For Quick Alerts
ALLOW NOTIFICATIONS  
For Daily Alerts

ಆಧಾರ್‌ ಹ್ಯಾಕಥಾನ್ 2021: ಬಹುಮಾನ ಗೆಲ್ಲಲು ನಿಮಗಿದೆ ಅವಕಾಶ, ರಿಜಿಸ್ಟರ್‌ ಮಾಡುವುದು ಹೇಗೆ?

|

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) "ಆಧಾರ್‌ ಹ್ಯಾಕಥಾನ್ 2021" ನಡೆಸಲು ಎಲ್ಲಾ ಸಿದ್ದತೆಯನ್ನು ಈಗಾಗಲೇ ಮಾಡಿಕೊಂಡಿದೆ. ಹಾಗಿರುವಾಗ ನೀವು ಕೂಡಾ ಈ ಆಧಾರ್‌ ಹ್ಯಾಕಥಾನ್ 2021 ರ ಮೂಲಕ ಬಹುಮಾನ ಗೆಲ್ಲಲು ಸಿದ್ದರಾಗಿ.

ಆಧಾರ್‌ ಹ್ಯಾಕಥಾನ್ 2021 ನ ಮೂಲಕ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಇನ್ನೂ ವಿವಿಧ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಹಾಗೂ ನೈಜ ಜಗತ್ತಿಗೆ ಕಾಲಿಡಲು ಉತ್ಸುಕರಾಗಿರುವ ಯುವ ಮನಸ್ಸುಗಳನ್ನು ತಲುಪುವ ಗುರಿಯನ್ನು ಹೊಂದಿದೆ.

ಗಮನಿಸಿ: ಆಧಾರ್‌ ಅಪ್‌ಡೇಟ್‌, ವೇರಿಫಿಕೇಶನ್‌ಗೆ ಯಾವ ದಾಖಲೆ ಬೇಕು?ಗಮನಿಸಿ: ಆಧಾರ್‌ ಅಪ್‌ಡೇಟ್‌, ವೇರಿಫಿಕೇಶನ್‌ಗೆ ಯಾವ ದಾಖಲೆ ಬೇಕು?

ಅಕ್ಟೋಬರ್‌ 28, 2021 ರಂದು ಯುಐಡಿಎಐ ಈ "ಆಧಾರ್‌ ಹ್ಯಾಕಥಾನ್ 2021" ಅನ್ನು ನಡೆಸಲು ನಿರ್ಧಾರ ಮಾಡಿದ್ದು ಇದು ಅಕ್ಟೋಬರ್‌ 31 ರವರೆಗೆ ಇರಲಿದೆ ಎಂದು ಐಟಿ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

 ಆಧಾರ್‌ ಹ್ಯಾಕಥಾನ್ 2021: ಬಹುಮಾನ ಗೆಲ್ಲಲು ನಿಮಗಿದೆ ಅವಕಾಶ

"ಆಧಾರ್‌ ಹ್ಯಾಕಥಾನ್ 2021" ಅನ್ನು ಎರಡು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಮೊದಲ ವಿಷಯ "ದಾಖಲಾತಿ ಮತ್ತು ನವೀಕರಣ" ಕ್ಕೆ ಸಂಬಂಧಿಸಿದ್ದು ಆಗಿದೆ. ಇದು ಜನರು ತಮ್ಮ ವಿಳಾಸವನ್ನು ನವೀಕರಿಸುವಾಗ ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಒಳಗೊಂಡಿದೆ.

ಇನ್ನು ಎರಡನೇ ವಿಷಯವು ಯುಐಡಿಎಐ ನೀಡುವ "ಗುರುತು ಮತ್ತು ದೃಢೀಕರಣ" ಕ್ಕೆ ಸಂಬಂಧಿಸಿದ್ದು ಆಗಿದೆ. ಈ ವಿಷಯದ ಅಡಿಯಲ್ಲಿ ಯುಐಡಿಎಐ ಆಧಾರ್ ಸಂಖ್ಯೆ ಅಥವಾ ಯಾವುದೇ ಜನಸಂಖ್ಯಾ ಮಾಹಿತಿಯನ್ನು ಹಂಚಿಕೊಳ್ಳದೆ ಗುರುತನ್ನು ಸಾಬೀತುಪಡಿಸಲು ವಿನೂತನ ಪರಿಹಾರವನ್ನು ಕೇಳಿದೆ.

ನಿಮ್ಮ ಆಧಾರ್‌ ಮೂಲಕ ಎಷ್ಟು ಸಿಮ್‌ ಖರೀದಿ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?ನಿಮ್ಮ ಆಧಾರ್‌ ಮೂಲಕ ಎಷ್ಟು ಸಿಮ್‌ ಖರೀದಿ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?

ಅಲ್ಲದೆ, ಯುಐಡಿಎಐಯು ಯುಐಡಿಎಐ ಹೊಸದಾಗಿ ಪ್ರಾರಂಭಿಸಿದ ದೃಢೀಕರಣ ವಿಧಾನ ಫೇಸ್‌ ಅಥಾಂಟಿಕೇಷನ್‌ ಎಪಿಐಗಾಗಿ ಹೊಸ ಅಪ್ಲಿಕೇಶನ್‌ ಅನ್ನು ಬಯಸಿದೆ. ಜನರ ಅಗತ್ಯಗಳನ್ನು ಪರಿಹರಿಸಲು ಅಸ್ತಿತ್ವದಲ್ಲಿರುವ ಮತ್ತು ಹೊಸ ಎಪಿಐಗಳನ್ನು ಜನಪ್ರಿಯಗೊಳಿಸುವುದು ಇದರ ಉದ್ದೇಶವಾಗಿದೆ.

