಯಲಾಗಿದೆ. ಮುಂಬೈ ಮೂಲದ ವೃದ್ದೆಯೊಬ್ಬಳು ತಾನು ಬೆಂಗಳೂರಿನವಳು ಎಂದು ಬರೋಬ್ಬರಿ 196 ಕೋಟಿ ರುಪಾಯಿ ಆದಾಯಕ್ಕೆ ತೆರಿಗೆ ವಂಚನೆ ಮಾಡಿ ಸಿಕ್ಕಿ ಬಿದ್ದಿದ್ದಾಳೆ.

ಸಂಬಳದ ಜತೆಗೊಂದು ಹೆಚ್ಚುವರಿ ಆದಾಯ ದಾರಿ; ಭವಿಷ್ಯದ ಚಿಂತೆ ಮರೆಯಿರಿ!ಸಂಬಳದ ಜತೆಗೊಂದು ಹೆಚ್ಚುವರಿ ಆದಾಯ ದಾರಿ; ಭವಿಷ್ಯದ ಚಿಂತೆ ಮರೆಯಿರಿ!

ಇದೀಗ ಸಿಕ್ಕಿ ಬಿದ್ದಿರುವ ವೃದ್ದೆಯ ಅಘೋಷಿತ ಹಣಕ್ಕೆ ದಂಡ ಮತ್ತು ತೆರಿಗೆ ಪಾವತಿಸುವಂತೆ ಮುಂಬೈನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಆದೇಶ ಮಾಡಿದೆ.

ಪ್ರಕರಣ ಏನು?

ಪ್ರಕರಣ ಏನು?

ಮುಂಬೈ ಮೂಲದ ರೇಣು ಥರಾಣಿ ಎಂಬ 55 ವರ್ಷದ ಮಹಿಳೆ ತಾನು ಅನಿವಾಸಿ ಭಾರತೀಯ ಮಹಿಳೆ ಎಂದು ಹೇಳಿ ತಿಂಗಳಿಗೆ ನನಗೆ 14 ಸಾವಿರ ಆದಾಯ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಳು. ಅಂದರೆ ವರ್ಷಕ್ಕೆ 1.68 ಲಕ್ಷ ಆದಾಯ ಘೋಷಣೆ ಮಾಡಿಕೊಂಡಿದ್ದಳು.

ರೇಣು ಥರಾಣಿ ಫ್ಯಾಮಿಲಿ ಟ್ರಸ್ಟ್

ರೇಣು ಥರಾಣಿ ಫ್ಯಾಮಿಲಿ ಟ್ರಸ್ಟ್

ವೃದ್ದೆ 2004 ರಲ್ಲಿ ಸ್ವೀಸ್ ಬ್ಯಾಂಕ್‌ನ ಜಿನೆವಾ ಶಾಖೆಯಲ್ಲಿ ರೇಣು ಥರಾಣಿ ಫ್ಯಾಮಿಲಿ ಟ್ರಸ್ಟ್ ಎಂಬ ಹೆಸರಿನಲ್ಲಿ ಖಾತೆಯೊಂದನ್ನು ತೆರೆಯಲಾಗಿತ್ತು. ಈ ಖಾತೆಗೆ ಏಕಾಏಕಿ ತೆರಿಗೆ ವಂಚಕರ ಸ್ವರ್ಗವಾದ ಕೇಮನ್ ಐಲ್ಯಾಂಡ್‌ನ ಜಿಡಬ್ಲೂ ಇನ್ವೆಸ್ಟಮೆಂಟ್ ಕಂಪನಿಯಿಂದ 196 ಕೋಟಿ ರುಪಾಯಿ ವರ್ಗಾಯಿಸಲಾಗಿತ್ತು. ಆದರೆ ರೇಣು, 2006 ರಲ್ಲಿ ಸಲ್ಲಿಸಲಾಗಿದ್ದ ಆದಾಯ ಮಾಹಿತಿಯಲ್ಲಿ ಸ್ವಿಸ್ ಖಾತೆಯ ಮಾಹಿತಿಯನ್ನು ನೀಡಿರಲಿಲ್ಲ. ಕೇವಲ 1.68 ಲಕ್ಷ ಆದಾಯ ಘೋಷಣೆ ಮಾಡಿಕೊಂಡಿದ್ದರು.

