For Quick Alerts
ALLOW NOTIFICATIONS  
For Daily Alerts

'ಸದ್ಯದಲ್ಲಿ ಜಾರಿಗೆ ಬರಲಿದೆ ಆಧಾರ್- ಆಸ್ತಿ ಜೋಡಣೆ ಕಡ್ಡಾಯ ನಿಯಮ'

|

ಕಳೆದ ಎರಡು- ಮೂರು ವರ್ಷದಿಂದ ಈ ಸುದ್ದಿ ಹರಿದಾಡುತ್ತಲೇ ಇದೆ. ಆಸ್ತಿಯನ್ನು ಆಧಾರ್ ಜತೆಗೆ ಜೋಡಣೆ ಮಾಡುವ ಆಲೋಚನೆ ಸರ್ಕಾರಕ್ಕೆ ಇದೆ ಇದೆ ಇದೆ ಎಂಬ ಸುದ್ದಿಯು ಹೀಗೆ ಬಂದು ಹಾಗೆ ಹೋಗುತ್ತಿದೆ. ಆದರೆ ಈ ಬಾರಿ ಆ ಧ್ವನಿ ಮತ್ತೂ ಜೋರಾಗಿ ಕೇಳಿಬರುತ್ತಿದೆ. ಕಪ್ಪು ಹಣ ತಡೆಗೆ ಪ್ರಮುಖ ಕ್ರಮ ಎಂದುಕೊಂಡಿರುವ ಈ ಆಸ್ತಿ- ಆಧಾರ್ ಜೋಡಣೆಯು ಸದ್ಯದಲ್ಲೇ ಜಾರಿಗೆ ಬರಲಿದೆ ಎಂಬ ಮಾತು ಚಾಲ್ತಿಗೆ ಬಂದಿದೆ.

ಮೂರು ವರ್ಷದ ಹಿಂದೆ ಅಪನಗದೀಕರಣ ನಿರ್ಧಾರ ಘೋಷಣೆಯಾದ ಮೇಲೆ ಚಾಲ್ತಿಗೆ ಬಂದ ಆಧಾರ್ ಜೋಡಣೆ ಪ್ರಸ್ತಾಪವು ಅಕ್ರಮ ಹಣ ವರ್ಗಾವಣೆ ತಡೆಯುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ, ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗುತ್ತದೆ ಎಂಬುದು ಯೋಜನೆಯ ಹಿಂದಿನ ಲೆಕ್ಕಾಚಾರ.

ಆಸ್ತಿ ದಾಖಲೆಗಳೊಂದಿಗೆ ಆಧಾರ್ ಲಿಂಕ್ಆಸ್ತಿ ದಾಖಲೆಗಳೊಂದಿಗೆ ಆಧಾರ್ ಲಿಂಕ್

ಅಪನಗದೀಕರಣದ ಪರಿಣಾಮವಾಗಿ ಕಪ್ಪು ಹಣಕ್ಕೆ ಕಡಿವಾಣ ಬಿತ್ತು. ಅದರ ಬೆನ್ನಿಗೇ ರಿಯಲ್ ಎಸ್ಟೇಟ್ ವ್ಯವಹಾರಗಳು ಇಳಿಜಾರಿನ ಹಾದಿಯಲ್ಲಿ ಸಾಗಿದವು. ಆಸ್ತಿ ಬೆಲೆಯಲ್ಲಿ ಗಣನೀಯ ಇಳಿಕೆಯಾಯಿತು. ಸದ್ಯದ ಆರ್ಥಿಕ ಹಿಂಜರಿತಕ್ಕೆ ಇದು ಕೂಡ ಒಂದು ಕಾರಣ ಎಂಬುದು ಬಹಿರಂಗ ಸತ್ಯ.

'ಸದ್ಯದಲ್ಲಿ ಜಾರಿಗೆ ಬರಲಿದೆ ಆಧಾರ್- ಆಸ್ತಿ ಜೋಡಣೆ ಕಡ್ಡಾಯ ನಿಯಮ'

ಯಾವಾಗ ಆಸ್ತಿಗಳ ಬೆಲೆಯೇ ಕಡಿಮೆ ಆಗಿಹೋಯಿತೋ ಕಪ್ಪು ಹಣದ ಚಲಾವಣೆಗೆ ತಡೆ ಬಿತ್ತು. ಜತೆಗೆ ಆಸ್ತಿ ಖರೀದಿ ಎಂಬುದು ಜನಸಾಮಾನ್ಯರ ಕೈಗೆಟುಕುವಂತಾಯಿತು. ಇನ್ನೈದು ವರ್ಷದಲ್ಲಿ 'ಎಲ್ಲರಿಗೂ ಸೂರು' ಒದಗಿಸಬೇಕು ಎಂಬ ಸರ್ಕಾರದ ಪ್ರಯತ್ನಕ್ಕೆ ಪೂರಕವಾದ ಸನ್ನಿವೇಶವಂತೂ ಸೃಷ್ಟಿ ಆಗುತ್ತದೆ.

ಆಧಾರ್ ಜತೆಗೆ ಆಸ್ತಿ ಜೋಡಣೆ ಎಂಬ ಕಾನೂನು ತರುವ ನಿಟ್ಟಿನಲ್ಲಿ ಸರ್ಕಾರ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬುದು ಸದ್ಯಕ್ಕೆ ಬಂದಿರುವ ವರದಿ. ಈ ಆಲೋಚನೆ ವಾಸ್ತವದಲ್ಲಿ ಜಾರಿಗೆ ಬಂದರೆ 'ಬೇನಾಮಿ' ವ್ಯವಹಾರಗಳು ಸಂಪೂರ್ಣ ನಿಂತುಹೋಗಿ, ಪಾರದರ್ಶಕತೆ ಬರುತ್ತದೆ. ಜತೆಗೆ ಆಸ್ತಿಗಳು ಸರಿಯಾದ ಬೆಲೆಯಲ್ಲಿ ಜನರಿಗೆ ದೊರೆಯುತ್ತದೆ ಎಂಬುದು ಭರವಸೆಯಾಗಿದೆ.

ಇನ್ನು ಈ ರೀತಿ ಆಧಾರ್- ಆಸ್ತಿ ಜೋಡಣೆ ಆಗುವುದರಿಂದ ಆಸ್ತಿ ಖರೀದಿ- ಮಾರಾಟ, ಗೃಹ ಸಾಲ ಪಡೆಯುವುದು ಇತ್ಯಾದಿ ವ್ಯವಹಾರಗಳು ಸಹ ಸಲೀಸಾಗುತ್ತವೆ. ಆಸ್ತಿಯ ಮಾಲೀಕತ್ವದ ಬಗ್ಗೆ ಆತಂಕಗೊಳ್ಳುವ ಅಗತ್ಯ ಇರುವುದಿಲ್ಲ. ಹೂಡಿಕೆ ಮಾಡಬೇಕು ಎಂದು ಬಯಸುವವರಿಗೆ ಸುರಕ್ಷತೆಯ ಭಾವವನ್ನು ನೀಡುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

English summary

Aadhaar- Property Link Will Be Reality Soon: Sources

Union government may soon announce Aadhaar- property mandatory, says sources.
Story first published: Sunday, November 17, 2019, 10:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X