"ಆಧಾರ್‌ ಹ್ಯಾಕಥಾನ್ 2021": ಆನ್‌ಲೈನ್‌ ರಿಜಿಸ್ಟರ್‌ ಮಾಡುವುದು ಹೇಗೆ?

* ಆಧಾರ್‌ ಹ್ಯಾಕಥಾನ್ 2021 ನಲ್ಲಿ ರಿಜಿಸ್ಟರ್‌ ಮಾಡಲು ನೀವು ಮೊದಲು https://hackathon.uidai.gov.in/register-team ಗೆ ಭೇಟಿ ನೀಡಬೇಕು.
* ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿದ ಮಾನ್ಯ ಆಧಾರ್ ಹೊಂದಿರುವ ತಂಡವನ್ನು ಮಾತ್ರ ರಚಿಸಬಹುದು
* ಆಧಾರ್‌ ನಂಬರ್‌, ನಿಮ್ಮ ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಹೆಸರು, ತಂಡದ ಹೆಸರು, ಕಾಪ್ಚವನ್ನು ನೀವು ನಮೂದಿಸಬೇಕು
* ಪ್ರತಿ ಥೀಮ್‌ಗೂ ರಿವಾರ್ಡ್ ದೊರೆಯಲಿದೆ. ಮೊದಲ ಬಹುಮಾನ 3,00,000 ರೂಪಾಯಿ, ಎರಡನೇ ಬಹುಮಾನ 2,00,000 ರೂಪಾಯಿ ಹಾಗೂ ಮೂರನೇ ಬಹುಮಾನ 1,00,000 ಆಗಿದೆ.
* ವಿಜೇತ ತಂಡದ ಸದಸ್ಯರಿಗೆ ಆಧಾರ್‌ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯುವ ಸಾಧ್ಯತೆ ಇದೆ.
* ಆಧಾರ್ 2.0 ಅಡಿಯಲ್ಲಿ ಮುಂದಿನ ಪೀಳಿಗೆಯ ಗುರುತು ಮತ್ತು ದೃಢೀಕರಣ ವೇದಿಕೆ ರಚಿಸಲು ಆಧಾರ್‌ ಜೊತೆ ಕೈ ಜೋಡಿಸಲು ಅವಕಾಶ

ಇಷ್ಟು ಮಾತ್ರವಲ್ಲದೇ ವಿಜೇತ ತಂಡದ ಸದಸ್ಯರು ಆಧಾರ್ 2.0 ನಲ್ಲಿ ಮೊದಲ ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನವನ್ನು ಪಡೆಯುತ್ತಾರೆ. . ಎಲ್ಲಾ ತಂಡಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತವೆ.

ಇನ್ನು ಇತ್ತೀಚೆಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಒಂದು ದೊಡ್ಡ ಅಪ್‌ಡೇಟ್ ನೀಡಿದೆ. ನಿಮ್ಮ ಆಧಾರ್ ಕಾರ್ಡ್ ಕಳೆದುಕೊಂಡರೆ ಈಗ ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಯುಐಡಿಎಐ ಈಗ ಆನ್‌ಲೈನ್‌ನಲ್ಲಿ ಆಧಾರ್ ಡೌನ್‌ಲೋಡ್ ಮಾಡುವುದನ್ನು ತುಂಬಾ ಸುಲಭ ಮಾಡಿದೆ. ನೀವು ಆಧಾರ್ ಕಾರ್ಡ್ ಅನ್ನು ಎಲ್ಲಿಂದಲಾದರೂ ಡೌನ್‌ಲೋಡ್ ಮಾಡಬಹುದಾದ ನೇರ ಲಿಂಕ್ ಅನ್ನು ಸಹ ಹಂಚಿಕೊಂಡಿದೆ. ಆಧಾರ್ ಕಾರ್ಡ್(Aadhaar card) ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವ ನೇರ ಲಿಂಕ್ ಅನ್ನು ಹಂಚಿಕೊಂಡ UIDAI, 'https://eaadhaar.uidai.gov.in ನಿಂದ ಎಲ್ಲಿಂದಲಾದರೂ ನಿಮ್ಮ ಆಧಾರ್ ಅನ್ನು ಡೌನ್‌ಲೋಡ್ ಮಾಡಿ . ನೀವು ನಿಯಮಿತವಾಗಿ(Regular Basis) ಡೌನ್‌ಲೋಡ್ ಮಾಡಲು ಆಯ್ಕೆ ಮಾಡಬಹುದು' ಎಂದು ಹೇಳಿದೆ.

English summary

Aadhaar Hackathon 2021: You Can Win Prize, How to Register

Aadhaar Hackathon 2021: You Can Win Prize, How to Register.
Story first published: Tuesday, October 19, 2021, 22:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X