ವಿದೇಶದಲ್ಲಿನ ಆದಾಯಕ್ಕೆ ಭಾರತದಲ್ಲಿ ತೆರಿಗೆ ಕಟ್ಟಲು ಆಗುವುದಿಲ್ಲ

ವಿದೇಶದಲ್ಲಿನ ಆದಾಯಕ್ಕೆ ಭಾರತದಲ್ಲಿ ತೆರಿಗೆ ಕಟ್ಟಲು ಆಗುವುದಿಲ್ಲ

ಆದಾಯ ತೆರಿಗೆ ಇಲಾಖೆಗೆ ರೇಣು ಅವರ ಸ್ವಿಸ್ ಬ್ಯಾಂಕ್ ಖಾತೆಯ ಮಾಹಿತಿ ಸಿಕ್ಕ ನಂತರ 2014 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದಕ್ಕೆ ಉತ್ತರಿಸಿದ್ದ ರೇಣು, ತಾವು ಸ್ವಿಸ್ ಬ್ಯಾಂಕ್‌ನಲ್ಲಿ ಯಾವುದೇ ಖಾತೆ ಹೊಂದಿಲ್ಲ ಎಂದಿದ್ದರು. ಜೊತೆಗೆ ತಾವು ಟ್ಯಾಕ್ಸ ರೆಸಿಡೆಂಟ್ ಆಫ್ ಇಂಡಿಯಾ ಆಗಿರುವ ಕಾರಣ ವಿದೇಶದಲ್ಲಿನ ಆದಾಯಕ್ಕೆ ಭಾರತದಲ್ಲಿ ತೆರಿಗೆ ಕಟ್ಟಲು ಆಗುವುದಿಲ್ಲ ಎಂದಿದ್ದರು.

ತೆರಿಗೆ ಮತ್ತು ದಂಡ ಕಟ್ಟಬೇಕು

ತೆರಿಗೆ ಮತ್ತು ದಂಡ ಕಟ್ಟಬೇಕು

ಈ ಪ್ರಕರಣ ಮುಂಬೈನ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮೇಟ್ಟಲು ಏರಿತ್ತು. ವಿಚಾರಣೆ ನಡೆಸಿದ ನ್ಯಾಯಾಧಿಕರಣ ರೇಣು ಅವರ ಸ್ವೀಸ್ ಬ್ಯಾಂಕ್ ಖಾತೆಗೆ ಸೀಮಿತ ಅವಧಿಯಲ್ಲಿ 196 ಕೋಟಿ ರುಪಾಯಿ ಹಣ ಹರಿದು ಬರಲು ಯಾವುದೇ ಸಾದ್ಯತೆ ಇಲ್ಲ. ಅವರೇ ಘೋಷಿಸಿಕೊಂಡ ಆದಾಯದ ಪ್ರಕಾರ ಅಷ್ಟು ಹಣ ಹರಿದು ಬರಬೇಕಾದರೆ ನೂರಾರು ವರ್ಷಗಳು ಬೇಕು. ಇನ್ನು ಯಾವುದೋ ಸಂಸ್ಥೆಯೊಂದು ಇವರ ಖಾತೆಗೆ ಹಣ ಹಾಕಲು ಇವರೇನು ಮದರ್ ತೇರೆಸಾ ತರಹ ಅಲ್ಲ. ಮೇಲಾಗಿ ಕೇಮನ್ ಐಲ್ಯಾಂಡ್ ಬ್ಯಾಂಕ್ ಪಾರದರ್ಶಕತೆಗೆ ಹೆಸರಾಗಿಲ್ಲ. ಹೀಗಾಗಿ ರೇಣು ಅವರು ತೆರಿಗೆ ಮತ್ತು ದಂಡ ಕಟ್ಟಬೇಕು ಎಂದು ಆದೇಶ ನೀಡಿದೆ.

English summary

A 55 Year Old Women Have 196 Crore Rupees In Swiss Bank Who Declared The Monthly Income Rs 14K

A 55 Year Old Women Have 196 Crore Rupees In Swiss Bank Who Declared The Monthly Income Rs 14K
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X